ಸಖತ್ ರಗಡ್ ಆಗಿದೆ ಪೆದ್ದಿ ಗ್ಲಿಂಪ್ಸ್; ಬ್ಯಾಟ್ ಹಿಡಿದು ಅಬ್ಬರಿಸಿದ ರಾಮ್ ಚರಣ್

|

Updated on: Apr 06, 2025 | 5:45 PM

‘ಪೆದ್ದಿ’ ಸಿನಿಮಾದ ಫಸ್ಟ್ ಶಾಟ್ ಗ್ಲಿಂಪ್ಸ್ ಬಿಡುಗಡೆ ಆಗಿದೆ. ಇದರಲ್ಲಿ ರಾಮ್ ಚರಣ್ ಅವರ ಪಾತ್ರದ ಝಲಕ್ ನೀಡಲಾಗಿದೆ. ಅಲ್ಲದೇ, ಕಥೆಯ ಬಗ್ಗೆಯೂ ಸುಳಿವು ನೀಡಲಾಗಿದೆ. 2026ರ ಮಾ.27ರಂದು ಈ ಚಿತ್ರ ತೆರೆಕಾಣಲಿದೆ. ಶಿವರಾಜ್​ಕುಮಾರ್​ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಸಖತ್ ರಗಡ್ ಆಗಿದೆ ಪೆದ್ದಿ ಗ್ಲಿಂಪ್ಸ್; ಬ್ಯಾಟ್ ಹಿಡಿದು ಅಬ್ಬರಿಸಿದ ರಾಮ್ ಚರಣ್
Ram Charan
Follow us on

ನಟ ರಾಮ್ ಚರಣ್ ಅವರು ‘ಪೆದ್ದಿ’ (Peddi) ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಈ ವರ್ಷ ಬಿಡುಗಡೆ ಆದ ‘ಗೇಮ್ ಚೇಂಚರ್’ ಸಿನಿಮಾದಲ್ಲಿ ರಾಮ್ ಚರಣ್ (Ram Charan) ಅವರು ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದರು. ಆದರೆ ‘ಪೆದ್ದಿ’ ಸಿನಿಮಾದಲ್ಲಿ ಅವರು ಗೆಟಪ್ ಬದಲಿಸಿದ್ದಾರೆ. ಸಿಕ್ಕಾಪಟ್ಟೆ ಮಾಸ್ ಅವತಾರದಲ್ಲಿ ಅವರು ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ‘ಪೆದ್ದಿ’ ಚಿತ್ರದಲ್ಲಿ ರಾಮ್ ಚರಣ್ ಅವರ ಗೆಟಪ್ ಹೇಗಿರಲಿದೆ ಎಂಬುದನ್ನು ತಿಳಿಸಲು ಫಸ್ಟ್ ಲುಕ್ ಟೀಸರ್ (Peddi Movie) ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ಅಭಿಮಾನಿಗಳಿಗೆ ಥ್ರಿಲ್ ಆಗಿದೆ.

‘ಪೆದ್ದಿ’ ಸಿನಿಮಾದಲ್ಲಿ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬುಚ್ಚಿ ಬಾಬು ಸನಾ ಅವರ ಕಾಂಬಿನೇಷನ್ ಇರುವುದರಿಂದ ಹೈಪ್ ಜೋರಾಗಿದೆ. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚು ಮಾಡುವ ರೀತಿಯಲ್ಲಿ ಈ ಟೀಸರ್ ಮೂಡಿಬಂದಿದೆ. ರಾಮ್ ಚರಣ್ ಅವರ ಫಸ್ಟ್ ಲುಕ್ ನೋಡಿದ ಪ್ರೇಕ್ಷಕರಿಗೆ ನಿರೀಕ್ಷೆ ಜಾಸ್ತಿ ಆಗಿದೆ. ಎ.ಆರ್. ರೆಹಮಾನ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ನವೀನ್ ನೂಲಿ‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.ಆರ್. ರತ್ನವೇಲು ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಶೇಷ ಏನೆಂದರೆ, ರಾಮ ನವಮಿ ಪ್ರಯುಕ್ತ ಏಪ್ರಿಲ್ 6ರಂದು ‘ಪೆದ್ದಿ’ ಸಿನಿಮಾದ ಫಸ್ಟ್ ಶಾಟ್ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ತೆಲುಗು, ಕನ್ನಡ ಮುಂತಾದ ಭಾಷೆಗಳಲ್ಲಿ ಗ್ಲಿಂಪ್ಸ್ ರಿಲೀಸ್ ಆಗಿದೆ. ಎಲ್ಲ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕ್ರಿಕೆಟ್ ಬ್ಯಾಟ್ ಹಿಡಿದು ರಾಮ್ ಚರಣ್ ಅವರು ಮೈದಾನಕ್ಕೆ ಇಳಿದಿದ್ದಾರೆ. ಅವರ ಬ್ಯಾಟಿಂಗ್ ಶೈಲಿ ಸೂಪರ್ ಆಗಿದೆ.

ಇದನ್ನೂ ಓದಿ
ರಾಮ್ ಚರಣ್​ಗೆ ಪತ್ನಿ ಉಪಾಸನಾ ಕೊಡುವ ದುಬಾರಿ ಗಿಫ್ಟ್​ಗಳೇನು?
ಗೆದ್ದಿದ್ದು ಕಡಿಮೆ ಸಿನಿಮಾ ಆದರೂ ರಾಮ್ ಚರಣ್ ಆಸ್ತಿ 1,300 ಕೋಟಿ ರೂಪಾಯಿ
ರಾಮ್ ಚರಣ್ ಮನೆಯಲ್ಲಿ ಇದೆ ಬರೋಬ್ಬರಿ 15 ಕುದುರೆ; ಕಾರಣ ಏನು?
ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ರಾಮ್ ಚರಣ್

‘ಪೆದ್ದಿ’ ಸಿನಿಮಾ ಗ್ಲಿಂಪ್ಸ್​:

ಇನ್ನು, ‘ಪೆದ್ದಿ’ ಸಿನಿಮಾದ ಈ ಗ್ಲಿಂಪ್ಸ್​ನಲ್ಲಿ ರಿಲೀಸ್ ದಿನಾಂಕ ಕೂಡ ಬಹಿರಂಗ ಆಗಿದೆ. ಹೌದು, 2026ರ ಮಾರ್ಚ್​ 27ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಟೀಸರ್​ನಲ್ಲಿ ರಾಮ್ ಚರಣ್ ಅವರು ಭರ್ಜರಿಯಾಗಿ ಡೈಲಾಗ್ ಹೊಡೆದಿದ್ದಾರೆ. ಈ ಸಿನಿಮಾ ಖಂಡಿತಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ ಎಂದು ಅಭಿಮಾನಿಗಳು ಕಮೆಂಟ್​ಗಳ ಮೂಲಕ ಭವಿಷ್ಯ ನುಡಿಯುತ್ತಿದ್ದಾರೆ.

ಇದನ್ನೂ ಓದಿ: ಪ್ರೀತಿಯ ನಿರ್ದೇಶಕನಿಗೆ ಮೂರು ವಿಶೇಷ ಗಿಫ್ಟ್ ಕೊಟ್ಟ ರಾಮ್ ಚರಣ್

‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ನಟಿಸುತ್ತಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ. ಜಗಪತಿ ಬಾಬು ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’, ‘ಸುಕುಮಾರ್ ರೈಟಿಂಗ್’, ‘ವೃದ್ಧಿ ಸಿನಿಮಾಸ್’ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.