AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pushap 2: ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್

ಹಿಂದಿ ಚಿತ್ರಗಳೇ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಿರುವಾಗ ತೆಲುಗು ಸಿನಿಮಾ ಒಂದು ಬಾಲಿವುಡ್​ನಲ್ಲಿ ಪಾರುಪತ್ಯ ನಡೆಸಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್​’ ಚಿತ್ರದ ದಾಖಲೆಗಳನ್ನು ಈ ಸಿನಿಮಾ ನೆಲಸಮ ಮಾಡಿದೆ.

Pushap 2: ಭಾನುವಾರ ಬಾಕ್ಸ್ ಆಫೀಸ್​ನಲ್ಲಿ ಮಹಾಪ್ರಳಯ; ಬಾಲಿವುಡ್​ನ ದಾಖಲೆಗಳನ್ನು ಪುಡಿ ಮಾಡಿದ ಪುಷ್ಪರಾಜ್
ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on:Dec 09, 2024 | 9:43 AM

Share

‘ಪುಷ್ಪ 2’ ಚಿತ್ರ ಭಾರತ ಹಾಗೂ ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದವರಿಗೆ ಸಿನಿಮಾ ಸಖತ್ ಇಷ್ಟ ಆಗುತ್ತಿದೆ. ಹೀಗಾಗಿ, ಇಲ್ಲಿಗಿಂತ ಅಲ್ಲಿಯೇ ಹೆಚ್ಚು ಗಳಿಕೆ ಆಗುತ್ತಿದೆ. ಭಾನುವಾರ (ಡಿಸೆಂಬರ್ 8) ಬಾಕ್ಸ್​ ಆಫೀಸ್​ನಲ್ಲಿ ಮಹಾ ಪ್ರಳಯವೇ ನಡೆದು ಹೋಗಿದೆ. ಗಳಿಕೆ ನೋಡಿ ಬಾಲಿವುಡ್​ ಮಂದಿಯೂ ಅಚ್ಚರಿಗೊಂಡಿದ್ದಾರೆ.

ಹಿಂದಿ ಚಿತ್ರಗಳೇ ಬಾಲಿವುಡ್​ನಲ್ಲಿ ಸದ್ದು ಮಾಡುತ್ತಿಲ್ಲ. ಹೀಗಿರುವಾಗ ತೆಲುಗು ಸಿನಿಮಾ ಒಂದು ಬಾಲಿವುಡ್​ನಲ್ಲಿ ಪಾರುಪತ್ಯ ನಡೆಸಿದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್​’ ಚಿತ್ರದ ದಾಖಲೆಗಳನ್ನು ಈ ಸಿನಿಮಾ ನೆಲಸಮ ಮಾಡಿದೆ. ಇದು, ‘ಪುಷ್ಪರಾಜ್​’ನ ತಾಕತ್ತನ್ನು ತೋರಿಸುತ್ತದೆ. ಈ ಸಿನಿಮಾದ ಗಳಿಕೆ ನಿತ್ಯ ನೂರು ಕೋಟಿ ರೂಪಾಯಿ ಮೇಲೆಯೇ ಇದೆ.

ಗುರುವಾರ (ಡಿಸೆಂಬರ್ 5) ಈ ಚಿತ್ರ175 ಕೋಟಿ ರೂಪಾಯಿ ಗಳಿಸಿತು. ಶುಕ್ರವಾರ (ಡಿಸೆಂಬರ್ 6) 93.8 ಕೋಟಿ ರೂಪಾಯಿ, ಶನಿವಾರ (ಡಿಸೆಂಬರ್ 7) 119 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಚಿತ್ರ 141 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಲೆಕ್ಕಾಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ. ಅದರಲ್ಲೂ ಬಾಲಿವುಡ್​ನಲ್ಲಿ ಈ ಚಿತ್ರ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಈ ಮೂಲಕ ಮೊದಲ ವಾರವೇ ಈ ಚಿತ್ರ ಭಾರತದಲ್ಲಿ 529 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ವಿಶೇಷ ಎಂದರೆ ಮೊದಲ ಭಾನುವಾರ ‘ಪುಷ್ಪ 2’ ಚಿತ್ರ ಹಿಂದಿಯಲ್ಲಿ ಸುಮಾರು 83 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಹಿಂದೆ ಜವಾನ್ ಸಿನಿಮಾ 80 ಕೋಟಿ ರೂಪಾಯಿ ಗಳಿಕೆ ಮಾಡಿ ಮೊದಲ ಭಾನುವಾರದ ಕಲೆಕ್ಷನ್​ನಲ್ಲಿ ಅಗ್ರಸ್ಥಾನದಲ್ಲಿ ಇತ್ತು. ಆ ದಾಖಲೆಯನ್ನು ಚಿತ್ರ ಪುಡಿ ಮಾಡಿದೆ.

ಇದನ್ನೂ ಓದಿ: ಮೂರೇ ದಿನಕ್ಕೆ 621 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಪುಷ್ಪ 2’ ಸಿನಿಮಾ

ಇನ್ನು, ಹಿಂದಿ ಬೆಲ್ಟ್​ನಲ್ಲಿ ಮೊದಲ ವಾರದ ಗಳಿಕೆ ವಿಚಾರದಲ್ಲೂ ‘ಪುಷ್ಪ 2’ ಮೇಲುಗೈ ಸಾಧಿಸಿದೆ. ಈ ಚಿತ್ರ ಮೊದಲ ಭಾನುವಾರ 285 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ದಾಖಲೆ ಬರೆದಿದೆ. ಇಂದು (ಡಿಸೆಂಬರ್ 9) ಸೋಮವಾರ. ಸಿನಿಮಾ ಎಷ್ಟು ಕೋಟಿ ಗಳಿಕೆ ಮಾಡುತ್ತದೆ ಎಂಬುದರ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Mon, 9 December 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More