AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್’ ಸಿನಿಮಾ ಟ್ರೈಲರ್ ಯಾವಾಗ? ಪ್ರೊಮೋಷನ್ ಶುರು ಎಂದಿನಿಂದ?

Salaar: ಟೀಸರ್ ಮೂಲಕ ಭಾರಿ ನಿರೀಕ್ಷೆ ಹುಟ್ಟು ಹಾಕಿರುವ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾದ ಟ್ರೈಲರ್ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತು. ಆದರೆ ಹೊಸ ಸುದ್ದಿ ಪ್ರಕಾರ, ಟ್ರೈಲರ್ ಬಿಡುಗಡೆ ದಿನಾಂಕ ಬದಲಾಗಿದೆ.

'ಸಲಾರ್' ಸಿನಿಮಾ ಟ್ರೈಲರ್ ಯಾವಾಗ? ಪ್ರೊಮೋಷನ್ ಶುರು ಎಂದಿನಿಂದ?
ಸಲಾರ್
ಮಂಜುನಾಥ ಸಿ.
|

Updated on: Aug 26, 2023 | 9:41 PM

Share

ಪ್ರಭಾಸ್ (Prabhas) ನಟನೆಯ ‘ಸಾಹೋ’, ‘ರಾಧೆ ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳು ಸಾಲಾಗಿ ಸೋಲು ಕಂಡಿವೆ. ‘ಬಾಹುಬಲಿ’ ಸಿನಿಮಾ ಮೂಲಕ ದೊಡ್ಡ ಸ್ಟಾರ್ ಎನಿಸಿಕೊಂಡಿರುವ ಪ್ರಭಾಸ್, ಸಾಲು ಸಾಲು ಸೋಲುಗಳಿಂದಾಗಿ ಕಂಗೆಟ್ಟಿದ್ದಾರೆ. ಇದೀಗ ಪ್ರಭಾಸ್ ಹಾಗೂ ಅವರ ಅಭಿಮಾನಿಗಳ ನಿರೀಕ್ಷೆಗಳೆಲ್ಲ ಪ್ರಭಾಸ್​ರ ಮುಂದಿನ ಸಿನಿಮಾ ‘ಸಲಾರ್’ ಮೇಲೆ ಸ್ಥಿತವಾಗಿವೆ. ಸಲಾರ್ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿ ವೈರಲ್ ಆಗಿದೆ. ಇದೀಗ ಸಿನಿಮಾದ ಟ್ರೈಲರ್​ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

‘ಸಲಾರ್’ ಸಿನಿಮಾದ ಟೀಸರ್ ಜುಲೈ ತಿಂಗಳಲ್ಲಿ ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಟೀಸರ್​ನಲ್ಲಿ ಪ್ರಭಾಸ್ ಒಂದೆರಡು ಸೆಕೆಂಡ್​ಗಳಷ್ಟೆ ಕಾಣಿಸಿಕೊಂಡಿದ್ದರು. ಹಾಗಿದ್ದರೂ ಸಹ ಟೀಸರ್ ನಲ್ಲಿದ್ದ ಡೈಲಾಗ್​ನಿಂದಾಗಿ ಅದು ಸಖತ್ ವೈರಲ್ ಆಗಿತ್ತು. ಟೀಸರ್​ಗಿಂತಲೂ ಸಿನಿಮಾದ ಟ್ರೈಲರ್ ಅದ್ಭುತವಾಗಿರಲಿದೆ ಎಂದು ಚರ್ಚೆ ಆಗುತ್ತಿದೆ. ಆದರೆ ಸಿನಿಮಾದ ನಿರ್ಮಾಪಕರು ಮಾತ್ರ ಟ್ರೈಲರ್ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಣೆ ಮಾಡಿಲ್ಲ.

‘ಸಲಾರ್’ ಸಿನಿಮಾದ ಟ್ರೈಲರ್ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು, ಆದರೆ ಇನ್ನೆನು ಆಗಸ್ಟ್ ತಿಂಗಳು ಮುಗಿಯುತ್ತಾ ಬಂತಾದರೂ ಟ್ರೈಲರ್ ದಿನಾಂಕ ಘೋಷಣೆ ಆಗಿಲ್ಲ. ಟಾಲಿವುಡ್​ನಲ್ಲಿ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸೆಪ್ಟೆಂಬರ್ ತಿಂಗಳ ನಾಲ್ಕನೇ ವಾರ ಅಂದರೆ ಸೆಪ್ಟೆಂಬರ್ 17ರ ನಂತರ ಬಿಡುಗಡೆ ಆಗಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ಆ ಸಿನಿಮಾದ ಪ್ರಚಾರ, ಬಿಡುಗಡೆಗೆ ಸಮಸ್ಯೆ ಆಗದಂತೆ ಸಿನಿಮಾ ‘ಸಲಾರ್ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸಲು ರೆಡಿ ಆದ ಮತ್ತೋರ್ವ ಸ್ಟಾರ್ ಹೀರೋ?

‘ಸಲಾರ್’ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗಿದ್ದು ಮೊದಲ ಭಾಗ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್, ಕನ್ನಡದ ಪ್ರಮೋದ್, ಮಧು ಗುರುಸ್ವಾಮಿ, ಗರುಡಾ ರಾಮ್, ಜಗಪತಿ ಬಾಬು, ಟಿನು ಆನಂದ್ ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಸಂಗೀತ ರವಿ ಬಸ್ರೂರು ಅವರದ್ದು, ಕ್ಯಾಮೆರಾಮನ್ ಭುವನ್ ಗೌಡ. ಸಿನಿಮಾದ ಪ್ರಚಾರ ಕಾರ್ಯ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ