ಪ್ರಧಾನಿ ಮೋದಿ ‘ಅಖಂಡ 2’ ಸಿನಿಮಾ ವೀಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದ ನಿರ್ದೇಶಕ ಬೋಯಪಾಟಿ ಶ್ರೀನು
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2 ತಾಂಡವಂ' ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಸನಾತನ ಧರ್ಮ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಈ ಚಿತ್ರದಲ್ಲಿ ಬಾಲಯ್ಯ ಅವರ ಅಘೋರ ಪಾತ್ರ ಪ್ರೇಕ್ಷಕರನ್ನು ಆಕರ್ಷಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಈ ಚಿತ್ರವನ್ನು ವೀಕ್ಷಿಸಲಿದ್ದಾರೆ ಎಂದು ನಿರ್ದೇಶಕ ಬೋಯಪಾಟಿ ಶ್ರೀನು ಘೋಷಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರ ಇತ್ತೀಚಿನ ಚಿತ್ರ ‘ಅಖಂಡ 2 ತಾಂಡವಂ’ ಮಿಶ್ರಪ್ರತಿಕ್ರಿಯೆ ಪಡೆದಿದೆ. ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರ ಶುಕ್ರವಾರ (ಡಿಸೆಂಬರ್ 12) ತೆರೆಗೆ ಬಂದಿತು. ಈ ಸಿನಿಮಾ ಕಲೆಕ್ಷನ್ ವಿಷಯದಲ್ಲಿ ಬ್ಲಾಕ್‌ಬಸ್ಟರ್ ಆಗಿದೆ . ಈ ಚಿತ್ರವು ಹಿಂದೂ ಧರ್ಮ , ದೇವರ ಮೇಲಿನ ಭಕ್ತಿ ಮತ್ತು ಸನಾತನ ಧರ್ಮವನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುತ್ತಿರುವುದರಿಂದ ಕೆಲವರಿಗೆ ಇಷ್ಟ ಆಗಿದೆ. ಈಗ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸುತ್ತಾರಂತೆ.
ಅಭಿಮಾನಿಗಳ ಜೊತೆಗೆ , ಸಾಮಾನ್ಯ ಪ್ರೇಕ್ಷಕರು ಮತ್ತು ಮಕ್ಕಳು ಸಹ ಈ ಚಿತ್ರವನ್ನು ನೋಡಲು ಚಿತ್ರಮಂದಿರಗಳಿಗೆ ಹೋಗುತ್ತಿದ್ದಾರೆ . ‘ಅಖಂಡ 2’ ಚಿತ್ರದಲ್ಲಿ ಬಾಲಕೃಷ್ಣ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ . ಬಾಲ ಮುರಳಿ ಕೃಷ್ಣ ಪಾತ್ರದ ಜೊತೆಗೆ , ಅವರು ಅಖಂಡ ರುದ್ರ ಸಿಕಂದರ್ ಅಘೋರ ಪಾತ್ರದಲ್ಲಿ ಮಾಸ್ ಅವತಾರ ತೋರಿಸಿದ್ದಾರೆ. ಬಾಲಯ್ಯ ವಿಶೇಷವಾಗಿ ಅಘೋರ ಪಾತ್ರದಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ . ಇಡೀ ಚಿತ್ರವು ಈ ಪಾತ್ರದ ಸುತ್ತ ಸುತ್ತುತ್ತದೆ . ಸನಾತನ ಧರ್ಮದ ಬಗ್ಗೆ ಅವರು ಹೇಳುವ ಸಂಭಾಷಣೆಗಳು ಮತ್ತು ಖಳನಾಯಕರನ್ನು ಕೋಪಗೊಳ್ಳುವಂತೆ ಮಾಡುವ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಿದ್ದಾರೆ .
ಈಗ ಚಿತ್ರದ ಸಕ್ಸಸ್ ಮೀಟ್ ಭಾನುವಾರ ಹೈದರಾಬಾದ್ನಲ್ಲಿ ನಡೆಯಿತು. ಬಾಲಯ್ಯ, ಬೋಯಪಾಟಿ ಶ್ರೀನು ಸೇರಿದಂತೆ ಇಡೀ ತಂಡ ಇದರಲ್ಲಿ ಭಾಗಿ ಆಗಿತ್ತು. ಈ ವೇಳೆ ಶ್ರೀನು ಅವರು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ದೆಹಲಿಯಲ್ಲಿ ‘ಅಖಂಡ 2’ ವಿಶೇಷ ಶೋ ಆಯೋಜನೆ ಮಾಡಲಾಗುವುದ ಎಂದರು. ಈ ಶೋಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ ಎಂದರು. ‘ಪ್ರಧಾನಿಯವರು ಚಿತ್ರದ ಬಗ್ಗೆ ಕೇಳಿದ್ದಾರೆ ಮತ್ತು ಶೀಘ್ರದಲ್ಲೇ ಅದನ್ನು ವೀಕ್ಷಿಸಲು ಉತ್ಸುಕರಾಗಿದ್ದಾರೆ’ ಎಂದು ಅವರು ಹೇಳಿದರು. ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ತಂಡವು ಶೀಘ್ರದಲ್ಲೇ ವಿವರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.ಮೊದಿ ಅವರ ಶೆಡ್ಯೂಲ್ ನೋಡಿ ಮುಂದಿನ ನಿರ್ಧಾರ ಮಾಡಲಾಗುವುದು.
ಇದನ್ನೂ ಓದಿ: ಸಿಕ್ಕಿದ್ದು ಕೆಟ್ಟ ವಿಮರ್ಶೆಯಾದರೂ ಭಾನುವಾರ ಡೆವಿಲ್ಗಿಂತ ನಾಲ್ಕುಪಟ್ಟು ಹೆಚ್ಚು ಗಳಿಸಿದ ‘ಅಖಂಡ 2’
‘ಅಖಂಡ 2’ ಮೂರು ದಿನಗಳಲ್ಲಿ 61 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಸಾಕಷ್ಟು ಕೆಟ್ಟ ವಿಮರ್ಶೆಗಳು ಬಂದಿವೆ. ಈಗ ಚಿತ್ರದಿಂದ ನಿರ್ಮಾಪಕರು ದೊಡ್ಡ ಲಾಭ ಕಾಣುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



