ಕಾಫಿ ಹೀರಿ, ನಗು ನಗುತ್ತಲೇ ಪೊಲೀಸರ ಜೊತೆ ಹೋದ ಅಲ್ಲು ಅರ್ಜುನ್; ಇಲ್ಲಿದೆ ವಿಡಿಯೋ
ಸಂಧ್ಯಾ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾದ ಪ್ರೀಮೀಯರ್ ಶೋ ನೋಡಲು ಹೋಗಿದ್ದರು. ಈ ವೇಳೆ ಅಲ್ಲು ಅರ್ಜುನ್ ನೋಡಲು ಜನಸಾಗರವೇ ಬಂದಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿತ್ತು. ಆಗ ಮಹಿಳೆ ಒಬ್ಬರು ಮೃತಪಟ್ಟರೆ, ಅವರ ಮಗ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅಲ್ಲು ಅರ್ಜುನ್ನ ಬಂಧಿಸಿದ್ದಾರೆ.
ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ನಟ ಅಲ್ಲು ಅರ್ಜುನ್ (Allu Arjun) ಅವರ ಬಂಧನ ಆಗಿದೆ. ಬಂಧನ ಎಂದಾಗ ಸಾಕಷ್ಟು ಆತಂಕ ಮೂಡೋದು ಸಹಜ. ಆದರೆ, ಅಲ್ಲು ಅರ್ಜುನ್ ಅವರು ಮಾತ್ರ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರು ಅರೆಸ್ಟ್ ಆಗುವುದಕ್ಕೂ ಮೊದಲು ಕಾಫಿ ಹೀರಿ, ನಗುನಗುತ್ತಲೇ ಪೊಲೀಸರ ಜೊತೆ ಹೋಗಿದ್ದಾರೆ.
ಸಂಧ್ಯಾ ಥಿಯೇಟರ್ನಲ್ಲಿ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾದ ಪ್ರೀಮೀಯರ್ ಶೋ ನೋಡಲು ಹೋಗಿದ್ದರು. ಈ ವೇಳೆ ಅಲ್ಲು ಅರ್ಜುನ್ ನೋಡಲು ಜನಸಾಗರವೇ ಬಂದಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿತ್ತು. ಆಗ ಮಹಿಳೆ ಒಬ್ಬರು ಮೃತಪಟ್ಟರೆ, ಅವರ ಮಗ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಅಲ್ಲು ಅರ್ಜುನ್ನ ಬಂಧಿಸಿದ್ದಾರೆ.
ಅಲ್ಲು ಅರ್ಜುನ್ ಬಂಧನದ ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಹೀಗಿರುವಾಗಲೇ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿ ಸಿಕ್ಕಿದೆ. ಅವರ ಬಂಧನದಿಂದ ಫ್ಯಾನ್ಸ್ ಮತ್ತಷ್ಟು ಚಿಂತೆಗೆ ಒಳಗಾಗಿದ್ದಾರೆ. ಅವರು ಶೀಘ್ರವೇ ಹೊರಬರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಾ ಇದ್ದಾರೆ.
ಪತ್ನಿಗೆ ಧೈರ್ಯ ತುಂಬಿದರು:
ಬಂಧನಕ್ಕೂ ಮೊದಲು ಅಲ್ಲು ಅರ್ಜುನ್ ಅವರು ಕಾಫಿ ಹೀರಿದ್ದಾರೆ. ಆತಂಕದಲ್ಲಿ ಇದ್ದ ಪತ್ನಿಗೆ ಅವರು ಧೈರ್ಯ ತುಂಬಿದ್ದಾರೆ. ಅವರ ತಂದೆ ಅಲ್ಲು ಅರವಿಂದ್ ಕೂಡ ಆ ಸಮಯದಲ್ಲಿ ಅಲ್ಲಿಯೇ ಇದ್ದರು. ಅಲ್ಲು ಅರ್ಜುನ್ ಕುಟುಂಬದವರಿಗೆ ಧೈರ್ಯ ಹೇಳಿದ ಬಳಿಕವೇ ಪೊಲೀಸರ ಜೊತೆ ಹೋದರು.
ಸಂಧ್ಯಾ ಥಿಯೇಟರ್ನಲ್ಲಿ ಏನಾಗಿತ್ತು:
ಡಿಸೆಂಬರ್ 4ರಂದು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಆಯೋಜನೆ ಮಾಡಲಾಗಿತ್ತು. ಅಲ್ಲು ಅರ್ಜುನ್ ಬರುವ ವಿಚಾರ ಮೊದಲೇ ತಿಳಿದ ಫ್ಯಾನ್ಸ್ ನೆಚ್ಚಿನ ನಟನ ನೋಡಲು ಬಂದರು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಅವರ ಮಗನಿಗೆ ತೀವ್ರ ಗಾಯ ಆಗಿತ್ತು. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರ ಹೆಸರೂ ಇದೆ. ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವಂತೆ ಅಲ್ಲು ಅರ್ಜುನ್ ಅವರು ಹೈಕೋರ್ಟ್ನಲ್ಲಿ ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:30 pm, Fri, 13 December 24