ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ

TV9 Digital Desk

| Edited By: Rajesh Duggumane

Updated on:May 20, 2022 | 5:22 PM

ಪೂಜಾ ಹೆಗ್ಡೆ ಅವರ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದಕ್ಕೆ ಪೂಜಾ ಹೆಗ್ಡೆ ತಲೆಕೆಡಿಸಿಕೊಂಡಿಲ್ಲ.

ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ

ನಟಿ ಪೂಜಾ ಹೆಗ್ಡೆ ಅವರು (Pooja Hegde) ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಅವರ ನಟನೆಯ ಮೂರು ಚಿತ್ರಗಳು ರಿಲೀಸ್ ಆಗಿವೆ. ಆದರೆ, ಯಾವ ಚಿತ್ರವೂ ಗೆಲುವಿನ ಮುಖ ಕಂಡಿಲ್ಲ. ಈ ವಿಚಾರದ ಬಗ್ಗೆ ಅನೇಕರಿಂದ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದಕ್ಕೆ ಪೂಜಾ ಹೆಗ್ಡೆ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಅವರು ಖಡಕ್ ಉತ್ತರ ನೀಡಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಮಾರ್ಚ್​ 11ರಂದು ‘ರಾಧೆ ಶ್ಯಾಮ್’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ, ಸಿನಿಮಾ ಸೋಲು ಕಂಡಿತು. ಏಪ್ರಿಲ್ 13ರಂದು ತೆರೆಗೆ ಬಂದಿದ್ದು ದಳಪತಿ ವಿಜಯ್ ನಟನೆಯ ‘ಬೀಸ್ಟ್’ (Beast Movie). ಈ ಸಿನಿಮಾ ನೋಡಿದ ಫ್ಯಾನ್ಸ್ ನಿರಾಸೆಗೊಂಡರು. ಏಪ್ರಿಲ್ 29ರಂದು ತೆರೆಗೆ ಬಂದ ‘ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಮಾತ್ರ ಸೀಮಿತವಾದರು. ಈ ಚಿತ್ರ ಕೂಡ ಸೋಲು ಕಂಡಿತು. ಈ ಬಗ್ಗೆ ಎಲ್ಲರೂ ನಾನಾ ರೀತಿಯಲ್ಲಿ ಮಾತನಾಡಿದ್ದರು. ಈಗ ಪೂಜಾ ಹೆಗ್ಡೆ ಇದಕ್ಕೆ ಉತ್ತರ ನೀಡಿದ್ದಾರೆ.

‘ಇದು ಆಟದ ಭಾಗ ಅಷ್ಟೇ. ನಾನು ಆರು ಬ್ಯಾಕ್-ಟು-ಬ್ಯಾಕ್ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದೇನೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಆ ರೀತಿಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಪ್ರತಿಯೊಂದು ಚಿತ್ರಕ್ಕೂ ಅದರದ್ದೇ ಆದ ಹಣೆಬರಹ ಇರುತ್ತದೆ. ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಬಗ್ಗೆ ನಾನು ಸಂತಸ ಪಡುತ್ತೇನೆ, ಅದನ್ನು ನನ್ನ ಹೆಗಲಮೇಲೆ ತೆಗೆದುಕೊಳ್ಳುತ್ತೇನೆ ಎಂದರೆ, ಸೋತ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: 27 ಸಾವಿರ ರೂಪಾಯಿ ಬೆಲೆಯ ಚಪ್ಪಲಿ ಧರಿಸಿ ಸಿನಿಮಾ ಪ್ರಚಾರಕ್ಕೆ ಬಂದ ಪೂಜಾ ಹೆಗ್ಡೆ; ಫೋಟೋ ವೈರಲ್​

ಇದನ್ನೂ ಓದಿ

‘ನನ್ನ ಪ್ರವೃತ್ತಿಯನ್ನು ನಾನು ಅವಮಾನಿಸುವುದಿಲ್ಲ. ಪ್ರತಿ ಚಿತ್ರದಲ್ಲಿ ನಾನು ಏನು ಮಾಡಿದ್ದೇನೆ ಎಂಬುದು ನನಗೆ ತಿಳಿದಿದೆ. ‘ರಾಧೆ ಶ್ಯಾಮ್’ ಸಿನಿಮಾದಲ್ಲಿ ಏಕೆ ನಟಿಸಿದೆ ಎಂದರೆ ನನ್ನ ಪಾತ್ರ ಚೆನ್ನಾಗಿ ಇತ್ತು. ನಾನು ನಟಿಸಬೇಕಾಗಿದ್ದ ಚಿತ್ರ ಅದು. ‘ಆಚಾರ್ಯ’ ಚಿತ್ರದಲ್ಲಿ ನನ್ನದು ಅತಿಥಿ ಪಾತ್ರ. ನನಗೆ ಪಾತ್ರ ಇಷ್ಟವಾಯಿತು. ಅದು ಹಳ್ಳಿ ಹುಡುಗಿಯ ಪಾತ್ರ. ಡಿ ಗ್ಲಾಮ್ ಲುಕ್ ನನಗೆ ಇಷ್ಟವಾಯಿತು. ‘ಬೀಸ್ಟ್’ ಚಿತ್ರದ ಸಾಂಗ್ ಹಿಟ್ ಆಗಿದೆ. ನನಗೆ ನಿರ್ದೇಶಕ ನೆಲ್ಸನ್ ದಿಲೀಪ್​ ಕುಮಾರ್ ಅವರ ‘ಡಾಕ್ಟರ್’ ಸಿನಿಮಾ ಇಷ್ಟವಾಗಿತ್ತು’ ಎಂದಿದ್ದಾರೆ ಅವರು.

ಸದ್ಯ ಪೂಜಾ ಹೆಗ್ಡೆ ಫ್ರಾನ್ಸ್​ನಲ್ಲಿ ಇದ್ದಾರೆ. ‘ಕಾನ್ ಸಿನಿಮೋತ್ಸವ​ 2022’ರಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ರೆಡ್​ ಕಾರ್ಪೆಟ್​ ಮೇಲೆ ಅವರು ಹೆಜ್ಜೆ ಹಾಕಿದ ಫೋಟೋಗಳು ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada