ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ

|

Updated on: Mar 06, 2025 | 3:44 PM

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಟ ಪೃಥ್ವಿರಾಜ್ ಸುಕುಮಾರನ್ ಅವರು ‘SSMB 29’ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳದಿದ್ದರೂ ಕೂಡ ಅಭಿಮಾನಿಗಳಿಗೆ ವಿಷಯ ಗೊತ್ತಾಗಿದೆ. ಮಹೇಶ್ ಬಾಬು ನಟನೆಯ ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದಾರೆ.

ಮಹೇಶ್ ಬಾಬು-ರಾಜಮೌಳಿ ಸಿನಿಮಾ ತಂಡಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಎಂಟ್ರಿ
Prithviraj Sukumaran, Rajamouli, Mahesh Babu
Follow us on

ಖ್ಯಾತ ನಿರ್ದೇಶಕ ರಾಜಮೌಳಿ (Rajamouli) ಅವರು ಮಹೇಶ್ ಬಾಬು (Mahesh Babu) ಜೊತೆ ಕೈ ಜೋಡಿಸಿದ್ದು, ಈಗಾಗಲೇ ಈ ಸಿನಿಮಾದ ಬಗ್ಗೆ ಹಲವು ಸುದ್ದಿಗಳು ಕೇಳಿಬರುತ್ತಿವೆ. ಸದ್ಯಕ್ಕೆ ಈ ಸಿನಿಮಾದ ಶೀರ್ಷಿಕೆ ಬಹಿರಂಗ ಆಗಿಲ್ಲ. ತಾತ್ಕಾಲಿಕವಾಗಿ ‘SSMB 29’ ಎಂದು ಕರೆಯಲಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ. ಹಲವು ತಿಂಗಳುಗಳ ತಯಾರಿ ಬಳಿಕ ಈಗ ಒಡಿಶಾದಲ್ಲಿ ಶೂಟಿಂಗ್ ಶುರು ಮಾಡಲಾಗಿದೆ. ಇನ್ನೊಂದು ಹೊಸ ವಿಷಯ ಏನೆಂದರೆ, ಈ ಸಿನಿಮಾದ ಪಾತ್ರವರ್ಗಕ್ಕೆ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಕೂಡ ಸೇರ್ಪಡೆ ಆಗಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಅವರು ‘SSMB 29’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಬಗ್ಗೆ ಅನೇಕ ದಿನಗಳಿಂದ ಗಾಸಿಪ್ ಹರಿದಾಡುತ್ತಿತ್ತು. ಸೋಶಿಯಲ್​ ಮೀಡಿಯಾದಲ್ಲಿ ಅವರ ತಾಯಿ ಮಲ್ಲಿಕಾ ಮಾಡಿದ ಕಮೆಂಟ್​ನಿಂದ ಅಭಿಮಾನಿಗಳಿಗೆ ವಿಷಯ ಖಚಿತ ಆಗಿತ್ತು. ‘ಮುಂದಿನದ್ದು ರಾಜಮೌಳಿ ಸಿನಿಮಾ. ಇಂದು ರಾತ್ರಿ ಹೊರಡುತ್ತಿದ್ದಾರೆ’ ಎಂದು ಮಲ್ಲಿಕಾ ಕಮೆಂಟ್ ಮಾಡಿ, ಬಳಿಕ ಅದನ್ನು ಡಿಲೀಟ್ ಮಾಡಿದ್ದರು!

ಈಗ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಇಬ್ಬರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲಿಗೆ, ಅಭಿಮಾನಿಗಳಿಗೆ ಇದ್ದ ಎಲ್ಲ ಅನುಮಾನಗಳು ಬಗೆಹರಿದಿವೆ. ಹಾಗಿದ್ದರೂ ಕೂಡ ಚಿತ್ರತಂಡದವರು ಈ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ
ಆರೋಪಗಳ ಬಳಿಕ ವಿಡಿಯೋ ಹಂಚಿಕೊಂಡ ಎಸ್​ಎಸ್ ರಾಜಮೌಳಿ, ಹೇಳಿದ್ದೇನು?
ರಾಜಮೌಳಿ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡ ಹಳೆ ಗೆಳೆಯ, ಕಾರಣ?
ರೆಡಿಯೋ ಜಾಕಿ ಹಿಂದೆ ಬಿದ್ದ ರಾಜಮೌಳಿ, ಪ್ರಪೋಸ್ ಮಾಡೇಬಿಟ್ಟ ಚೆಲುವೆ
ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ಹೆಸರು ಫಿಕ್ಸ್

ಇದನ್ನೂ ಓದಿ: SS Rajamouli: ಈ ಎರಡು ಹಾಡುಗಳನ್ನು ರಾಜಮೌಳಿ ಮತ್ತೆ ಮತ್ತೆ ನೋಡ್ತಾರಂತೆ

‘SSMB 29’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ ಎಂಬುದನ್ನು ಕೂಡ ಚಿತ್ರತಂಡದವರು ಹೇಳಿಲ್ಲ. ಆದರೆ ಅವರ ತಾಯಿ ಮಧು ಚೋಪ್ರಾ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಬಾಯಿ ಬಿಟ್ಟಿದ್ದಾರೆ. ‘ಈಗಾಗಲೇ ಪ್ರಿಯಾಂಕಾ ಆ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾಳೆ’ ಎಂದು ಮಧು ಚೋಪ್ರಾ ಹೇಳಿರುವುದರಿಂದ ಅಭಿಮಾನಿಗಳಿಗೆ ಖಚಿತವಾಗಿದೆ.

ಇದನ್ನೂ ಓದಿ: ‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ

ರಾಜಮೌಳಿ ಸಿನಿಮಾದಲ್ಲಿ ಪ್ಯಾನ್ ಇಂಡಿಯಾ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರಿಗೆ ದೇಶಾದ್ಯಂತ ಜನಪ್ರಿಯತೆ ಇದೆ. ಮಹೇಶ್ ಬಾಬು ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Thu, 6 March 25