ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ನಟಿಗೆ ಕಿಸ್ ಮಾಡಿದ ನಿರ್ದೇಶಕ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ರವಿ ಮುತ್ತು ಕೊಟ್ಟಿದ್ದನ್ನು ನೋಡಿ ಮನ್ನಾರಾ ಶಾಕ್​ಗೆ ಒಳಗಾಗಿದ್ದಾರೆ. ಆದರೂ ಅದನ್ನು ತೋರಿಸಿಕೊಳ್ಳದೆ ಅವರು ನಗುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿವೆ.

ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ನಟಿಗೆ ಕಿಸ್ ಮಾಡಿದ ನಿರ್ದೇಶಕ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಮನ್ನಾರಾ-ರವಿ
Follow us
ರಾಜೇಶ್ ದುಗ್ಗುಮನೆ
|

Updated on: Aug 30, 2023 | 7:53 AM

ನಟಿಯರ ಪಕ್ಕ ಫೋಟೋ ತೆಗೆಸಿಕೊಳ್ಳೋಕೆ ನಿಲ್ಲುವ ಅಭಿಮಾನಿಗಳು ಏನು ಮಾಡುತ್ತಾರೆ ಎಂಬುದನ್ನು ಹೇಳೋದು ಕೆಲವೊಮ್ಮೆ ಕಷ್ಟಸಾಧ್ಯ. ನಿರ್ದೇಶಕರು ಕೂಡ ಇದೇ ರೀತಿ ವರ್ತಿಸಿದರೆ ಹೇಗೆ? ಅಂಥ ಘಟನೆಯೊಂದು ನಡೆದಿದೆ. ಪ್ರಿಯಾಂಕಾ ಚೋಪ್ರಾ ಕುಟುಂಬದ ಮನ್ನಾರಾ ಚೋಪ್ರಾಗೆ (Mannara Chopra) ಇದೇ ರೀತಿಯ ಅನುಭವ ಆಗಿದೆ. ನಿರ್ದೇಶಕ ಎಎಸ್​ ರವಿ ಕುಮಾರ್ ಚೌಧರಿ ಅವರು ನಟಿಯ ಕೆನ್ನೆಗೆ ಕಿಸ್ ಮಾಡಿದ್ದಾರೆ. ರವಿ ಕುಮಾರ್ (Ravi Kumar) ಅವರಿಂದ ಮನ್ನಾರಾ ಇದನ್ನು ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರಿಗೆ ಏನು ಹೇಳಬೇಕು ಎಂಬುದೇ ತೋಚಲಿಲ್ಲ.

ಮಂಗಳವಾರ (ಆಗಸ್ಟ್ 30) ಈ ಘಟನೆ ನಡೆದಿದೆ. ಮನ್ನಾರಾ ನಟಿಸುತ್ತಿರುವ ‘ತಿರಗಬದರ ಸಾಮಿ’ ಚಿತ್ರಕ್ಕೆ ರವಿ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತಂಡ ಭಾಗಿ ಆಗಿತ್ತು. ಎಲ್ಲರೂ ಬಂದು ನಟಿಯ ಜೊತೆ ಪೋಸ್ ಕೊಡುತ್ತಿದ್ದರು. ಅದೇ ರೀತಿ ರವಿ ಕೂಡ ಆಗಮಿಸಿ ಮನ್ನಾರಾ ಹೆಗಲಮೇಲೆ ಕೈ ಹಾಕಿ ನಿಂತಿದ್ದಾರೆ. ನಂತರ ಏಕಾಏಕಿ ನಟಿಯ ಕೆನ್ನೆಗೆ ಕಿಸ್ ಮಾಡಿದ್ದಾರೆ.

ರವಿ ಮುತ್ತು ಕೊಟ್ಟಿದ್ದನ್ನು ನೋಡಿ ಮನ್ನಾರಾ ಶಾಕ್​ಗೆ ಒಳಗಾಗಿದ್ದಾರೆ. ಆದರೂ ಅದನ್ನು ತೋರಿಸಿಕೊಳ್ಳದೆ ಅವರು ನಗುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ಪಾಪ.. ಅವರಿಗೆ ಎಷ್ಟು ಮುಜುಗರ ಆಗಿರಬಹುದು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇದು ಲೈಂಗಿಕ ಕಿರುಕುಳ. ಅವರು ನಗುತ್ತಿರಬಹುದು. ಆದರೆ, ಮನ್ನಾರಾ ಮನಸ್ಸಲ್ಲಿ ಬೇಸರ ಇದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಷ್ಟು ಚೀಪ್. ಇವರೇ ಮುಂದೆ ಮೀಟೂ ಶೂರರಾಗೋದು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.  ಈ ವಿಡಿಯೋ ಬಗ್ಗೆ ಮನ್ನಾರಾ ಅವರು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಆರಂಭಿಸಿದ್ದ ಹೋಟೆಲ್ ಬಿಸ್ನೆಸ್​ನಿಂದ ಹೊರ ನಡೆದ ನಟಿ ಪ್ರಿಯಾಂಕಾ ಚೋಪ್ರಾ

ಈ ಮೊದಲು ನಟಿ ಕಾಜಲ್ ಅಗರ್​ವಾಲ್ ಕೂಡ ಇದೇ ರೀತಿಯ ತೊಂದರೆ ಅನುಭವಿಸಿದ್ದರು. ಈ ಫೋಟೋಗಳು ವೈರಲ್ ಆಗಿತ್ತು. ಸಿನಿಮಾಟೋಗ್ರಾಫರ್ ಚೋಟಾ ಕೆ ನಾಯ್ಡು ಅವರು ಕಾಜಲ್​ಗೆ ವೇದಿಕೆ ಮೇಲೆ ಕಿಸ್ ಮಾಡಿದ್ದರು.

ಮನ್ನಾರಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 9 ವರ್ಷಗಳು ಕಳೆದಿವೆ. ಆದರೆ, ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. 2019ರಿಂದ ಈಚೆ ಅವರ ಹೊಸ ಸಿನಿಮಾ ರಿಲೀಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ