ಇಟಲಿಯಲ್ಲಿ ಪ್ರಭಾಸ್-ದಿಶಾ ಪಟಾಣಿ, ಅಭಿಮಾನಿಗಳಿಗೆ ಅನುಮಾನ

Kalki 2898 ad: ಪ್ರಭಾಸ್ ಮಟಿಸುತ್ತಿರುವ 'ಕಲ್ಕಿ' ಸಿನಿಮಾ ಇದೀಗ ಇಟಲಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ಚಿತ್ರೀಕರಣದಲ್ಲಿ ಪ್ರಮುಖ ವ್ಯಕ್ತಿ ಮಿಸ್ ಆಗಿದ್ದಾರೆ.

ಇಟಲಿಯಲ್ಲಿ ಪ್ರಭಾಸ್-ದಿಶಾ ಪಟಾಣಿ, ಅಭಿಮಾನಿಗಳಿಗೆ ಅನುಮಾನ
Follow us
ಮಂಜುನಾಥ ಸಿ.
|

Updated on: Mar 07, 2024 | 2:32 PM

ಪ್ರಭಾಸ್ (Prabhas) ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಈಗಾಗಲೇ ಮೂಡಿದೆ. ‘ಮಹಾನಟಿ’ ನಿರ್ದೇಶಿಸಿದ್ದ ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಈ ಸಿನಿಮಾ ಭೂತ-ಭವಿಷ್ಯದ ರೋಚಕ ಕತೆ ಒಳಗೊಂಡಿದೆ. ಸಿನಿಮಾದಲ್ಲಿ ಬಹುದೊಡ್ಡ ತಾರಾಗಣ ಇದೆ. ಇಷ್ಟು ದಿನ ದೊಡ್ಡ-ದೊಡ್ಡ ಸೆಟ್ ಗಳನ್ನು ಹಾಕಿ ‘ಕಲ್ಕಿ’ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಈಗ ಚಿತ್ರ ತಂಡ ಔಟ್ ಡೋರ್ ಶೂಟಿಂಗ್ ಗಾಗಿ ವಿದೇಶಕ್ಕೆ ಹಾರಿದೆ.

‘ಕಲ್ಕಿ’ ಚಿತ್ರತಂಡ ಇಟಲಿಗೆ ತೆರಳಿದ್ದು ಅಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ. ದೊಡ್ಡ ತಂಡವನ್ನು ನಿರ್ದೇಶಕ ನಾಗ್ ಅಶ್ವಿನ್ ಇಟಲಿಗೆ ಕರೆದೊಯ್ದಿದ್ದಾರೆ. ಪ್ರಭಾಸ್ ಹಾಗೂ ದಿಶಾ ಪಟಾನಿ ಅವರುಗಳು ಸಹ ತಂಡದ ಜೊತೆಗಿದ್ದು, ಇಟಲಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ. ಇಡೀ ತಂಡ ಇಟಲಿಯ ವಿಮಾನ ನಿಲ್ದಾಣದಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, ಚಿತ್ರ ನೋಡಿದ ಪ್ರಭಾಸ್ ಅಭಿಮಾನಿಗಳಿಗೆ ಅನುಮಾನವೊಂದು ಎದುರಾಗಿದೆ.

ಇದನ್ನೂ ಓದಿ:ನಟ ಪ್ರಭಾಸ್ ಫೇವರಿಟ್ ಹೀರೋಯಿನ್ ಯಾರು? ಈ ವಿಡಿಯೋದಲ್ಲಿದೆ ಉತ್ತರ

ಸಿನಿಮಾದ ಮುಖ್ಯ ನಟರುಗಳ ಪೈಕಿ ಇಟಲಿಗೆ ಪ್ರಭಾಸ್, ದಿಶಾ ಪಟಾನಿ ಮಾತ್ರವೇ ಹೋಗಿದ್ದಾರೆ. ದೀಪಿಕಾ ಪಡುಕೋಣೆ ಹೋಗಿಲ್ಲ. ಇದು, ‘ಕಲ್ಕಿ’ ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆಯಾ ಅಥವ ದಿಶಾ ಪಟಾಣಿಯ ಎಂಬ ಅನುಮಾನ ಮೂಡುವಂತೆ ಮಾಡಿದೆ. ಇಟಲಿಯಲ್ಲಿ ಪ್ರಭಾಸ್ ಹಾಗೂ ದಿಶಾ ನಡುವೆ ಯುಗಳ ಗೀತೆಯ ಚಿತ್ರೀಕರಣ ನಡೆಯಲಿದೆಯಂತೆ. ಅಂದಹಾಗೆ ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಈ ವಿಷಯ ಬಹಿರಂಗಪಡಿಸಿದ್ದಾರೆ. ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಈಗ ದೀಪಿಕಾ ಗರ್ಭಿಣಿ ಆಗಿರುವ ಕಾರಣ ‘ಕಲ್ಕಿ’ ಸಿನಿಮಾದ ಚಿತ್ರೀಕರಣ ಹಾಗೂ ಪ್ರಚಾರದ‌ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

‘ಕಲ್ಕಿ’ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದೆ. ಪ್ರಭಾಸ್ ನಾಯಕನಾಗಿ ನಟಿಸಿದ್ದು, ದೀಪಿಕಾ ಪಡುಕೋಣೆ, ದಿಶಾ ಪಟಾನಿ ನಾಯಕಿಯರಾಗಿ ನಟೊಸಿದ್ದಾರೆ. ಅಮಿತಾಬ್ ಬಚ್ಚನ್ ಸಹ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟ ಕಮಲ್ ಹಾಸನ್ ಈ ಸಿನಿಮಾದ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಕೆಲವು ವಿದೇಶ ತಂತ್ರಜ್ಞರು ಸಹ ಕೆಲಸ ಮಾಡಿದ್ದು, ಸಿನಿಮಾವನ್ನು ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶದಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್
ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವುದು ಹೊಸದೇನಲ್ಲ: ಜಮೀರ್ ಅಹ್ಮದ್