AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹುಬೇಡಿಕೆಯ ನಟಿ ಕೈಯಲ್ಲಿ ಈಗ ಕೆಲಸವೇ ಇಲ್ಲ; ಪೂಜಾ ಹೆಗ್ಡೆ ಈ ಸ್ಥಿತಿಗೆ ಬರಲು ಕಾರಣ ಏನು?

Pooja Hegde Remuneration: ಪ್ರತಿ ಸಿನಿಮಾಗೆ ಪೂಜಾ ಹೆಗ್ಡೆ ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದು ಅನೇಕ ನಿರ್ಮಾಪಕರಿಗೆ ಹೊರೆ ಆಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಬಹುಬೇಡಿಕೆಯ ನಟಿ ಕೈಯಲ್ಲಿ ಈಗ ಕೆಲಸವೇ ಇಲ್ಲ; ಪೂಜಾ ಹೆಗ್ಡೆ ಈ ಸ್ಥಿತಿಗೆ ಬರಲು ಕಾರಣ ಏನು?
ಪೂಜಾ ಹೆಗ್ಡೆ
TV9 Web
| Edited By: |

Updated on: Jan 28, 2022 | 9:57 AM

Share

ನಟಿ ಪೂಜಾ ಹೆಗ್ಡೆ (Pooja Hegde) ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಮಿಂಚಿದ್ದಾರೆ. ಅವರು ಅಭಿನಯಿಸಿರುವ ಸಾಲು ಸಾಲು ಸಿನಿಮಾಗಳು (Pooja Hegde Movies) ಬಿಡುಗಡೆಗೆ ಸಜ್ಜಾಗುತ್ತಿವೆ. ಸ್ಟಾರ್​ ಕಲಾವಿದರಿಗೆ ನಾಯಕಿ ಆಗುವ ಚಾನ್ಸ್​ ಅವರಿಗೆ ಸಿಕ್ಕಿದೆ. ಪೂಜಾ ಹೆಗ್ಡೆಗೆ ನಿರ್ಮಾಪಕರು ಕೈ ತುಂಬ ಸಂಭಾವನೆ (Pooja Hegde Remuneration) ನೀಡುತ್ತಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರಿಗೆ ಈಗ ಕೆಲಸ ಇಲ್ಲ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಅರೆರೆ, ಇದೇನಿದು ಏಕಾಏಕಿ ಪೂಜಾ ಹೆಗ್ಡೆ ಚಾರ್ಮ್​​ ಕುಸಿಯಿತಾ? ಹಾಗೇನೂ ಇಲ್ಲ. ಆದರೆ ಸದ್ಯಕ್ಕೆ ಅವರು ಒಂದರ್ಥದಲ್ಲಿ ನಿರುದ್ಯೋಗಿ ಆಗಿದ್ದಾರೆ. ಅತಿ ದುಬಾರಿ ಸಂಭಾವನೆ ಕೇಳುತ್ತಿರುವ ಕಾರಣದಿಂದ ಅವರಿಗೆ ಹೊಸ ಸಿನಿಮಾದ ಆಫರ್​ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಆದ್ದರಿಂದ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಹೊರತುಪಡಿಸಿದ್ರೆ ಪೂಜಾ ಹೆಗ್ಡೆ ಅವರ ಬಳಿ ಯಾವುದೇ ಹೊಸ ಚಿತ್ರಗಳು ಬರುತ್ತಿಲ್ಲ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರೊಬ್ಬರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಪೂಜಾ ಹೆಗ್ಡೆ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಪ್ರಭಾಸ್​ ಜೊತೆಯಲ್ಲಿ ಅವರು ‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.14ರಂದು ಆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕೊರೊನಾ ಕಾರಣದಿಂದ ಆ ಚಿತ್ರದ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದೆ. ಅದೇ ರೀತಿ, ಮೆಗಾ ಸ್ಟಾರ್​ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದಲ್ಲೂ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾದ ರಿಲೀಸ್​ ದಿನಾಂಕ ಸಹ ಮುಂದಕ್ಕೆ ಹೋಗಿದೆ. ಏಪ್ರಿಲ್​ 1ಕ್ಕೆ ‘ಆಚಾರ್ಯ’ ಬಿಡುಗಡೆ ಆಗಲಿದೆ. ಕಾಲಿವುಡ್​ನಲ್ಲಿ ‘ದಳಪತಿ’ ವಿಜಯ್​ ಜೊತೆಗೆ ‘ಬೀಸ್ಟ್​’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಆ ಸಿನಿಮಾ ಏಪ್ರಿಲ್​ 14ರಂದು ರಿಲೀಸ್​ ಆಗಲಿದೆ.

ಪ್ರತಿ ಸಿನಿಮಾಗೆ ಪೂಜಾ ಹೆಗ್ಡೆ ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗಿದೆ. ಇದು ಅನೇಕ ನಿರ್ಮಾಪಕರಿಗೆ ಹೊರೆ ಆಗುತ್ತಿದೆ. ಪೂಜಾ ಹೆಗ್ಡೆಗೆ ಇಷ್ಟು ಹಣ ನೀಡುವ ಬದಲು ಬೇರೆ ಹೀರೋಯಿನ್​ಗೆ ಅವಕಾಶ ಕೊಡುವುದೇ ಉತ್ತಮ ಎಂದು ಕೆಲವು ನಿರ್ಮಾಣ ಸಂಸ್ಥೆಗಳು ತೀರ್ಮಾನಿಸಿದಂತಿದೆ. ಹಾಗಾಗಿ ಅವರಿಗೆ ಹೊಸ ಸಿನಿಮಾದ ಅವಕಾಶಗಳು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ:

ಪೂಜಾ ಹೆಗ್ಡೆ ಆಫರ್​ ಬಾಚಿಕೊಂಡ ಸಮಂತಾ; ಮಹೇಶ್​ ಬಾಬುಗೆ ಜತೆಯಾಗಲಿದ್ದಾರೆ ನಟಿ?

‘ರಾಧೆ ಶ್ಯಾಮ್​’ ಚಿತ್ರದ ಕಥೆ ಲೀಕ್​; ಪ್ರಭಾಸ್​-ಪೂಜಾ ಹೆಗ್ಡೆ ಸಿನಿಮಾದ ಈ ಹಾಡಿನಲ್ಲಿ ಅಡಗಿದೆ ಸ್ಟೋರಿ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?