Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ರಾಜ್​ಕುಮಾರ್​ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗೇನು ಮಾಡುತ್ತಿದ್ದಾರೆ ಗೊತ್ತಾ?

ಪಾರ್ವತಿ ಮೆನನ್ ಅವರಿಗೆ ಇಂದು ಜನ್ಮದಿನ.‘ಮಿಲನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಅವರು, "ಮಳೆ ಬರಲಿ ಮಂಜು ಇರಲಿ" ಮತ್ತು "ಪೃಥ್ವಿ" ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರಗಳಿಂದ ದೂರ ಉಳಿದಿರುವ ಅವರು, ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಪುನೀತ್​ ರಾಜ್​ಕುಮಾರ್​ ಸಿನಿಮಾ ‘ಮಿಲನ’ ಸುಂದರಿ ಪಾರ್ವತಿ ಮೆನನ್ ಈಗೇನು ಮಾಡುತ್ತಿದ್ದಾರೆ ಗೊತ್ತಾ?
ಪಾರ್ವತಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 07, 2025 | 8:41 AM

ಪಾರ್ವತಿ ಮೆನನ್ (Parvathy Menen) ಅವರಿಗೆ ಇಂದು (ಆಗಸ್ಟ್ 7) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಾ ಇದೆ. ಅವರು ಮೂಲತಃ ಕೇರಳದ ಕೋಳಿಕ್ಕೋಡ್​ನವರು. ಅವರು ಜನಿಸಿದ್ದು 1988ರಲ್ಲಿ. ಅಂದರೆ ಈಗ ಅವರಿಗೆ 37 ವರ್ಷ. ಪಾರ್ವತಿ ಮೆನನ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಈಗ ಕನ್ನಡದಲ್ಲಿ ಅವರು ನಟಿಸುತ್ತಾ ಇಲ್ಲ. ಅವರು ಏನು ಮಾಡುತ್ತಿದ್ದಾರೆ? ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ ವಿವರ.

ಪಾರ್ವತಿ ಮೆನನ್ ಅವರು 2006ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಕೆಲವು ಮಲಯಾಳಂ ಸಿನಿಮಾ ಮಾಡಿದರು. 2007ರಲ್ಲಿ ರಿಲೀಸ್ ಆದ ಪುನೀತ್ ರಾಜ್​ಕುಮಾರ್ ನಟನೆಯ ‘ಮಿಲನ’ ಸಿನಿಮಾ ಅವರ ಬದುಕನ್ನೇ ಬದಾಯಿಸಿತು ಎಂದೇ ಹೇಳಬಹುದು. ಈ ಸಿನಿಮಾ ಹಿಟ್ ಆಯಿತು. ಇದರಿಂದ ಪಾರ್ವತಿ ಅವರಿಗೆ ಹೊಸ ಹೊಸ ಆಫರ್​ಗಳು ಬಂದವು.

ಪಾರ್ವತಿ ಮೆನನ್ ಆ ಬಳಿಕ ಕನ್ನಡಿಗರಿಗೆ ಸಾಕಷ್ಟು ಇಷ್ಟ ಆದರು. ‘ಮಳೆ ಬರಲಿ ಮಂಜು ಇರಲಿ’ ಹೆಸರಿನ ಸಿನಿಮಾ ಮಾಡಿದರು. ಅವರು ಹಾಗೂ ಪುನೀತ್ ನಟಿಸಿದ ಮತ್ತೊಂದು ಸಿನಿಮಾ ‘ಪೃಥ್ವಿ’ ಕೂಡ ಯಶಸ್ಸು ಕಂಡಿತು. ಗಣಿಗಾರಿಕೆಯಲ್ಲಿ ನಡೆಯವ ಅಕ್ರಮಗಳ ಬಗ್ಗೆ ಸಿನಿಮಾದಲ್ಲಿ ಹೇಳಲಾಯಿತು. 2013ರ ‘ಅಂದರ್ ಬಾಹರ್’ ಅವರು ನಟಿಸಿದ ಕೊನೆಯ ಸಿನಿಮಾ. ಆ ಬಳಿಕ ಪಾರ್ವತಿ ಅವರು ಮಲಯಾಳಂನಲ್ಲೇ ಬ್ಯುಸಿ ಆದರು. ಕಳೆದ 12 ವರ್ಷಗಳಿಂದ ಅವರು ಕನ್ನಡ ಚಿತ್ರರಂಗದತ್ತ ಮುಖ ಮಾಡಿಲ್ಲ.

ಇದನ್ನೂ ಓದಿ
Image
ರಿಯಾಲಿಟಿ ಶೋಗಳಲ್ಲಿ ಡಬಲ್ ಮೀನಿಂಗ್ ಡೈಲಾಗ್; ರವಿಚಂದ್ರನ್ ಬೇಸರ
Image
ಗಲ್ರಾನಿಗೆ ವಂಚನೆ ಮಾಡಿದವನಿಗೆ 61 ಲಕ್ಷ ದಂಡ, 6 ತಿಂಗಳು ಜೈಲು ಶಿಕ್ಷೆ
Image
ಫೋಟೋದಿಂದ ಬಯಲಾಯ್ತು ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಡುವಿನ ಗುಟ್ಟು
Image
ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ

ಇದನ್ನೂ ಓದಿ: ‘ನಮ್ಮ ಮಧ್ಯೆ ಎಲ್ಲವೂ ಸರಿ ಇದೆ’; ವದಂತಿಗಳಿಗೆ ಪಾರ್ವತಿ ಮೆನನ್ ಸ್ಪಷ್ಟನೆ

ಪಾರ್ವತಿ ಮೆನನ್ ಅವರು 2014ರ ‘ಬೆಂಗಳೂರು ಡೇಸ್’ ಚಿತ್ರದಲ್ಲಿ ಆರ್​ಜೆ ಸಾರಾ ಆಗಿ ನಟಿಸಿದರು. 2015ರ ‘ಚಾರ್ಲಿ’ ಚಿತ್ರ ಕೂಡ ಸೂಪರ್ ಹಿಟ್ ಆಯಿತು. 2014ರಲ್ಲಿ ರಿಲೀಸ್ ಆದ ‘ಹರ್’ ಅವರ ನಟನೆಯ ಕೊನೆಯ ಸಿನಿಮಾ. ಇದಾದ ಬಳಿಕ ಅವರ ನಟನೆಯ ಯಾವುದೇ ಚಿತ್ರವೂ ತೆರೆಗೆ ಬಂದಿಲ್ಲ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಮದುವೆ ಬಗ್ಗೆಯೂ ಅವರು ಅಷ್ಟು ಆಸಕ್ತಿ ಹೊಂದಿದಂತೆ ಕಾಣುತ್ತಾ ಇಲ್ಲ.

ಮಿಲನಾ ಸಿನಿಮಾ ಬಗ್ಗೆ

ಮಿಲನಾ ಚಿತ್ರಕ್ಕೆ ಪ್ರಕಾಶ್ ನಿರ್ದೇಶನ ಮಾಡಿದ್ದರು. ಪುನೀತ್ ರಾಜ್​ಕುಮಾರ್, ಪಾರ್ವತಿ ಮೆನನ್ ಮೊದಲಾದವರು ನಟಿಸಿದ್ದರು. 2007ರ ಸೆಪ್ಟೆಂಬರ್ 14ರಂದು ಚಿತ್ರ ರಿಲೀಸ್ ಆಯಿತು. ನಿರ್ದೇಶಕ ಪ್ರಕಾಶ್ ಅವರಿಗೆ ಈ ಸಿನಿಮಾ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು. ಈಗ ಅವರು ‘ಡೆವಿಲ್’ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ದರ್ಶನ್ ಹೀರೋ. ದರ್ಶನ್ ಬಂಧನ ಕಾರಣಕ್ಕೆ ಈ ಸಿನಿಮಾ ವಿಳಂಬ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Mon, 7 April 25

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ