‘ಸ್ಕ್ಯಾಮ್​ 1992’ ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್​ಗೆ ಕೈ ಹಾಕಿದ ಪ್ರತೀಕ್​ ಗಾಂಧಿ

| Updated By: ರಾಜೇಶ್ ದುಗ್ಗುಮನೆ

Updated on: Jul 02, 2021 | 6:35 PM

ರಾಜಶೇಖರ್​ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್.​ ಜಗನ್​ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ. ಈ ಬಯೋಪಿಕ್​ನಲ್ಲಿ ಪ್ರತೀಕ್​ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಸ್ಕ್ಯಾಮ್​ 1992’ ಬಳಿಕ ಮತ್ತೊಂದು ಮಹತ್ವದ ಪ್ರಾಜೆಕ್ಟ್​ಗೆ ಕೈ ಹಾಕಿದ ಪ್ರತೀಕ್​ ಗಾಂಧಿ
ಪ್ರತೀಕ್​ ಗಾಂಧಿ
Follow us on

‘ಸ್ಕ್ಯಾಮ್​ 1992’ ವೆಬ್ ಸೀರಿಸ್​ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದರಲ್ಲಿ ನಟ ಪ್ರತೀಕ್​ ಗಾಂಧಿ ಅವರು ಹರ್ಷದ್​ ಮೆಹ್ತಾ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಭಾರತೀಯ ಸ್ಟಾಕ್​ ಮಾರ್ಕೆಟ್​ನಲ್ಲಿ ನಡೆದ ಸ್ಕ್ಯಾಮ್​ ಆಧರಿಸಿ ಈ ವೆಬ್​ ಸೀರಿಸ್​ ಸಿದ್ಧಗೊಂಡಿದೆ. ಈ ವೆಬ್​ ಸೀರಿಸ್​ ಹಿಟ್​ ಆದ ನಂತರದಲ್ಲಿ ಪ್ರತೀಕ್ ಗಾಂಧಿಗೆ ಆಫರ್​ಗಳು ಹೆಚ್ಚಿವೆ. ಈಗ ಅವರು ಮಹತ್ವದ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗುತ್ತಿದೆ.

ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ವೈಎಸ್​ ರಾಜಶೇಖರ್​ ರೆಡ್ಡಿ ಜೀವನ ಆಧರಿಸಿ ಮಾಹಿ ವಿ. ರಾಘವ ಅವರು ಬಯೋಪಿಕ್​ ಸಿದ್ಧಪಡಿಸಿದ್ದರು. ‘ಯಾತ್ರಾ’ ಹೆಸರಿನಲ್ಲಿ ತೆರೆಗೆ ಬಂದ ಈ ಸಿನಿಮಾ ಯಶಸ್ಸು ಗಳಿಸಿತ್ತು. ಈಗ ಅವರು ರಾಜಶೇಖರ್​ ರೆಡ್ಡಿ ಮಗ, ಆಂಧ್ರದ ಮುಖ್ಯಮಂತ್ರಿ ವೈ.ಎಸ್.​ ಜಗನ್​ ಅವರ ಜೀವನ ಆಧರಿಸಿ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರೆ.

ಜಗನ್​ ಪಾತ್ರಕ್ಕೆ ಯಾರು ಸೂಕ್ತ ಎನ್ನುವ ಹುಡುಕಾಟದಲ್ಲಿದ್ದಾಗ ಮಾಹಿ ಅವರಿಗೆ ಸಿಕ್ಕಿದ್ದು ಪ್ರತೀಕ್​ ಗಾಂಧಿ. ‘ನಿರ್ದೇಶಕರು ಪ್ರತೀಕ್​ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಬಯೋಪಿಕ್​ ನೆರೇಷನ್​ ಪ್ರತೀಕ್​ಗೆ ಇಷ್ಟವಾಗಿದೆ. ಅವರು ಜಗನ್​ ಪಾತ್ರ ಮಾಡೋಕೆ ಒಪ್ಪಿಗೆ ನೀಡಿದ್ದಾರೆ. ಪ್ಯಾನ್​ ಇಂಡಿಯಾ ಸಿನಿಮಾ ಆಗಿರುವುದರಿಂದ ಬಾಲಿವುಡ್​ ನಟನ ಆಯ್ಕೆ ನಡೆದಿದೆ’ ಎಂದು ಮೂಲಗಳು ಹೇಳಿವೆ.

ಜಗನ್​ ಅವರು ತಮ್ಮ ಜನಪರ ಕೆಲಸದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಅವರ ಬಯೋಪಿಕ್​ ಸಿದ್ಧಗೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇನ್ನು, ಪ್ರತೀಕ್​ ಈ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲಿದ್ದಾರೆ ಎನ್ನುವ ಭರವಸೆಯೂ ಅಭಿಮಾನಿಗಳಲ್ಲಿದೆ. ‘ರಾವಣ್​ ಲೀಲಾ’ ಸಿನಿಮಾದಲ್ಲಿ ಪ್ರತೀಕ್​ ಕಾಣಿಸಿಕೊಳ್ಳುತ್ತಿದ್ದಾರೆ. ಹಾರ್ದಿಕ್​ ಗಜ್ಜರ್​ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಅಭಿಮಾನಿಗಳಿಗೆ ಕಾಣಿಸಿಕೊಂಡ ರಣವೀರ್​ ಸಿಂಗ್​; ಇಲ್ಲೊಂದು ಅಚ್ಚರಿಯ ವಿಚಾರ ಗಮನಿಸಿದ್ರಾ?

ತೆರೆಯ ಮೇಲೆ ಬರಲಿದೆ ಅಬ್ದುಲ್ ಕರೀಂ ತೆಲಗಿ ಹಗರಣ; ಸ್ಕ್ಯಾಮ್ 1992 ನಿರ್ದೇಶಕರಿಂದಲೇ ಸ್ಕ್ಯಾಮ್ 2003

Published On - 6:28 pm, Fri, 2 July 21