‘ಹೇರಾ ಫೇರಿ 3’ಯಿಂದ ಮತ್ತೆ ಹೊರಬಂದ ಪರೇಶ್ ರಾವಲ್: ಕಾರಣ?
Hera Pheri 3: ‘ಹೇರಾ ಫೇರಿ 3’ ಸಿನಿಮಾ ಘೋಷಣೆ ಮಾಡಿದಾಗಿನಿಂದಲೂ ಸುದ್ದಿಯಲ್ಲಿದೆ. ಸಿನಿಮಾದ ಪ್ರಮುಖ ಪಾತ್ರಧಾರಿ ಪರೇಶ್ ರಾವಲ್ ಅವರು ಪದೇ ಪದೇ ಸಿನಿಮಾದ ಬಗ್ಗೆ ಸಹನಟರ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದುತ್ತಿದ್ದು, ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಾರಿ ತಾವು ಪಡೆದ ಸಂಭಾವನೆಯ 15% ಹೆಚ್ಚುವರಿ ಹಣವನ್ನು ನಿರ್ಮಾಪಕರಿಗೆ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ.

‘ಹೇರಾ ಫೇರಿ 3’ ಸಿನಿಮಾ (Cinema) ಘೋಷಣೆ ಮಾಡಿದಾಗಿನಿಂದಲೂ ಸುದ್ದಿಯಲ್ಲಿದೆ. ಹಿಂದಿ ಚಿತ್ರರಂಗದ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹೇರಾ ಪೇರಿ’ಯ ಮೂರನೇ ಸೀಸನ್ ಭಾಗ ಬರಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು, ಆದರೆ ಸಿನಿಮಾದ ಪ್ರಮುಖ ಪಾತ್ರಧಾರಿ ಪರೇಶ್ ರಾವಲ್ ಅವರು ಪದೇ ಪದೇ ಸಿನಿಮಾದ ಬಗ್ಗೆ ಸಹನಟರ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದುತ್ತಿದ್ದು, ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಈ ಬಾರಿ ತಾವು ಪಡೆದ ಸಂಭಾವನೆಯ 15% ಹೆಚ್ಚುವರಿ ಹಣವನ್ನು ನಿರ್ಮಾಪಕರಿಗೆ ನೀಡಿ ಸಿನಿಮಾದಿಂದ ಹೊರ ನಡೆದಿದ್ದಾರೆ.
ಸಿನಿಮಾ ಆರಂಭವಾದಾಗ ಪರೇಶ್ ರಾವಲ್ ತಾವು ಸಿನಿಮಾನಲ್ಲಿ ನಟಿಸುವುದಿಲ್ಲ ಎಂದರು. ಆದರೆ ಸಿನಿಮಾದ ನಾಯಕ ಮತ್ತು ನಿರ್ಮಾಪಕರೂ ಆಗಿರುವ ಅಕ್ಷಯ್ ಕುಮಾರ್, ಮನವೊಲಿಸಿದ ಬಳಿಕ ಪರೇಶ್ ರಾವಲ್ ಒಪ್ಪಿಕೊಂಡಿದ್ದರು. ಆದರೆ ಈಗ ಮತ್ತೆ ಪರೇಶ್ ರಾವಲ್ ಹೊರ ಬಂದಿದ್ದು, ಚಿತ್ರಕ್ಕಾಗಿ ಪಡೆದಿದ್ದ ಮುಂಗಡ 11 ಲಕ್ಷವನ್ನು ಶೇ. 15 ರಷ್ಟು ವಾರ್ಷಿಕ ಬಡ್ಡಿ ಮತ್ತು ಹೆಚ್ಚುವರಿ ಪರಿಹಾರದೊಂದಿಗೆ ನಿರ್ಮಾಪಕರಿಗೆ ಹಿಂತಿರುಗಿಸಿದ್ದಾರೆ.
ಚಿತ್ರರಂಗದ ಆಪ್ತ ಮೂಲಗಳ ಪ್ರಕಾರ, ‘ಹೇರಾ ಫೇರಿ 3 ಚಿತ್ರಕ್ಕಾಗಿ ಪರೇಶ್ ರಾವಲ್ ಅವರ ಒಟ್ಟು ಸಂಭಾವನೆಯನ್ನು 15 ಕೋಟಿಗೆ ನಿಗದಿಪಡಿಸಲಾಗಿತ್ತು. ಆದರೆ, ಅಗ್ರಿಮೆಂಟ್ ಷರತ್ತಿನ ಪ್ರಕಾರ ಅವರಿಗೆ ಕೇವಲ 11 ಲಕ್ಷ ಮುಂಗಡ ನೀಡಿ, ಬಾಕಿ ಉಳಿದ 14.89 ಕೋಟಿ ರೂಪಾಯಿಗಳನ್ನು ಸಿನಿಮಾ ಬಿಡುಗಡೆಯಾದ ಒಂದು ತಿಂಗಳ ನಂತರ ನೀಡುವುದಾಗಿ ತಿಳಿಸಲಾಗಿತ್ತು. ಈ ವಿಲಕ್ಷಣ ಷರತ್ತಿನ ಬಗ್ಗೆ ಹಿರಿಯ ನಟ ಪರೇಶ್ ರಾವಲ್ ಅವರಿಗೆ ತೀವ್ರ ಆಕ್ಷೇಪವಿತ್ತು’ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?
ಚಿತ್ರದ ಮುಖ್ಯ ಶೂಟಿಂಗ್ ಮುಂದಿನ ವರ್ಷವಷ್ಟೇ (2027) ಆರಂಭವಾಗಲು ನಿರ್ಧರಿಸಲಾಗಿದೆ. ಇದರರ್ಥ ‘ಹೇರಾ ಫೇರಿ 3’ ಸಿನಿಮಾ 2027 ರ ಕೊನೆಯ ಭಾಗದಲ್ಲಿ ಅಥವಾ 2028 ರಲ್ಲಷ್ಟೇ ತೆರೆಗೆ ಬರುವ ಸಾಧ್ಯತೆಯಿದೆ. ಸಂಭಾವನೆಯ ನಿಯಮಗಳ ಪ್ರಕಾರ, ಪರೇಶ್ ರಾವಲ್ ಅವರು ತಮ್ಮ ಬಾಕಿ ಹಣವನ್ನು ಪಡೆಯಲು ಕನಿಷ್ಠ ಎರಡು ವರ್ಷಗಳ ಕಾಲ ಕಾಯಬೇಕಾಗುತ್ತಿತ್ತು. ಈ ಸುದೀರ್ಘ ಕಾಯುವಿಕೆಗೆ ಒಪ್ಪದ ನಟ, ಪ್ರಾಜೆಕ್ಟ್‌ನಿಂದ ಹೊರಬರಲು ನಿರ್ಧರಿಸಿದರು. ಆದಾಗ್ಯೂ, ಈ ವರದಿಗಳ ಬಗ್ಗೆ ನಟನ ಕಡೆಯಿಂದಾಗಲಿ ಅಥವಾ ಚಿತ್ರತಂಡದಿಂದಾಗಲಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.
ಇದು ಈ ಚಿತ್ರಕ್ಕೆ ಎದುರಾಗುತ್ತಿರುವ ಮೊದಲ ಸಮಸ್ಯೆಯಲ್ಲ. ಕಳೆದ ವರ್ಷವೂ ಪರೇಶ್ ರಾವಲ್ ಹೇರಾ ಪೇರಿ 3 ಚಿತ್ರದಿಂದ ಹೊರನಡೆದಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆಗ ಅಕ್ಷಯ್ ಕುಮಾರ್ ಅವರ ಪ್ರೊಡಕ್ಷನ್ ಬ್ಯಾನರ್ ‘ಕೇಪ್ ಆಫ್ ಗುಡ್ ಫಿಲ್ಮ್ಸ್’, ಹಠಾತ್ ಎಕ್ಸಿಟ್‌ನಿಂದಾಗಿ ತಮಗೆ ನಷ್ಟವಾಗಿದೆ ಎಂದು ಆರೋಪಿಸಿ ಪರೇಶ್ ರಾವಲ್ ವಿರುದ್ಧ 25 ಕೋಟಿ ನಷ್ಟ ಪರಿಹಾರ ಕೇಳಿ ಕಾನೂನು ನೋಟಿಸ್ ಜಾರಿ ಮಾಡಿತ್ತು. ತದನಂತರ ಉಭಯ ನಟರು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಂಡಿದ್ದರು ಮತ್ತು ಅಕ್ಷಯ್ ಕೇಸ್ ವಾಪಸ್ ಪಡೆದಿದ್ದರು. ಇತ್ತೀಚೆಗಷ್ಟೇ ಅಕ್ಷಯ್, ಪ್ರಿಯದರ್ಶನ್ ಮತ್ತು ಪರೇಶ್ ರಾವಲ್ ಜೊತೆಯಾಗಿ ‘ಭೂತ್ ಬಂಗ್ಲಾ’ ಚಿತ್ರದಲ್ಲಿ ನಟಿಸುತ್ತಿರುವುದರಿಂದ ‘ಹೇರಾ ಫೇರಿ 3’ ಗೊಂದಲಗಳೂ ಮುಗಿದಿವೆ ಎನ್ನಲಾಗಿತ್ತು, ಆದರೆ ಈಗ ಮತ್ತೆ ಹೊಸ ಸಮಸ್ಯೆ ಉದ್ಭವಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





