AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪವನ್​ ಕಲ್ಯಾಣ್​​ಗೆ ಇಷ್ಟವಾದ ಎರಡು ಹಿಂದಿ ಸಿನಿಮಾ ಇವು

Pawan Kalyan: ಪವನ್ ಕಲ್ಯಾಣ್, ಸ್ಟಾರ್ ನಟರಾಗಿರುವ ಜೊತೆಗೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಸಹ ಹೌದು. ಹಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇದೀಗ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಪಾಡ್​​ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದಾರೆ. ಎಎನ್​​ಐ ನಡೆಸಿದ ಪಾಡ್​​ಕಾಸ್ಟ್​​ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತಮ್ಮಿಷ್ಟದ ಎರಡು ಹಿಂದಿ ಸಿನಿಮಾಗಳನ್ನು ಹೆಸರಿಸಿದ್ದಾರೆ.

ಪವನ್​ ಕಲ್ಯಾಣ್​​ಗೆ ಇಷ್ಟವಾದ ಎರಡು ಹಿಂದಿ ಸಿನಿಮಾ ಇವು
Pawan Kalyan
ಮಂಜುನಾಥ ಸಿ.
|

Updated on: Jun 10, 2026 | 5:39 PM

Share

ಪವನ್ ಕಲ್ಯಾಣ್ (Pawan Kalyan), ಸ್ಟಾರ್ ನಟರಾಗಿರುವ ಜೊತೆಗೆ ಆಂಧ್ರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಸಹ ಹೌದು. ಹಲವು ಪ್ರಮುಖ ಖಾತೆಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇತ್ತೀಚೆಗೆ ನೆರೆ ತೆಲುಗು ರಾಜ್ಯವಾದ ತೆಲಂಗಾಣ ಸರ್ಕಾರ ಹಾಗೂ ಪವನ್ ಕಲ್ಯಾಣ್ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಏರ್ಪಟ್ಟಿವೆ. ಇದೀಗ ಡಿಸಿಎಂ ಆದ ಬಳಿಕ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಪಾಡ್​​ಕಾಸ್ಟ್ ಒಂದರಲ್ಲಿ ಭಾಗಿ ಆಗಿದ್ದಾರೆ. ಎಎನ್​​ಐ ನಡೆಸಿದ ಪಾಡ್​​ಕಾಸ್ಟ್​​ನಲ್ಲಿ ಭಾಗವಹಿಸಿದ್ದ ಪವನ್ ಕಲ್ಯಾಣ್, ತಮ್ಮಿಷ್ಟದ ಎರಡು ಹಿಂದಿ ಸಿನಿಮಾಗಳನ್ನು ಹೆಸರಿಸಿದ್ದಾರೆ.

ಪವನ್ ಕಲ್ಯಾಣ್ ಅವರು ಎಎನ್​​ಐ ಪಾಡ್​​ಕಾಸ್ಟ್​​ನಲ್ಲಿ ರಾಜಕೀಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದು, ಪಾಡ್​​ಕಾಸ್ಟ್​ನ ಪ್ರೋಮೊ ಮಾತ್ರವೇ ಇದೀಗ ಬಿಡುಗಡೆ ಆಗಿದೆ. ಪಾಡ್​​ಕಾಸ್ಟ್​​ನ ಪ್ರೋಮೊನಲ್ಲಿ ತೋರಿಸಿರುವಂತೆ ಸಂದರ್ಶಕಿ, ಪವನ್ ಕಲ್ಯಾಣ್ ಅವರಿಗೆ ಇಷ್ಟದ ಸಿನಿಮಾಗಳ ಬಗ್ಗೆ ಪ್ರಶ್ನಿಸಿದ್ದಾರೆ. ವಿಶೇಷವಾಗಿ ಇತ್ತೀಚೆಗೆ ಇಷ್ಟವಾದ ಹಿಂದಿ ಸಿನಿಮಾಗಳು ಯಾವುವು ಎಂದು ಪ್ರಶ್ನೆ ಕೇಳಿದ್ದಾರೆ.

ಅದಕ್ಕೆ ಪವನ್ ಕಲ್ಯಾಣ್, ‘ನನಗೆ ‘ಧುರಂಧರ್’ ಸಿನಿಮಾ ಬಹಳ ಇಷ್ಟವಾಯ್ತು ಎಂದಿದ್ದಾರೆ. ಜೊತೆಗೆ ‘ಬಾರಾಮುಲ್ಲ’ ಹೆಸರಿನ ಹಿಂದಿ ಸಿನಿಮಾ ಸಹ ಬಹಳ ಇಷ್ಟವಾಯ್ತು ಎಂದಿದ್ದಾರೆ. ‘ಧುರಂಧರ್’ ಸಹಜವಾಗಿಯೇ ಬಹುತೇಕರಿಗೆ ಇಷ್ಟವಾದ ಸಿನಿಮಾ, ಖುದ್ದು ಪ್ರಧಾನಿ ಮೋದಿ ಅವರು ಸಹ ‘ಧುರಂಧರ್’ ಸಿನಿಮಾದ ಬಗ್ಗೆ ಪ್ರಶಂಸಿಸಿ ಮಾತನಾಡಿದ್ದರು. ಪವನ್ ಕಲ್ಯಾಣ್ ಅವರಿಗೂ ಆ ಸಿನಿಮಾ ಇಷ್ಟವಾಗಿದೆ.

ಇದನ್ನೂ ಓದಿ:ದಳಪತಿ ವಿಜಯ್ ರಾಜಕೀಯ ಯಶಸ್ಸಿನಿಂದ ಪವನ್ ಕಲ್ಯಾಣ್​ಗೆ ಅಸೂಯೆ; ಸತ್ಯ ಒಪ್ಪಿಕೊಂಡ ಡಿಸಿಎಂ

‘ಬಾರಾಮುಲ್ಲ’ ಸಿನಿಮಾ ದೊಡ್ಡ ಹಿಟ್ ಸಿನಿಮಾ ಅಲ್ಲದಿದ್ದರೂ ಭಿನ್ನವಾದ ಹಾರರ್ ಸಿನಿಮಾ. ಹೆಸರೇ ಸೂಚಿಸುತ್ತಿರುವಂತೆ ಕಾಶ್ಮೀರದಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಹಾರರ್ ಕತೆ ಹೊಂದಿರುವ ಜೊತೆಗೆ ಕಾಶ್ಮೀರದ ರಾಜಕೀಯ, ವಸ್ತುಸ್ಥಿತಿಯ ಮೇಲೆಯೂ ಬೆಳಕು ಚೆಲ್ಲುತ್ತದೆ. ವಿಶೇಷವೆಂದರೆ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿರುವವರು ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್. ಸಿನಿಮಾ ನಿರ್ದೇಶಿಸಿರುವುದು ಆದಿತ್ಯ ಸುಹಾಸ್.

ಇದೇ ಪಾಡ್​​ಕಾಸ್ಟ್​​ನಲ್ಲಿ ಪವನ್ ಕಲ್ಯಾಣ್ ಅವರು ತಾವು ಕಾಶ್ಮೀರದಲ್ಲಿ ಸಿನಿಮಾಗಳನ್ನು ಚಿತ್ರೀಕರಿಸುವಾಗ ಎದುರಿಸುತ್ತಿದ್ದ ಸಮಸ್ಯೆ, ಸ್ಥಳೀಯರಿಂದ ಎದುರಾಗುತ್ತಿದ್ದ ದೌರ್ಜನ್ಯಗಳನ್ನು ನೆನಪು ಮಾಡಿಕೊಂಡಿದ್ದಾರೆ. ಪಾಡ್​​ಕಾಸ್ಟ್​​ನಲ್ಲಿ ಅವರು ತಾವು ನಕ್ಸಲೈಟ್ ಆಗಬೇಕೆಂದು ಹೊರಟಿದ್ದಾಗಿಯೂ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ಡಿಕೆಶಿ ಸಿಟಿ ರೌಂಡ್ಸ್: ಫುಟ್​ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ