
ಬಾಲಿವುಡ್‌ನಿಂದ ಹಾಲಿವುಡ್‌ಗೆ ಪ್ರಯಾಣ ಬೆಳೆಸಿದ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ. ಪ್ರಿಯಾಂಕಾ ಯಾವಾಗಲೂ ತಮ್ಮ ನಟನೆಯಿಂದ ಗಮನ ಸೆಳೆಯುತ್ತಾರೆ. ಪ್ರಿಯಾಂಕಾ ಎಲ್ಲಾ ರೀತಿಯ ಪಾತ್ರಗಳಲ್ಲಿಯೂ ತಮ್ಮನ್ನು ತಾವು ಸಮರ್ಥರೆಂದು ಸಾಬೀತುಪಡಿಸಿದ್ದಾರೆ. ನಟನೆಯ ಜೊತೆಗೆ, ಗಳಿಕೆಯ ವಿಷಯದಲ್ಲಿ ಪ್ರಿಯಾಂಕಾ ದೊಡ್ಡ ನಟಿಯರನ್ನು ಸಹ ಹಿಂದಿಕ್ಕಿದ್ದಾರೆ. ಅವರು ಶ್ರೀಮಂತ ನಟಿಯರ ಸಾಲಿನಲ್ಲಿ ಇದ್ದಾರೆ. ಅವರಿಗೆ ಇಂದು (ಜುಲೈ 18) ಜನ್ಮದಿನ.
ಪ್ರಿಯಾಂಕಾ ಇಂದು ತಮ್ಮ ವೃತ್ತಿಜೀವನದಲ್ಲಿ ಯಾವುದೇ ಮೈಲಿಗಲ್ಲು ತಲುಪಿದ್ದರೂ, ಅದನ್ನು ಅವರು ಸ್ವಂತ ಪ್ರಯತ್ನದಿಂದ ಸಾಧಿಸಿದ್ದಾರೆ. ಇಂದು, ಪ್ರಿಯಾಂಕಾ ಚೋಪ್ರಾ ಅನೇಕ ಐಷಾರಾಮಿ ಮನೆಗಳು, ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ ಮತ್ತು ಆದಾಯಕ್ಕೆ ಅನೇಕ ಆಯ್ಕೆಗಳನ್ನು ಹೊಂದಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ಒಟ್ಟು ಆಸ್ತಿ ಸುಮಾರು 583 ಕೋಟಿ ರೂಪಾಯಿ. 2019 ರ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಪ್ರಿಯಾಂಕಾ ಅವರ ವಾರ್ಷಿಕ ಆದಾಯ ರೂ. 23.4 ಕೋಟಿ ಎಂದು ದಾಖಲಾಗಿದೆ. ಇದು ಈಗ ದುಪ್ಪಟ್ಟಾಗಿದೆ. ಪತಿ ನಿಕ್ ಜೋನಾಸ್ ಅವರ ಆಸ್ತಿ 666 ಕೋಟಿ ರೂಪಾಯಿ. ಇವರ ಒಟ್ಟೂ ಆಸ್ತಿ ಸೇರಿದರೆ 1250 ಕೋಟಿ ರೂಪಾಯಿ ಆಗಲಿದೆ.
ಪ್ರಿಯಾಂಕಾ ಚೋಪ್ರಾ ಗಳಿಸುವ ಗಳಿಕೆ ವಿಭಿನ್ನ ಮಾರ್ಗಗಳನ್ನು ಹೊಂದಿದೆ. ಹಿಂದಿಯಲ್ಲಿ ಅವರು ಪ್ರತಿ ಚಿತ್ರಕ್ಕೆ ಸುಮಾರು 4-5 ಕೋಟಿ ರೂ. ಪಡೆಯುತ್ತಿದ್ದರು. ಈಗ ಅವರ ಸಂಭಾವನೆ ಮಿತಿ ಮೀರಿ ಏರಿಕೆ ಆಗಿದೆ. ಸಿಟಾಡೆಲ್ ಸರಣಿಗಾಗಿ ಅವರು 41 ಕೋಟಿ ರೂಪಾಯಿ ಪಡೆದಿದ್ದರು ಎನ್ನಲಾಗಿದೆ. ಪ್ರಿಯಾಂಕಾ ಪರ್ಪಲ್ ಪೆಬಲ್ ಪಿಕ್ಚರ್ಸ್ (ಪಿಪಿಪಿ) ಎಂಬ ಕಂಪನಿಯನ್ನು ಸಹ ಸ್ಥಾಪಿಸಿದರು. ನಟಿ ಈ ಕಂಪನಿಯ ಮೂಲಕವೂ ಹಣ ಗಳಿಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಕೂಡ ಅನೇಕ ಉತ್ಪನ್ನಗಳಿಗೆ ಬ್ರ್ಯಾಂಡ್‌ಗಳ ಪ್ರಚಾರ ಮಾಡುತ್ತಾರೆ. ಅವರು ಇದಕ್ಕಾಗಿ 2 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಪ್ರಿಯಾಂಕಾ ಚೋಪ್ರಾ ಕೂಡ ಅನೇಕ ಐಷಾರಾಮಿ ವಾಹನಗಳನ್ನು ಹೊಂದಿದ್ದಾರೆ. ನಟಿ ರೋಲ್ಸ್ ರಾಯಲ್, ಬಿಎಂಡಬ್ಲ್ಯು, ಮರ್ಸಿಡಿಸ್, ಪೋರ್ಷೆ ಕಯೆನ್ನೆ, ಕರ್ಮ ಫಿಶರ್‌ನಂತಹ ದುಬಾರಿ ವಾಹನಗಳನ್ನು ಹೊಂದಿದ್ದಾರೆ. ನಟಿಯ ಈ ವಾಹನಗಳ ಬೆಲೆಕೋಟಿಗಳಲ್ಲಿವೆ.
ಇದನ್ನೂ ಓದಿ: ತಮ್ಮದೇ ಹಳೆ ಚಿತ್ರಗಳ ನೋಡುತ್ತಾ ಭಾವುಕರಾದ ನಟಿ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಮನೆ..
ಪ್ರಿಯಾಂಕಾ ಚೋಪ್ರಾ ಕೂಡ ಅನೇಕ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ನಟಿ ಮುಂಬೈನಿಂದ ಲಾಸ್ ಏಂಜಲೀಸ್ ವರೆಗೆ ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ. ಪ್ರಿಯಾಂಕಾ ಲಾಸ್ ಏಂಜಲೀಸ್‌ನಲ್ಲಿ ಅತ್ಯಂತ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದು ಕೋಟಿಗಟ್ಟಲೆ ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ, ಪ್ರಿಯಾಂಕಾ ಮುಂಬೈನಲ್ಲಿ ಒಂದು ಮನೆಯನ್ನು ಹೊಂದಿದ್ದಾರೆ. ಇದರಲ್ಲಿ ಕೆಲವು ಕಟ್ಟಡಗಳನ್ನು ಅವರು ಮಾರಿದ್ದಾರೆ. ಗೋವಾದಲ್ಲಿಯೂ ಸಹ ಒಂದು ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ನಟಿ 2018 ರಲ್ಲಿ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಆ ಬಳಿಕ ವಿದೇಶದಲ್ಲಿ ಸೆಟಲ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:21 am, Fri, 18 July 25