
ನಟಿ ಪ್ರೀತಿ ಜಿಂಟಾ (Preity Zinta) ಅವರು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹೊಂದಿದ್ದಾರೆ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅವರ ತಂಡ ಕಪ್ ಗೆದ್ದಿಲ್ಲ. ಆರ್ಸಿಬಿ ಕೂಡ ಕಪ್ ಗೆದ್ದಿರಲಿಲ್ಲ. ಆದರೆ, ಆರ್ಸಿಬಿ ಕಾಯುವಿಕೆ ಪೂರ್ಣಗೊಂಡಿದ್ದು, ಕಪ್ ಎತ್ತಾಗಿದೆ. ಆದರೆ, ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡ ಮತ್ತೆ ಕಾಯಬೇಕಿದೆ. ರೋಚಕ ಪಂದ್ಯದಲ್ಲಿ ಸೋತ ಬಳಿಕ ಪ್ರೀತಿ ಜಿಂಟಾ ಬೇಸರದಲ್ಲಿ ಇದ್ದರು. ಆದರೆ, ಅವರು ನಗೋದು ಮರೆತಿಲ್ಲ. ಇದು ಅವರ ನಿಜವಾದ ಕ್ರೀಡಾಸ್ಫೂರ್ತಿಯನ್ನು ತೋರಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರ ವಿಷಯವನ್ನು ಎಳೆದು ತಂದಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ತಂಡ ಸಾಕಷ್ಟು ಕಷ್ಟದಲ್ಲಿ ಬ್ಯಾಟ್ ಬೀಸಿತು. ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ ತಂಡ ಉತ್ತಮ ಆರಂಭವನ್ನೇನೋ ಕಂಡಿತು. ಆದರೆ, ಸಾಲು ಸಾಲು ವಿಕೆಟ್ಗಳು ಬಿದ್ದವು. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೇವಲ 1 ರನ್ಗೆ ಔಟ್ ಆದರು. ಅಂತಿಮವಾಗಿ ಅವರು 7 ವಿಕೆಟ್ ನಷ್ಟಕ್ಕೆ 184 ರನ್ ಬಾರಿಸಲಷ್ಟೇ ಶಕ್ಯವಾದರು. ಈ ಮೂಲಕ ಆರ್ಸಿಬಿ ಕಪ್ ಎತ್ತಿದೆ.
ಕಪ್ ಎತ್ತಬೇಕು ಎಂಬುದು ಆರ್ಸಿಬಿ ತಂಡದ ದೊಡ್ಡ ಕನಸಾಗಿತ್ತು. ಆ ಕನಸು ಈಗ ಈಡೇರಿದೆ. ಅತ್ತ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಅವರು ಸಾಕಷ್ಟು ಬೇಸರದಲ್ಲಿ ಇದ್ದರು. ಶ್ರೇಯಸ್ ಔಟ್ ಆದ ಬಳಿಕ ಅವರಿಗೆ ಶಾಕ್ ಆಗಿತ್ತು. ಪಂದ್ಯ ಸೋತ ಬಳಿಕ ಗ್ರೌಂಡ್ನಲ್ಲಿ ಓಡಾಡುತ್ತಿದ್ದ ಪ್ರೀತಿ ಜಿಂಟಾ ಅವರು ನಗೋದನ್ನು ಮರೆಯಲಿಲ್ಲ. ಎಲ್ಲಾ ಆಟಗಾರರನ್ನು ಅವರು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದರು.
ಇದನ್ನೂ ಓದಿ: ಖುಷಿ ತಡೆಯಲಾರದೆ ತಣ್ಣೀರು ಸುರಿದುಕೊಂಡ ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ ಅಯಾನ್
ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡೆತನವನ್ನು ಕಾವ್ಯಾ ಮಾರನ್ ಹೊಂದಿದ್ದಾರೆ. ಅವರು ಪ್ರತಿ ಬಾರಿ ಪಂದ್ಯ ಸೋತಾಗಲೂ ಸಾಕಷ್ಟು ಅಪ್ಸೆಟ್ ಆಗುತ್ತಾರೆ. ಆದರೆ, ಪ್ರೀತಿ ಆ ರೀತಿ ಅಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Wed, 4 June 25