Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್

Bigg Boss Kannada: ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು.

Prashanth Sambargi: ನಿಮಗೂ ಅಕ್ಕ ಇದಾರೆ ಅಲ್ವಾ?; ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಸಂಬರಗಿಗೆ ವೀಕ್ಷಕರಿಂದ ಕ್ಲಾಸ್
ಪ್ರಶಾಂತ್ ಸಂಬರಗಿ
Edited By:

Updated on: Apr 26, 2021 | 9:21 AM

ಬಿಗ್​ ಬಾಸ್​ ಮನೆಯಲ್ಲಿರುವ ಪ್ರಶಾಂತ್​ ಸಂಬರಗಿ ಯಾರದ್ದೇ ಜತೆ ಜಗಳವಾಗಲಿ, ಈ ಮಧ್ಯೆ ಹೆಣ್ಣುಮಕ್ಕಳ ಹೆಸರು ತರುತ್ತಾರೆ. ಅವರನ್ನು ಕೀಳಾಗಿ ಕಾಣುತ್ತಾರೆ ಎನ್ನುವ ಆರೋಪ ಇದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಪದೇಪದೇ ಸಾಬೀತಾಗುತ್ತಲೇ ಇದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ವೀಕೆಂಡ್​ನಲ್ಲಿ ವೀಕ್ಷಕರಿಂದ​ ದೂರವಾಣಿ ಕರೆ ಬಂದಿದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಅವರಿಗೆ ಕ್ಲಾಸ್​ ತೆಗೆದುಕೊಳ್ಳಲಾಗಿದೆ.

ಅರವಿಂದ್ ಜತೆ ಜಗಳವಾದಾಗ ಪ್ರಶಾಂತ್​ ಸಿಟ್ಟಾಗಿದ್ದರು. ದಿವ್ಯಾ ಉರುಡುಗ ನಿನ್ನ ಗರ್ಲ್​​ಫ್ರೆಂಡ್​ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ನಂತರ ದಿವ್ಯಾ ಸುರೇಶ್​ ಅವರನ್ನು ಮಂಜು ಡವ್​ ಎಂದಿದ್ದರು. ಇತ್ತೀಚೆಗೆ ನಿಧಿ ಸುಬ್ಬಯ್ಯ ಅವರ ವಿರುದ್ಧ ತುಂಬಾನೇ ಖಾಸಗಿಯಾಗಿ ಮಾತನಾಡಿದ್ದರು. ಈ ವಿಚಾರವನ್ನು ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬಿಗ್​ ಬಾಸ್​ ಮನೆಗೆ ವೀಕ್ಷಕರೊಬ್ಬರಿಂದ ಕರೆ ಬಂದಿತ್ತು. ಈ ವೇಳೆ ನೇರವಾಗಿ ಪ್ರಶ್ನೆಯನ್ನು ಪ್ರಶಾಂತ್​ಗೆ ಕೇಳಿದರು. ಮೊಟ್ಟೆ ತಿಂದಿದ್ದು ದೊಡ್ಡ ವಿಚಾರ ಆಯ್ತು. ಮೊಟ್ಟೆ ತಿಂದಿದ್ದು ತಪ್ಪಲ್ಲ. ಆದರೆ, ಪರ್ಸನಲ್​ ಆಗಿ ಮಾಡಿದ್ದು ಎಷ್ಟು ಸರಿ? ನೀವು ಮನೆಯಲ್ಲಿ ಹುಡ್ಗೀರನ್ನೇ ಟಾರ್ಗೆಟ್​ ಮಾಡ್ತೀರಾ ಎಂದರು. ಆಗ ಪ್ರಶಾಂತ್​ ಸಂಬರಗಿ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳೋಕೆ ಹೋದರು. ನಾನು ಆ ರೀತಿ ಮಾಡೇ ಇಲ್ಲ ಎಂದು ಹೇಳಲು ಮುಂದಾದರು.

ಆಗ ಮಾತನಾಡಿದ ಕಾಲರ್, ನಿಮಗೂ ಅಕ್ಕ ಇದಾರೆ. ಅವರ ವಿರುದ್ಧವೂ ಯಾರಾದರೂ ಹೀಗೆ ಮಾತಾಡಿದ್ರೆ ಸುಮ್ಮನಿರುತ್ತೀರಾ ಎಂದು ಕೇಳಿದರು. ಈ ಪ್ರಶ್ನೆಯನ್ನು ಪ್ರಶಾಂರ್​ ನಿರೀಕ್ಷಿಸಿರಲಿಲ್ಲ. ಹೀಗಾಗಿ, ಕೊಂಚ ಗಲಿಬಿಲಿ ಆದರು.

ನಾನು ಸ್ತ್ರೀ ವಿರೋಧಿ ಅಲ್ಲ. ತಪ್ಪು ಕಂಡಾಗ ಹೇಳುತ್ತಿದ್ದೀನಿ ಅಷ್ಟೇ ಎಂದು ಪ್ರಶಾಂತ್​ ಸಮಜಾಯಿಶಿ ಕೊಟ್ಟರು. ನೀವು ಮಾತಿನಲ್ಲಿ ಹೇಳುತ್ತಿದ್ದೀರಿ ಅಷ್ಟೆ. ಆದರೆ, ಅದು ಆ್ಯಕ್ಷನ್​​ನಲ್ಲಿ ಕಾಣಿಸುತ್ತಿಲ್ಲ ಎಂದು ಕಾಲರ್​ ಹೇಳಿದಾಗ ಪ್ರಶಾಂತ್​ ಮಾತನಾಡಲು ತಡವರಿಸಿದರು.

ಈ ವಿಚಾರದಲ್ಲಿ ಪ್ರಶಾಂತ್​ ಸಂಬರಗಿ ಸ್ವಲ್ಪ ತಲೆಕೆಡಿಸಿಕೊಂಡಂತೆ ಕಂಡಿದೆ.  ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಜತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಉತ್ತರಿಸಿದ ಅವರು, ಗುರು ನಿನಗೆ ಯಾವುದು ಸರಿ ಎನಿಸುತ್ತದೆಯೋ ಅದನ್ನು ಮಾಡು. ಕಾಲರ್​ ಹೇಳಿದ್ದು ನಿನಗೆ ಸರಿ ಅನಿಸಿದರೆ ಬದಲಾಗು ಎಂದರು.

ಇದನ್ನೂ ಓದಿ: ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​; ಇದಕ್ಕೆ ಉರಿದುಕೊಂಡವರೆಷ್ಟೋ!

ಶುಭಾ ಪೂಂಜಾ ಮೇಲೆ ಕಣ್ಣಿಟ್ಟ ಪ್ರಶಾಂತ್​ ಸಂಬರಗಿ; ವೀಕೆಂಡ್​ನಲ್ಲಿ ಕಾದಿದೆ ಟ್ವಿಸ್ಟ್​

Published On - 8:46 am, Mon, 26 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us