‘ಗೇಮ್ ಚೇಂಜರ್’ ಪ್ರೀರಿಲೀಸ್ ಇವೆಂಟ್​ಗೆ ಆಗಮಿಸಲಿರುವ ರಿಯಲ್ ಗೇಮ್ ಚೇಂಜರ್

Game Changer: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕೆಲವೇ ದಿನಗಳಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹಲವು ಗಣ್ಯರು ಅತಿಥಿಗಳಾಗಿ ಬರಲಿದ್ದಾರೆ. ಮುಖ್ಯವಾಗಿ ನಿಜವಾದ ‘ಗೇಮ್ ಚೇಂಜರ್’ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲಿದ್ದಾರೆ.

‘ಗೇಮ್ ಚೇಂಜರ್’ ಪ್ರೀರಿಲೀಸ್ ಇವೆಂಟ್​ಗೆ ಆಗಮಿಸಲಿರುವ ರಿಯಲ್ ಗೇಮ್ ಚೇಂಜರ್
Game Changer
Follow us
ಮಂಜುನಾಥ ಸಿ.
|

Updated on: Jan 03, 2025 | 12:26 PM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ‘ಆರ್​ಆರ್​ಆರ್’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ರಾಮ್ ಚರಣ್ ನಟಿಸಿದ್ದ ‘ಆಚಾರ್ಯ’ ಸಿನಿಮಾ ಇನ್ನಿಲ್ಲದಂತೆ ಫ್ಲಾಪ್ ಆಯ್ತು. ಆ ಸಿನಿಮಾದಲ್ಲಿ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ‘ಗೇಮ್ ಚೇಂಜರ್’ ಸಿನಿಮಾ ಭಾರಿ ನಿರೀಕ್ಷೆಗಳನ್ನು ಮೂಡಿಸಿದ್ದು, ಸಿನಿಮಾಕ್ಕೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ನಿನ್ನೆಯಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಭಾರಿ ಅದ್ಧೂರಿಯಾಗಿ ಇರಲಿದ್ದು, ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಿಜವಾದ ‘ಗೇಮ್ ಚೇಂಜರ್’ ಅನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

‘ಗೇಮ್ ಚೇಂಜರ್’ ಪ್ರೀ ರಿಲೀಸ್ ಇವೆಂಟ್ ಜನವರಿ 4 ರಂದು ರಾಜಮಂಡ್ರಿಯಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ, ನಿರ್ದೇಶಕ ಶಂಕರ್ ಜೊತೆಗೆ ಅತಿಥಿಗಳಾಗಿ ಮೆಗಾಸ್ಟಾರ್ ಚಿರಂಜೀವಿ ಆಗಮಿಸಲಿದ್ದಾರೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ನಿಜವಾದ ‘ಗೇಮ್ ಚೇಂಜರ್’ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಸಹ ಆಗಮಿಸಲಿದ್ದಾರೆ. ‘ಗೇಮ್ ಚೇಂಜರ್’ ಪ್ರೀ ರಿಲೀಸ್ ಇವೆಂಟ್​ಗೆ ಪವನ್ ಕಲ್ಯಾಣ್ ಆಗಮಿಸುವುದು ಬಹುತೇಕ ಪಕ್ಕಾ ಆಗಿದೆ.

ರಾಮ್ ಚರಣ್ ಅವರು, ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ರಾಮ್ ಚರಣ್ ಮತ್ತು ಚಿರಂಜೀವಿ ಅವರ ಪತ್ನಿ ಸುರೇಖಾ ಅವರುಗಳು ರಸ್ತೆಗೆ ಇಳಿದು ಪವನ್ ಪರವಾಗಿ ಪ್ರಚಾರ ಮಾಡಿದ್ದರು. ಆ ಸಮಯದಲ್ಲಿ ರಾಮ್ ಚರಣ್, ಜನರ ಮಧ್ಯೆ ಸಿಕ್ಕಿಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿದ ವಿಡಿಯೋ ಆಗ ಸಖತ್ ವೈರಲ್ ಆಗಿತ್ತು. ಪವನ್ ಕಲ್ಯಾಣ್ ಗೆಲುವಿಗೆ ರಾಮ್ ಚರಣ್ ಪಟ್ಟ ಶ್ರಮವನ್ನು ಜನ ಕೊಂಡಾಡಿದ್ದರು. ಇದೀಗ ಪವನ್, ರಾಮ್ ಚರಣ್ ಸಿನಿಮಾಕ್ಕೆ ಬೆಂಬಲ ನೀಡುವ ಮೂಲಕ ಋಣಸಂದಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ:ಗೇಮ್ ಚೇಂಜರ್ ಟ್ರೇಲರ್; ರಾಮ್ ಚರಣ್ ಅಭಿಮಾನಿಗಳಿಗೆ ಸಿಕ್ತು ಕಥೆ ಸುಳಿವು

ಇನ್ನು ಪವನ್ ಕಲ್ಯಾಣ್ ಒಂದು ರೀತಿ ರಿಯಲ್ ಗೇಮ್ ಚೇಂಜರ್ ಎನ್ನಬಹುದು. ಜನಸೇನಾ ಪಕ್ಷ ಕಟ್ಟಿಕೊಂಡು ಹತ್ತು ವರ್ಷದ ಹಿಂದೆ ಸ್ವತಃ ಚುನಾವಣೆಯಲ್ಲಿ ಸೋತಿದ್ದು ಮಾತ್ರವಲ್ಲದೆ ಪಕ್ಷದ ಒಬ್ಬರನ್ನೂ ಗೆಲ್ಲಿಸಿಕೊಳ್ಳಲು ಆಗಿರಲಿಲ್ಲ. ಆದರೆ ಪ್ರಯತ್ನ ಬಿಡದೆ ಸತತ ಶ್ರಮ, ಹೋರಾಟ ಮಾಡಿ ಕೇವಲ ಹತ್ತೆ ವರ್ಷದಲ್ಲಿ ಆಂಧ್ರ ಪ್ರದೇಶದ ಉಪ ಮುಖ್ಯ ಮಂತ್ರಿ ಆಗಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕವೂ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

‘ಗೇಮ್ ಚೇಂಜರ್’ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಾಮ್ ಚರಣ್ ಜೊತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ತೆಲುಗಿನ ಸುನಿಲ್, ತಮಿಳಿನ ಎಸ್​ಜೆ ಸೂರ್ಯ ವಿಲನ್. ಜಿಲ್ಲಾಧಿಕಾರಿಯೊಬ್ಬ ವ್ಯವಸ್ಥೆಯನ್ನು ಬದಲಾಯಿಸಲು ರಾಜಕಾರಣಿಗಳ ಎದುರು ಹೋರಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ