Pooja Hegde: ಒಂದೇ ವರ್ಷ ಪೂಜಾ ಹೆಗ್ಡೆ ನಟನೆಯ ನಾಲ್ಕು ಸಿನಿಮಾಗಳು ಫ್ಲಾಪ್​; ಮುಂದೇನು?

| Updated By: ರಾಜೇಶ್ ದುಗ್ಗುಮನೆ

Updated on: Jan 18, 2023 | 5:47 PM

ಪೂಜಾ ಹೆಗ್ಡೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಕೇವಲ 22ನೇ ವಯಸ್ಸಿಗೆ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಾಗ ಚೈತನ್ಯ, ಅಲ್ಲು ಅರ್ಜುನ್, ಜೂ.ಎನ್​ಟಿಆರ್​ ಮೊದಲಾದವರ ಜತೆ ತೆರೆ ಹಂಚಿಕೊಂಡಿದ್ದಾರೆ.

Pooja Hegde: ಒಂದೇ ವರ್ಷ ಪೂಜಾ ಹೆಗ್ಡೆ ನಟನೆಯ ನಾಲ್ಕು ಸಿನಿಮಾಗಳು ಫ್ಲಾಪ್​; ಮುಂದೇನು?
ಪೂಜಾ ಹೆಗ್ಡೆ
Follow us on

ನಟಿ ಪೂಜಾ ಹೆಗ್ಡೆ (Pooja Hegde) ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಬಾಲಿವುಡ್​, ಟಾಲಿವುಡ್​​​, ಕಾಲಿವುಡ್​​ನಲ್ಲಿ ಅವರು ಬ್ಯುಸಿ ಇದ್ದಾರೆ. ಅವರು ಹಲವು ಹೀರೋಗಳ ಜತೆ ನಟಿಸಿದ್ದಾರೆ. ಆದರೆ, ಅವರಿಗೆ 2022 ವರ್ಷ ಅದೃಷ್ಟದಾಯಕವಾಗಿರಲಿಲ್ಲ. ಆ ವರ್ಷ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆದವು. ನಾಲ್ಕೂ ಚಿತ್ರಗಳು ಫ್ಲಾಪ್ ಆದವು ಅನ್ನೋದು ಬೇಸರದ ವಿಚಾರ. ಹೀಗಾಗಿ ಈ ವರ್ಷ ಪೂಜಾ ಹೆಗ್ಡೆ ಗೆಲ್ಲಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅದೃಷ್ಟ ಈ ವರ್ಷವಾದರೂ ಅವರ ಕೈ ಹಿಡಿಯುತ್ತದೇ ಎಂಬುದನ್ನು ಕಾದು ನೋಡಬೇಕಿದೆ.

ಪೂಜಾ ಹೆಗ್ಡೆ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ. ಕೇವಲ 22ನೇ ವಯಸ್ಸಿಗೆ ಅವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ನಾಗ ಚೈತನ್ಯ, ಅಲ್ಲು ಅರ್ಜುನ್, ಜೂ.ಎನ್​ಟಿಆರ್​ ಮೊದಲಾದವರ ಜತೆ ತೆರೆ ಹಂಚಿಕೊಂಡಿದ್ದಾರೆ. ಅವರಿಗೆ ಹೆಚ್ಚು ಜನಪ್ರಿಯತೆ ಇರುವ ಹೊರತಾಗಿಯೂ ಸಿನಿಮಾಗಳು ಸದ್ದು ಮಾಡುತ್ತಿಲ್ಲ.

2022ರಲ್ಲಿ ಅವರ ನಟನೆಯ ಮೊದಲ ಸಿನಿಮಾ ‘ರಾಧೆ ಶ್ಯಾಮ್​’ ತೆರೆಗೆ ಬಂತು. ರೊಮ್ಯಾಂಟಿಕ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂತು. ಈ ಚಿತ್ರ ದೊಡ್ಡ ಫ್ಲಾಪ್ ಸಿನಿಮಾ ಎನಿಸಿಕೊಂಡಿತು. ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ನಿರ್ಮಾಪಕರಿಗೆ ನಷ್ಟ ತಂದಿತ್ತು. ರಾಮ್ ಚರಣ್ ನಟನೆಯ ‘ಆಚಾರ್ಯ’ ಚಿತ್ರಕ್ಕೂ ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಈ ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಅವರು ಬಂದು ಹೋದರು. ಈ ಸಿನಿಮಾ ಕೂಡ ದೊಡ್ಡ ಸೋಲನ್ನು ತಂದಿತ್ತು.

ಇದನ್ನೂ ಓದಿ
Pooja Hegde: ಸಲ್ಮಾನ್ ಖಾನ್ ಬರ್ತ್​ಡೇ ಪಾರ್ಟಿಯಲ್ಲಿ ಪೂಜಾ ಹೆಗ್ಡೆ ಮಿಂಚಿಂಗ್; ಸಲ್ಲು ಜತೆ ಕರಾವಳಿ ಬ್ಯೂಟಿ ಕ್ಲೋಸ್
Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು
SSMB28: ಮಹೇಶ್​ ಬಾಬು ಹೊಸ ಲುಕ್​ ವೈರಲ್​; ಶೂಟಿಂಗ್​ ಶುರು ಮಾಡಿದ ‘ಪ್ರಿನ್ಸ್​’

ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಸಿನಿಮಾ ಕೂಡ 2022ರಲ್ಲಿ ರಿಲೀಸ್ ಆಯಿತು. ಈ ಚಿತ್ರ ‘ಕೆಜಿಎಫ್ 2’ ಎದುರು ರಿಲೀಸ್ ಆಗಿ ಸೋಲು ಕಂಡಿತು. 2022ರ ಕೊನೆಯ ಸಿನಿಮಾ ‘ಸರ್ಕಸ್​’ ಕೂಡ ಸೋಲು ಕಂಡಿತು. ಒಂದೇ ವರ್ಷ ನಾಲ್ಕು ಚಿತ್ರಗಳು ನೆಲಕಚ್ಚಿದವು.

ಇದನ್ನೂ ಓದಿ: Pooja Hegde: ಸಲ್ಮಾನ್ ಖಾನ್ ಬರ್ತ್​ಡೇ ಪಾರ್ಟಿಯಲ್ಲಿ ಪೂಜಾ ಹೆಗ್ಡೆ ಮಿಂಚಿಂಗ್; ಸಲ್ಲು ಜತೆ ಕರಾವಳಿ ಬ್ಯೂಟಿ ಕ್ಲೋಸ್

ಈ ವರ್ಷ ಪೂಜಾ ಹೆಗ್ಡೆ ಹಲವು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿ ಇದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್​’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅವರ 28ನೇ ಚಿತ್ರಕ್ಕೆ ಪೂಜಾ ನಾಯಕಿ. ಈ ಎರಡು ಚಿತ್ರಗಳಿಂದ ಪೂಜಾ ಹೆಗ್ಡೆ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ