AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಾಲ್ಕು ಧಾರಾವಾಹಿಗಳ ಮಧ್ಯೆ ಬಿಗ್ ಕಾಂಪಿಟೇಷನ್; ಟಿಆರ್​ಪಿಯಲ್ಲಿ ನಂಬರ್ ಯಾರು?

2025ನೇ ವರ್ಷದ 8ನೇ ವಾರದ ಟಿಆರ್​ಪಿ ವರದಿಯ ಪ್ರಕಾರ, ಜೀ ಕನ್ನಡದ ‘ಅಣ್ಣಯ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. ‘ಲಕ್ಷ್ಮೀ ನಿವಾಸ’ ಮತ್ತು ‘ಶ್ರಾವಣಿ ಸುಬ್ರಮಣ್ಯ’ಮೊದಲಾದ ಧಾರಾವಾಹಿಗಳು ಟಾಪ್​ನಲ್ಲಿ ಸ್ಥಾನ ಪಡೆದುಕೊಂಡಿವೆ. ಅದೇ ರೀತಿ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಮತ್ತು ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋಗಳಿಗೆ ಉತ್ತಮ ಟಿವಿಆರ್ ದೊರೆತಿದೆ.

ಈ ನಾಲ್ಕು ಧಾರಾವಾಹಿಗಳ ಮಧ್ಯೆ ಬಿಗ್ ಕಾಂಪಿಟೇಷನ್; ಟಿಆರ್​ಪಿಯಲ್ಲಿ ನಂಬರ್ ಯಾರು?
ಸೀರಿಯಲ್ ಟಿಆರ್​ಪಿ
TV9 Web
| Edited By: |

Updated on: Mar 06, 2025 | 3:06 PM

Share

ಧಾರಾವಾಹಿಗಳ ಮಧ್ಯೆ ಟಿಆರ್​ಪಿ ಸಮರ ಸದಾ ಜೋರಿರುತ್ತದೆ. ಸ್ಪರ್ಧಾತ್ಮಕವಾಗಿ ಧಾರಾವಾಹಿಗಳ ಕಥೆ ಹಾಗೂ ಮೇಕಿಂಗ್​ನ ಮಾಡಲಾಗುತ್ತದೆ. ಈಗ 2025ನೇ ಸಾಲಿನ ಎಂಟನೇ ವಾರದ ಟಿಆರ್​ಪಿ ಲಭ್ಯವಾಗಿದೆ. ಟಿಆರ್​ಪಿಯಲ್ಲಿ ಜೀ ಕನ್ನಡದ ನಾಲ್ಕು ಧಾರಾವಾಹಿಗಳ ಮಧ್ಯೆ ಭಾರೀ ಸ್ಪರ್ಧೆ ಏರ್ಪಟ್ಟಿದ್ದು ಕೆಲವೇ ಪಾಯಿಂಟ್​ಗಳ ಅಂತರದಲ್ಲಿ ಕೆಲವು ಧಾರಾವಾಹಿಗೆ ಮೊದಲ ಸ್ಥಾನ ಮಿಸ್ ಆಗಿದೆ. ಯಾವುದು ಆ ಧಾರಾವಾಹಿಗಳು? ಯಾವ ಧಾರಾವಾಹಿಗೆ ಯಾವ ಸ್ಥಾನ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಎಂಟನೇ ವಾರದ ಟಿಆರ್​ಪಿಯಲ್ಲಿ ಕರ್ನಾಟಕದ ಮಟ್ಟದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಇತ್ತೀಚೆಗೆ ಧಾರಾವಾಹಿಯ ಗುಂಡಮ್ಮನ ವಿವಾಹ ನೆರವೇರಿದೆ. ಈ ಕಾರಣಕ್ಕೆ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಸಿಕ್ಕಿದೆ. ಈ ಧಾರಾವಾಹಿಯಲ್ಲಿ ನಿಶಾ ರವಿಕೃಷ್ಣನ್, ವಿಕಾಸ್ ಉತ್ತಯ್ಯ ಮೊದಲಾದವರು ನಟಿಸಿದ್ದಾರೆ.

ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಈ ಧಾರಾವಾಹಿ ಜನರನ್ನು ಸೆಳೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಇತ್ತೀಚೆಗೆ ಹೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಕೆಲಸ ಮಾಡುತ್ತಿದೆ. ನಾಲ್ಕನೇ ಸ್ಥಾನದಲ್ಲಿ ಹಾರರ್ ಧಾರಾವಾಹಿ ‘ನಾ ನಿನ್ನ ಬಿಡಲಾರೆ’ ಇದೆ. ಈ ಧಾರಾವಾಹಿ ಮೇಕಿಂಗ್ ಹಾಗೂ ವಿಎಫ್​ಎಕ್ಸ್ ವಿಚಾರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಾಲ್ಕು ಧಾರಾವಾಹಿಗಳ ಟಿಆರ್​ಪಿಯಲ್ಲಿ 0.1 ಅಂತರ ಮಾತ್ರ ಇದೆ.

ಇದನ್ನೂ ಓದಿ
Image
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ನಂಜ-ಪುಟ್ಮಲ್ಲಿ ಮೋಡಿ
Image
ಸೀರಿಯಲ್ ಟಿಆರ್​ಪಿಯಲ್ಲಿ ಈ ಧಾರಾವಾಹಿಯೇ ನಂಬರ್ 1; ದಾಖಲೆಗಳೆಲ್ಲ ಉಡೀಸ್
Image
ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ
Image
ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ನಂಜ-ಪುಟ್ಮಲ್ಲಿ ಮೋಡಿ; ಉಮಾಶ್ರೀ ಜತೆ ರವಿಚಂದ್ರನ್

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿಯಲ್ಲಿ ನಾನಾ ರೀತಿಯ ಟ್ವಿಸ್ಟ್​ಗಳನ್ನು ತರಲಾಗುತ್ತಿದೆ. ಆದರೆ, ಇತ್ತೀಚೆಗೆ ಇದು ಧಾರಾವಾಹಿಗೆ ಅಷ್ಟಾಗಿ ಸಹಾಯ ಆಗುತ್ತಿಲ್ಲ. ‘ಸೀತಾ ರಾಮ’ ಧಾರಾವಾಹಿ ಕೂಡ ದೊಡ್ಡ ಮಟ್ಟದಲ್ಲಿ ಟಿಆರ್​ಪಿ ಪಡೆದುಕೊಳ್ಳಲವಲ್ಲಿ ವಿಫಲವಾಗಿದೆ.

‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ಇತ್ತೀಚೆಗೆ ಆರಂಭ ಆಗಿದೆ. ನಗರ ಭಾಗದಲ್ಲಿ ಈ ಶೋಗೆ 5.7 ಟಿವಿಆರ್ ಸಿಕ್ಕಿದೆ. ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋಗೆ 4.5 ಟಿವಿಆರ್ ದೊರೆತಿದೆ. ಎರಡೂ ರಿಯಾಲಿಟಿ ಶೋಗಳು ಒಂದೇ ರೀತಿಯ ಥೀಮ್ ಹೊಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್