ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​; ಇದಕ್ಕೆ ಉರಿದುಕೊಂಡವರೆಷ್ಟೋ!

ಗೋಲ್ಡನ್​ ಪಾಸ್​ ಪಡೆಯುವಾಗಲೂ ಅಷ್ಟೆ, ರಾಜೀವ್​ ಹಾಗೂ ಶುಭಾ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ರಾಜೀವ್​ ಗೆದ್ದರು ಎನ್ನಲಾಗುತ್ತಿದೆ. ಇದನ್ನು ಪ್ರಶಾಂತ್​ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಮಂಜು, ರಾಜೀವ್​ಗೆ ಏಕಾಂಗಿಯಾಗಿ ಪಾಠ ಕಲಿಸಿ ಸೇಡು ತೀರಿಸಿಕೊಂಡ ಪ್ರಶಾಂತ್​;  ಇದಕ್ಕೆ ಉರಿದುಕೊಂಡವರೆಷ್ಟೋ!
ಪ್ರಶಾಂತ್​-ಚಕ್ರವರ್ತಿ
Rajesh Duggumane

| Edited By: Madan Kumar

Apr 25, 2021 | 7:18 AM

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಸ್ಟ್ರಾಂಗ್​ ಸ್ಪರ್ಧಿ ಎನ್ನುವುದು ಬಹುತೇಕರಿಗೆ ಅರ್ಥವಾಗಿದೆ. ಪ್ರಶಾಂತ್​ ಸೇಡನ್ನು ಯಾವತ್ತೂ ಮರೆಯುವುದಿಲ್ಲ ಎಂಬುದು ಕೂಡ ಶನಿವಾರದ (ಎಪ್ರಿಲ್​ 24) ಎಪಿಸೋಡ್​ನಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸ್ಪಷ್ಟವಾಗಿದೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪ್ರಶಾಂತ್​ ಕೂಡ ಇದ್ದರು. ಆದಾಗ್ಯೂ ಅವರು ರಘು ಗೌಡ ಅವರನ್ನು ಗೆಲ್ಲಿಸುವ ಮೂಲಕ ಮಂಜು ಪಾವಗಡ ಹಾಗೂ ರಾಜೀವ್​ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

ಹಾಸ್ಟೆಲ್​ ಟಾಸ್ಕ್​ನಲ್ಲಿ ದಿವ್ಯಾ ಗೆಲ್ಲೋಕೆ ಮಂಜು ಸಹಾಯ ಮಾಡಿದ್ದರು. ಈ ವಿಚಾರ ಬಯಲಾದ ನಂತರ ಮನೆಯವರಿಗೆ ಶಾಕ್​ ಆಗಿತ್ತು. ಇನ್ನು ಗೋಲ್ಡನ್​ ಪಾಸ್​ ಪಡೆಯುವಾಗಲೂ ಅಷ್ಟೆ, ರಾಜೀವ್​ ಹಾಗೂ ಶುಭಾ ಒಪ್ಪಂದ ಮಾಡಿಕೊಂಡಿದ್ದರು. ಇದರಿಂದ ರಾಜೀವ್​ ಗೆದ್ದರು ಎನ್ನಲಾಗುತ್ತಿದೆ. ಇದನ್ನು ಪ್ರಶಾಂತ್​ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.

ಎಂಟನೇ ವಾರ ಕ್ಯಾಪ್ಟನ್ಸಿ ಟಾಸ್ಕ್​ ನಡೆದಿದೆ. ಗಾರ್ಡನ್​ ಏರಿಯಾದಲ್ಲಿ ಹೂವಿನ ಮಳೆ ಆಗುತ್ತದೆ. ಸ್ಪರ್ಧಿಗಳು ಹೂವನ್ನು ಸಂಗ್ರಹಿಸಬೇಕು, ಹೆಚ್ಚು ಹೂವಿದ್ದವರು ಕ್ಯಾಪ್ಟನ್​ ಆಗುತ್ತಾರೆ. ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿದ್ದ ಮಂಜು, ರಾಜೀವ್​, ರಘು ಗೌಡ ಹಾಗೂ ಪ್ರಶಾಂತ್​ ಹೂವನ್ನು ಸಂಗ್ರಹಿಸೋಕೆ ಮುಂದಾದರು. ನಂತರ ಇದಕ್ಕೆ ಮನೆಯವರ ಸಹಾಯ ಕೂಡ ಪಡೆಯಬಹುದು ಎನ್ನುವ ಆದೇಶ ಬಂತು. ಆಗ ಅರವಿಂದ್​, ವೈಷ್ಣವಿ ಮೊದಲಾದವರು ರಘುಗೆ ಸಹಾಯ ಮಾಡಿದರು. ಕೊನೆಯಲ್ಲಿ ಅಚ್ಚರಿ ಎಂಬಂತೆ ಪ್ರಶಾಂತ್​ ತಾವು ಸಂಗ್ರಹಿಸಿದ್ದ ಹೂವನ್ನು ರಘು ಗೌಡಗೆ ನೀಡಿದರು. ಈ ಮೂಲಕ ರಘು ಕ್ಯಾಪ್ಟನ್​ ಆಗೋಕೆ ಸಹಾಯ ಮಾಡಿದರು.

ನಂತರ ಮಾತನಾಡಿದ ಪ್ರಶಾಂತ್​, ಗುಂಪು ಗಾರಿಕೆ ಮಾಡಿಕೊಂಡು ಆಡುವ ಮಂಜು ಹಾಗೂ ರಾಜೀವ್​ಗೆ ಒಂದು ಪಾಠ ಕಲಿಸಬೇಕಿತ್ತು. ಆ ಪಾಠವನ್ನು ನಾನು ಕಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡರು​. ಈ ವಿಚಾರದಲ್ಲಿ ರಾಜೀವ್​ ತುಂಬಾನೇ ಉರಿದುಕೊಂಡರು. ಪ್ರಶಾಂತ್​ ಮಾಡಿದ್ದು ಸರಿಯಲ್ಲ ಎನ್ನುವ ಮಾತನ್ನು ಕೂಡ ಹೇಳಿದರು.

ಇದನ್ನೂ ಓದಿ: ನಿನ್ನ ಚರಿತ್ರೆ, ಸಂಸ್ಕೃತಿ ಬಗ್ಗೆ ಗೊತ್ತಿದೆ, ಈಗ ಹೇಳಲಾ?; ಪ್ರಶಾಂತ್​ ಮಾತಿಗೆ ಅತ್ತ ನಿಧಿ ಸುಬ್ಬಯ್ಯ

ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada