Pooja Hegde: ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ; ಕ್ಷಮೆ ಕೇಳಿದ ಸಂಸ್ಥೆ

ಪೂಜಾ ಹೆಗ್ಡೆ ವಿಮಾನದಲ್ಲಿ ಸಾಕಷ್ಟು ಸುತ್ತಾಟ ನಡೆಸಬೇಕಾಗುತ್ತದೆ. ಅವರು ಇಂಡಿಗೋ ವಿಮಾನದಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ವಿಮಾನದಲ್ಲಿದ್ದ ಸ್ಟಾಫ್​ಗಳು ಒರಟಾಗಿ ನಡೆದುಕೊಂಡಿದ್ದಾರೆ.

Pooja Hegde: ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ; ಕ್ಷಮೆ ಕೇಳಿದ ಸಂಸ್ಥೆ
ಪೂಜಾ ಹೆಗ್ಡೆ
Edited By:

Updated on: Jun 09, 2022 | 5:10 PM

ನಟಿ ಪೂಜಾ ಹೆಗ್ಡೆಗೆ (Pooja Hegde) ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಹಲವು ಸ್ಟಾರ್​​ಗಳ ಜತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ. ಸತತ ಸೋಲಿನ ಸುಳಿಯಲ್ಲಿ ಇರುವ ಅವರಿಗೆ ಆಫರ್​ಗಳು ಕಡಿಮೆ ಆಗಿಲ್ಲ. ಈಗ ಪೂಜಾ ಹೆಗ್ಡೆಗೆ ವಿಮಾನದಲ್ಲಿ ಕೆಟ್ಟ ಅನುಭವ ಆಗಿದೆ. ಈ ಬಗ್ಗೆ ಟ್ವಿಟರ್​ನಲ್ಲಿ (Twitter) ಪೂಜಾ ಹೆಗ್ಡೆ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಗೋ ವಿಮಾನ ಸೇವೆ ಬಗ್ಗೆ ಅವರು ಕಿಡಿಕಾರಿದ್ದಾರೆ. ಇದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

ಪೂಜಾ ಹೆಗ್ಡೆ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಹಾಗೂ ತೆಲುಗು ಸಿನಿಮಾ ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಹೀಗಾಗಿ ಅವರಿಗೆ ವಿಮಾನದಲ್ಲಿ ಸಾಕಷ್ಟು ಸುತ್ತಾಟ ನಡೆಸಬೇಕಾಗುತ್ತಿದೆ. ಅವರು ಇತ್ತೀಚೆಗೆ ಇಂಡಿಗೋ ವಿಮಾನದಲ್ಲಿ ಮುಂಬೈನಿಂದ ತೆರಳುತ್ತಿದ್ದರು. ಈ ವೇಳೆ ವಿಮಾನದಲ್ಲಿದ್ದ ಸ್ಟಾಫ್​ಗಳು ಒರಟಾಗಿ ನಡೆದುಕೊಂಡಿದ್ದಾರೆ.

ಇದನ್ನೂ ಓದಿ
ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ
ಗುಲಾಬಿ ಬಣ್ಣದ ಗೌನ್​ ಧರಿಸಿ ಕಾನ್​ ಚಿತ್ರೋತ್ಸವದಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ; ಫೋಟೋ ವೈರಲ್​
Cannes 2022: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ಗೌರವ; ಮೆಚ್ಚುಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ
ಎಷ್ಟೇ ಸಿನಿಮಾ ಸೋತ್ರೂ ಪೂಜಾ ಹೆಗ್ಡೆಗೆ ಸಿಕ್ತಿದೆ ಹೊಸ ಆಫರ್ಸ್​; ಈಗ ವಿಜಯ್​ ಜತೆ ‘ಜನ ಗಣ ಮನ’

‘ನಿಮ್ಮ ಸಿಬ್ಬಂದಿಗಳು ಎಷ್ಟು ಒರಟಾಗಿ ನಡೆದುಕೊಳ್ಳುತ್ತಾರೆ. ಯಾವುದೇ ಕಾರಣ ಇಲ್ಲದೆ ತುಂಬಾನೇ ಸೊಕ್ಕಿನಿಂದ ನಡೆದುಕೊಂಡಿದ್ದಾರೆ. ಅವರು ಮಾತನಾಡುವ ಟೋನ್ ಬೆದರಿಸುವಂತಿತ್ತು’ ಎಂದು ಬೇಸರ ಹೊರಹಾಕಿದ್ದಾರೆ ಪೂಜಾ ಹೆಗ್ಡೆ.


‘ದಯವಿಟ್ಟು ಕ್ಷಮಿಸಿ. ನಿಮ್ಮೊಂದಿಗೆ ನಾವು ಶೀಘ್ರವೇ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತೇವೆ. ಪಿಎನ್​ಆರ್​ ಸಂಖ್ಯೆ ಮತ್ತು ನಿಮ್ಮ ದೂರವಾಣಿ ಸಂಖ್ಯೆಯನ್ನು ಕಳುಹಿಸಿ’ ಎಂದು  ಇಂಡಿಗೋ ಸಂಸ್ಥೆ ಪೂಜಾ ಹೆಗ್ಡೆ ಟ್ವೀಟ್​ಗೆ ಉತ್ತರಿಸಿದೆ.

ಪೂಜಾ ಹೆಗ್ಡೆ ಅವರು ಮಹೇಶ್ ಬಾಬು-ತ್ರಿವಿಕ್ರಂ ಸಿನಿಮಾಗೆ ಆಯ್ಕೆ ಆಗಿದ್ದಾರೆ. ಸಲ್ಮಾನ್ ಖಾನ್ ಜತೆ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳ ಕೆಲಸಗಳಿಗೆ ಅವರು ಹೈದರಾಬಾದ್ ಹಾಗೂ ಮುಂಬೈ ನಡುವೆ ಪ್ರಯಾಣ ಬೆಳೆಸಬೇಕಿದೆ. ಇನ್ನು, ಜ್ಯೂ.ಎನ್​ಟಿಆರ್ ಹಾಗೂ ಕೊರಟಾಲ ಶಿವ ಒಟ್ಟಾಗಿ ಕೆಲಸ ಮಾಡುತ್ತಿರುವ ಸಿನಿಮಾಗೆ ಇವರೇ ನಾಯಕಿ ಆಗುವ ಸಾಧ್ಯತೆ ಇದೆ. ವಿಜಯ್ ದೇವರಕೊಂಡ ನಟನೆಯ ‘ಜೆಜಿಎಂ’ ಚಿತ್ರಕ್ಕೆ ಪೂಜಾ ನಾಯಕಿ ಆಗಿ ಆಯ್ಕೆ ಆದ ಬಗ್ಗೆ ಇತ್ತೀಚೆಗೆ ಘೋಷಣೆ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:58 pm, Thu, 9 June 22