AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಯ ಹುಚ್ಚಾಟ; ಕಾರಿನ ಮೇಲಿಂದ ಬಿದ್ದ ಪವನ್​ ಕಲ್ಯಾಣ್​; ಇಲ್ಲಿದೆ ವಿಡಿಯೋ

ಪವನ್​ ಕಲ್ಯಾಣ್​ ಅವರು ಸನ್​ರೂಫ್​ ತೆಗೆದು ಅದರಿಂದ ಕಾರಿನ ಟಾಪ್​ಗೆ ಏರಿದ್ದರು. ಅವರಿಗೆ ಎಲ್ಲರೂ ಹೂವನ್ನು ಸೋಕುತ್ತಿದ್ದರು. ಒಂದು ಕಡೆ ಅಭಿಮಾನಿಗಳು ಜೋರಾಗಿ ಪವನ್​ ಹೆಸರು ಕೂಗುತ್ತಿದ್ದರು. ಕೆಲವರು ಕೈ ಬೀಸಿ ಪವನ್​ ಕಲ್ಯಾಣ್​ ಅವರನ್ನು ಕರೆಯುತ್ತಿದ್ದರು.

ಅಭಿಮಾನಿಯ ಹುಚ್ಚಾಟ; ಕಾರಿನ ಮೇಲಿಂದ ಬಿದ್ದ ಪವನ್​ ಕಲ್ಯಾಣ್​; ಇಲ್ಲಿದೆ ವಿಡಿಯೋ
ಪವನ್​ ಕಲ್ಯಾಣ್​
TV9 Web
| Edited By: |

Updated on: Feb 21, 2022 | 5:24 PM

Share

ಪವನ್​ ಕಲ್ಯಾಣ್​ ಅವರು (Pawan Kalyan) ರಾಜಕೀಯ ಹಾಗೂ ಸಿನಿಮಾ ಕ್ಷೇತ್ರ ಎರಡರಲ್ಲೂ ಬ್ಯುಸಿ ಇದ್ದಾರೆ. ಸಿನಿಮಾ ಕೆಲಸದ ಜತೆಜತೆಗೆ ರಾಜಕೀಯ ಕೆಲಸಗಳನ್ನು ಮಾಡಿಕೊಂಡು ಸಾಗುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಹೀನಾಯ ಸೋಲು ಉಂಟಾಗಿರುವುದರಿಂದ ಪಕ್ಷವನ್ನು ಇನ್ನಷ್ಟು ಸದೃಢ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಭಾನುವಾರ (ಫೆಬ್ರವರಿ 20) ಅವರು ಜನಸೇನಾ ಪಾರ್ಟಿಯ (Janasena Party) ಕಾರ್ಯದ ನಿಮಿತ್ತ ನರಸಾಪುರಂಗೆ ತೆರಳಿದ್ದರು. ಈ ವೇಳೆ ಸಾರ್ವಜನಿಕ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕಾರಿನ ರೂಫ್​ ಏರಿದ್ದ ಅವರು ಅಭಿಮಾನಿಗಳ ಕಡೆಗೆ ಕೈಬೀಸಿದರು. ಆಗ ಅಭಿಮಾನಿ ತೋರಿದ ಹುಚ್ಚುತನದಿಂದ ಪವನ್​ ಕಲ್ಯಾಣ್​ ಬಿದ್ದಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದೆ.

ಪವನ್​ ಕಲ್ಯಾಣ್​ ಅವರು ಸನ್​ರೂಫ್​ ತೆಗೆದು ಅದರಿಂದ ಕಾರಿನ ಟಾಪ್​ಗೆ ಏರಿದ್ದರು. ಅವರಿಗೆ ಎಲ್ಲರೂ ಹೂವನ್ನು ಸೋಕುತ್ತಿದ್ದರು. ಒಂದು ಕಡೆ ಅಭಿಮಾನಿಗಳು ಜೋರಾಗಿ ಪವನ್​ ಹೆಸರು ಕೂಗುತ್ತಿದ್ದರು. ಕೆಲವರು ಕೈ ಬೀಸಿ ಪವನ್​ ಕಲ್ಯಾಣ್​ ಅವರನ್ನು ಕರೆಯುತ್ತಿದ್ದರು. ಆಗ ಓರ್ವ ಅಭಿಮಾನಿ ಕಾರಿನ ಹಿಂಭಾಗದಿಂದ ಟಾಪ್​ಗೆ ಏರಿದ್ದಾನೆ. ಪವನ್​ ಕಲ್ಯಾಣ್​ ಅವರನ್ನು ಹಗ್​ ಮಾಡೋಕೆ ಮುಂದಾಗಿದ್ದಾನೆ!

ಪವನ್​ ಕಲ್ಯಾಣ್​ ಇದನ್ನು ನಿರೀಕ್ಷಿಸಿರಲಿಲ್ಲ. ಅವರು ಪಕ್ಕಕ್ಕೆ ಸರಿದುಕೊಳ್ಳೋಕೆ ಪ್ರಯತ್ನಿಸಿದರು. ಆದರೆ, ಅಭಿಮಾನಿ ಕಾರಿನಿಂದ ಕೆಳಗೆ ಬಿದ್ದಿದ್ದ. ಆತನ ಕೈ ತಾಗಿ ಪವನ್​ ಕಲ್ಯಾಣ್​ ಕೂಡ ಬಿದ್ದಿದ್ದಾರೆ. ಪವನ್​ ಕಲ್ಯಾಣ್​ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರು ತಕ್ಷಣಕ್ಕೆ ಎದ್ದುಕೊಂಡಿದ್ದಾರೆ.

ಪವನ್​ ಕಲ್ಯಾಣ್​ ಅವರು ಈ ಘಟನೆ ಕುರಿತು ಯಾವುದೇ ಪ್ರಕಟಣೆ ಬಿಡುಗಡೆ ಮಾಡಿಲ್ಲ. ಫ್ಯಾನ್ಸ್​ ಈ ರೀತಿ ಹುಚ್ಚಾಟ ತೋರಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಇದು ನಿಜಕ್ಕೂ ಖಂಡನೀಯ ಎಂದು ಎಲ್ಲರೂ ಟ್ವೀಟ್​ ಮಾಡುತ್ತಿದ್ದಾರೆ. ‘ಸೆಲೆಬ್ರಿಟಿಗಳನ್ನು ನಾವು ಗೌರವಿಸಬೇಕು. ಅವರ ಜತೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ’ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

‘ಭೀಮ್ಲಾ ನಾಯಕ್’ ​ ಪ್ರಚಾರ ಕಾರ್ಯದಲ್ಲಿ ಪವನ್​ ಕಲ್ಯಾಣ್​ ಬ್ಯುಸಿ ಆಗಿದ್ದಾರೆ. ​ ಮಲಯಾಳಂನ ‘ಅಯ್ಯಪ್ಪನುಮ್​ ಕೋಶಿಯುಮ್​’ ಸಿನಿಮಾದ ರಿಮೇಕ್​ ‘ಭೀಮ್ಲಾ ನಾಯಕ್’. ಪೊಲೀಸ್​ ಹಾಗೂ ಮಾಜಿ ಸೈನಿಕನ ನಡುವೆ ನಡೆಯುವ ಅಹಂನ ಕಥೆ ಇದಾಗಿದೆ. ಈ ಸಿನಿಮಾ ಮಲಯಾಳಂನಲ್ಲಿ ಮೆಚ್ಚುಗೆ ಪಡೆದುಕೊಂಡಿತ್ತು. ಪೃಥ್ವಿರಾಜ್​ ಹಾಗೂ ಬಿಜು ಮೆನನ್​ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪೃಥ್ವಿರಾಜ್​ ಪಾತ್ರವನ್ನು ರಾಣಾ ದಗ್ಗುಬಾಟಿ ಹಾಗೂ ಬಿಜು ಮಾಡಿದ್ದ ಪಾತ್ರವನ್ನು ಪವನ್​ ಕಲ್ಯಾಣ್​ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ

ಇದನ್ನೂ ಓದಿ: 12 ಕೋಟಿ ರೂ. ಬಂಗಲೆ ಖರೀದಿಸಿದ ಪವನ್​ ಕಲ್ಯಾಣ್​; 6350 ಚದರ ಅಡಿ ಇರುವ ಐಷಾರಾಮಿ ಮನೆ

ಒಂದು ವಿಚಾರದಲ್ಲಿ ಎಡವಿದ ಪವನ್​ ಕಲ್ಯಾಣ್; ‘ಭೀಮ್ಲಾ ನಾಯಕ್​’ಗೆ ಗೆಲುವು ಬಲು ಕಷ್ಟ?