ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!

ಈ ವಾರ ಅತೀ ಕಳಪೆ ಪ್ರದರ್ಶನ ನೀಡಿದವರು ಯಾರು ಎಂದು ಕೇಳಲಾಯಿತು. ಇದಕ್ಕೆ ಮನೆ ಮಂದಿಯಲ್ಲಿ ಬಹುತೇಕರು ಪ್ರಶಾಂತ್​ ಹೆಸರನ್ನು ತೆಗೆದುಕೊಂಡರು.

ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!
ಪ್ರಶಾಂತ್​ ಸಂಬರಗಿ
Edited By:

Updated on: Mar 27, 2021 | 8:46 AM

ಬಿಗ್​ ಬಾಸ್​ ಮನೆಯಲ್ಲಿ ವಾರದ ಅತಿ ಕಳಪೆ ಪ್ರದರ್ಶನ ನೀಡಿದವರನ್ನು ಜೈಲಿಗೆ ಹಾಕಲಾಗುತ್ತದೆ. ಈ ಮೊದಲು ಬಿಗ್​ ಬಾಸ್​ನ ಸಾಕಷ್ಟು ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಈ ವಾರ ಪ್ರಶಾಂತ್ ಸಂಬರಗಿ ಸರದಿ. ಅವರನ್ನು ಈ ವಾರ ಜೈಲಿಗೆ ಹಾಕಲಾಗಿದೆ. ಅಚ್ಚರಿ ಎಂದರೆ, ತಮ್ಮನ್ನು ಕಳಪೆ ಎಂದು ಘೋಷಣೆ ಮಾಡಿದ ಸ್ಪರ್ಧಿಗಳ ವಿರುದ್ಧ ಪ್ರಶಾಂತ್​ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಈ ವಾರ ಅತೀ ಕಳಪೆ ಪ್ರದರ್ಶನ ನೀಡಿದವರು ಯಾರು ಎಂದು ಕೇಳಲಾಯಿತು. ಇದಕ್ಕೆ ಮನೆ ಮಂದಿಯಲ್ಲಿ ಬಹುತೇಕರು ಪ್ರಶಾಂತ್​ ಹೆಸರನ್ನು ತೆಗೆದುಕೊಂಡರು. ಮಂಜು ಪಾವಗಡ, ದಿವ್ಯಾ ಉರುಡುಗ, ರಘು ಗೌಡ, ವೈಷ್ಣವಿ ಗೌಡ, ಶಮಂತ್​, ಶಂಕರ್​ ಅಶ್ವತ್ಥ್​, ನಿಧಿ ಸುಬ್ಬಯ್ಯ ಹಾಗೂ ಕ್ಯಾಪ್ಟನ್​ ವಿಶ್ವನಾಥ್​ ಅವರು ಕಳಪೆ ಎಂದು ಪ್ರಶಾಂತ್​ ಅವರ ಹೆಸರನ್ನು ತೆಗೆದುಕೊಂಡರು. ಪ್ರಶಾಂತ್​ ಈ ವಾರ ಸರಿಯಾಗಿ ಆಟವಾಡಿಲ್ಲ. ಅವರು ಎಲ್ಲರನ್ನೂ ಡಿಮೋಟ್​ ಮಾಡಿದರು. ಅವರು ಕೂಗಾಟ ನಡೆಸಿದರು ಎಂಬಿತ್ಯಾದಿ ಕಾರಣವನ್ನು ಮನೆ ಮಂದಿ ನೀಡಿದರು.

ಇದನ್ನು ಪ್ರಶಾಂತ್​ ಬಳಿ ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎಲ್ಲರ ವಿರುದ್ಧವೂ ಕೂಗಾಡುತ್ತಾ ಬಿಗ್​ ಬಾಸ್​ ಮನೆ ಜೈಲಿನ ಒಳಗೆ ಹೋದರು. ಎಲ್ಲರೂ ಸೇರಿ ನನ್ನ ವಿರುದ್ಧ ಷಢ್ಯಂತರ ಮಾಡುತ್ತಿದ್ದಾರೆ ಎಂದು ಕೂಗಾಡಿದರು. ಮನೆಯ ಗುಂಪುಗಾರಿಕೆ ಸಹಿಸಿಕೊಳ್ಳಲು ನನ್ನ ಬಳಿ ಆಗುತ್ತಿಲ್ಲ. ನಾನು ಮೌನಿಯಾಗಿರುತ್ತೇನೆ. 24 ಗಂಟೆಗಳ ಜೈಲು ವಾಸದಲ್ಲಿ ಉಪವಾಸ ಮಾಡುತ್ತೇನೆ. ಊಟವನ್ನು ಮಾಡುವುದೇ ಇಲ್ಲ ಎಂದು ಬಿಗ್​ ಬಾಸ್​ ಕ್ಯಾಮಾರ ಬಳಿ ತೆರಳಿ ಪ್ರಶಾಂತ್​ ಹೇಳಿದರು.

ಪ್ರಶಾಂತ್​ ನಡವಳಿಕೆ ಬಿಗ್​ ಬಾಸ್​ ಮನೆಯಲ್ಲಿದ್ದ ಯಾರಿಗೂ ಇಷ್ಟವಾಗಿಲ್ಲ. ಅವರ ವಿರುದ್ಧ ಮನೆ ಮಂದಿ ಕೂಡ ಬೇಸರ ಹೊರಹಾಕಿದ್ದಾರೆ. ಅಲ್ಲದೆ, ಪ್ರಶಾಂತ್ ನೀವು ಊಟ ಮಾಡಬೇಕು ಎಂದು ಎಲ್ಲರನ್ನೂ ಮನ ಒಲಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us