
ಒಂದು ಕಾಲದಲ್ಲಿ ಪೂಜಾ ಹೆಗ್ಡೆ ಸಿನಿಮಾದ ಭಾಗ ಆಗುತ್ತಾರೆ ಎಂದರ ಆ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ಭರವಸೆ ಅಭಿಮಾನಿಗಳಿಗೆ ಇರುತ್ತಿತ್ತು. ಅವರು ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇತ್ತು. ಅವರ ಗ್ಲಾಮರ್ ಕೂಡ ಸಿನಿಮಾದ ಹೈಲೈಟ್ ಆಗಿತ್ತು. ಈಗ ಪೂಜಾ ಹೆಗ್ಡೆ (PooJa Hegde ) ಅದೃಷ್ಟ ಕೈ ಕೊಟ್ಟಿದೆ. ಅವರು ಮುಟ್ಟಿದ್ದೆಲ್ಲವೂ ಕಬ್ಬಿಣ ಆಗುತ್ತಿದೆ. ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆ ಬಗ್ಗೆ ಇಲ್ಲಿ ನೋಡೋಣ.
ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಮೊದಲು ನಟಿಸಿದ್ದು ತಮಿಳಿನಲ್ಲಿ. ನಂತರ ತೆಲುಗು, ಹಿಂದಿ ಸಿನಿಮಾಗಳನ್ನು ಮಾಡಿದರು. 2017-19ರ ಅವಧಿಯಲ್ಲಿ ಸಂಪೂರ್ಣವಾಗಿ ಟಾಲಿವುಡ್ನಲ್ಲಿ ಬ್ಯುಸಿ ಆದರು. 2020ರಲ್ಲಿ ರಿಲೀಸ್ ಆದ ‘ಅಲಾ ವೈಕುಂಟಪುರಮುಲೋ’ ಸಿನಿಮಾ ಹಿಟ್ ಆಯಿತು.
2021ರಿಂದ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’ ಸಿನಿಮಾ ಫ್ಲಾಪ್ ಆಯಿತು. ಆ ಬಳಿಕ ‘ರಾಧೆ ಶ್ಯಾಮ್’ ಕೂಡ ಸೋತು ಸುಣ್ಣವಾಯಿತು. ಪ್ರಭಾಸ್ ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಿದ್ದರು. ‘ಬೀಸ್ಟ್’, ‘ಸರ್ಕಸ್’ ‘ದೇವ’, ‘ರೆಟ್ರೋ’ ಸಿನಿಮಾಗಳು ಸೋತಿವೆ.
ಇತ್ತೀಚೆಗೆ ಪೂಜಾ ಹೆಗ್ಡೆ ಅವರು ವಿಶೇಷ ಹಾಡುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ‘ಕೂಲಿ’ ಸಿನಿಮಾದಲ್ಲಿ ‘ಮೋನಿಕಾ’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಪೂಜಾ ಹೆಗ್ಡೆ ಇದ್ದಿದ್ದರಿಂದಲೇ ಸಿನಿಮಾ ಸೋಲು ಕಂಡಿದೆ ಎಂದು ಹೇಳಿದವರೂ ಇದ್ದಾರೆ. ಆದರೆ, ಇದನ್ನು ಫ್ಯಾನ್ಸ್ ಒಪ್ಪೋದಿಲ್ಲ.
ಇದನ್ನೂ ಓದಿ: ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗದತ್ತ ಪೂಜಾ ಹೆಗ್ಡೆ?
ಪೂಜಾ ಹೆಗ್ಡೆ ಅವರು ‘ಮೋನಿಕಾ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅವರು ಮುಂಬರುವ ‘ಜನ ನಾಯಗನ್’ ಚಿತ್ರಕ್ಕೂ ನಾಯಕಿ. ಈ ಸಿನಿಮಾಗೆ ದಳಪತಿ ವಿಜಯ್ ಹೀರೋ. ಇದು ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಈ ಚಿತ್ರ ಗೆಲ್ಲಲೇಬೇಕು. ಈಗ ಪೂಜಾ ಹೆಗ್ಡೆ ಇರೋದಕ್ಕೆ ಭಯ ಆಗುತ್ತಿದೆ ಎಂದು ಕೆಲವರು ಕೊಂಕು ತೆಗೆದಿದ್ದಾರೆ. ಅವರು ಮತ್ತೆ ಯಾವಾಗ ಗೆಲುವಿನ ಟ್ರ್ಯಾಕ್ಗೆ ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.