ಮೊದಲ ದಿನ ‘ಪೊನ್ನಿಯಿನ್ ಸೆಲ್ವನ್ 2’ ಭರ್ಜರಿ ಕಲೆಕ್ಷನ್; ಸಲ್ಲು ಚಿತ್ರವನ್ನೂ ಹಿಂದಿಕ್ಕಿದ ಮಣಿರತ್ನಂ ಸಿನಿಮಾ
Ponniyin Selvan 2 First Day Collection: ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಣಿ ರತ್ನಂ ಅವರ ನಿರ್ದೇಶನ ಕಮಾಲ್ ಮಾಡಿದೆ.
ಮಣಿರತ್ನಂ ನಿರ್ದೇಶನ, ಸ್ಟಾರ್ ಪಾತ್ರವರ್ಗ, ಮೊದಲ ಪಾರ್ಟ್ನ ಯಶಸ್ಸಿನ ಹುಮ್ಮಸ್ಸಿನೊಂದಿಗೆ ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ (Ponniyin Selvan 2) ಏಪ್ರಿಲ್ 28ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಇತ್ತೀಚೆಗೆ ರಿಲೀಸ್ ಆದ ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಮೊದಲ ದಿನದ ಗಳಿಕೆಯನ್ನೂ ಹಿಂದಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 38 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಣಿ ರತ್ನಂ ಅವರ ನಿರ್ದೇಶನ ಕಮಾಲ್ ಮಾಡಿದೆ. ತಮಿಳುನಾಡು ಒಂದರಲ್ಲೇ ಈ ಚಿತ್ರ 25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ 3-4 ಕೋಟಿ ರೂಪಾಯಿ, ಕರ್ನಾಟಕದಿಂದ 4-5 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗಿದೆ.
ಶನಿವಾರ (ಏಪ್ರಿಲ್ 29) ಹಾಗೂ ಭಾನುವಾರ (ಏಪ್ರಿಲ್ 30) ಈ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ. ಸೋಮವಾರ (ಮೇ 1) ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದೆ. ಇದು ಸಿನಿಮಾಗೆ ಸಹಕಾರಿ ಆಗಲಿದೆ. ಹೀಗಾಗಿ, ಕೆಲವೇ ದಿನಗಳಲ್ಲಿ ಚಿತ್ರದ ಗಳಿಕೆ 100 ಕೋಟಿ ರೂಪಾಯಿ ದಾಟಲಿದೆ.
#PS2review#Trisha as #Kundavai steals the show. She leaves a huge impact. #ManiRatnam extracts the best work out of her. She proves why she is best suited for the role of #Kundavai. She must win a national award for her performance. #PS2 #PonniyinSelvan2 @trishtrashers pic.twitter.com/WNga8kw43e
— Lets OTT (@LetsOTTOff) April 28, 2023
‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾದಲ್ಲಿ ವಿಕ್ರಮ್, ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ತ್ರಿಶಾ, ಶೋಭಿತಾ ಧುಲಿಪಾಲ್, ಪ್ರಕಾಶ್ ರಾಜ್ ಮೊದಲಾದ ಸ್ಟಾರ್ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಅವರು ಬರೆದ ಪುಸ್ತಕ ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ.
ಇದನ್ನೂ ಓದಿ: ಪೊನ್ನಿಯಿನ್ ಸೆಲ್ವನ್ 2 ಹೇಗಿದೆ? ನೆಟ್ಟಿಗರು ಕೊಟ್ಟ ತೀರ್ಪಿದು
ಏಪ್ರಿಲ್ 21ರಂದು ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಮೊದಲ ದಿನ 15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದಕ್ಕೂ ಒಂದೂವರೆ ಪಟ್ಟು ಹೆಚ್ಚು ಗಳಿಕೆಯನ್ನು ‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ಮಾಡಿದೆ. ‘ಪೊನ್ನಿಯಿನ್ ಸೆಲ್ವನ್’ ಚಿತ್ರ ಭಾರತದಲ್ಲಿ 327 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಗಳಿಕೆಯನ್ನು ಸೀಕ್ವೆಲ್ ಹಿಂದಿಕ್ಕಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ