‘ಬೇರೆಯದೇ ರೀತಿಯಲ್ಲಿ ಸಿನಿಮಾ ಬರ್ತಿದೆ’; ಸುಕುಮಾರ್ ಎದುರೇ ಘೋಷಿಸಿದ ಅಲ್ಲು ಅರ್ಜುನ್

‘ಪುಷ್ಪ’ ಚಿತ್ರದ ಮೊದಲ ಭಾಗವು ಅಭಿಮಾನಿಗಳನ್ನು ಸಾಕಷ್ಟು ರಂಜಿಸಿತು. ಈಗ ಚಿತ್ರದ ಎರಡನೇ ಭಾಗದ ಶೂಟಿಂಗ್ ನಡೆಯುತ್ತಿದೆ. ಅಭಿಮಾನಿಗಳು ಕೂಡ ‘ಪುಷ್ಪ 2′ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈಗ ಸಿನಿಮಾ ಬಗ್ಗೆ ಅಲ್ಲು ಅರ್ಜುನ್ ಅವರು ಹೊಸ ಅಪ್​ಡೇಟ್ ಕೊಟ್ಟಿದ್ದಾರೆ.

‘ಬೇರೆಯದೇ ರೀತಿಯಲ್ಲಿ ಸಿನಿಮಾ ಬರ್ತಿದೆ’; ಸುಕುಮಾರ್ ಎದುರೇ ಘೋಷಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ -ಸುಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Aug 22, 2024 | 6:58 AM

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಕೇಳಿ ಬಂದಿತ್ತು. ಈ ಕಾರಣಕ್ಕೆ ‘ಪುಷ್ಪ 2’ ಸಿನಿಮಾ ಕೆಲಸಗಳು ವಿಳಂಬ ಆಗಲಿವೆ ಎಂದೂ ಹೇಳಲಾಗಿತ್ತು. ಆದರೆ, ಆ ಯಾವ ಮಾತಿನಲ್ಲೂ ಹುರುಳಿಲ್ಲ ಎಂಬುದನ್ನು ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಸಾಬೀತು ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಇವರು ‘ಡಿಸೆಂಬರ್ 6ರಂದು ಪುಷ್ಪ 2 ಸಿನಿಮಾ ಬರಲಿದೆ’ ಎಂಬುದನ್ನು ಘೋಷಣೆ ಮಾಡಿದರು. ಸಿನಿಮಾ ಬಗ್ಗೆ ಅಲ್ಲು ಅರ್ಜುನ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

‘ಮಾರುತಿ ನಗರ ಸುಬ್ರಮಣ್ಯಂ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಅಲ್ಲು ಅರ್ಜುನ್ ಅವರು ಮಾತನಾಡಿದ್ದಾರೆ. ‘ಪುಷ್ಪ 2 ಸಿನಿಮಾ ಬರ್ತಿರೋ ವಿಧಾನ ಬೇರೆಯದೇ ರೀತಿ ಇದೆ. ಸಿನಿಮಾ ಎಲ್ಲರಿಗೂ ಇಷ್ಟ ಆಗಿ..’ ಎಂದು ಹೇಳಿ ಮಾತು ನಿಲ್ಲಿಸಿದ ಅಲ್ಲು ಅರ್ಜುನ್ ‘ನಾನು ಈಗ ಏನನ್ನೂ ಹೇಳುವುದಿಲ್ಲ. ಡಿಸೆಂಬರ್ 6ಕ್ಕೆ ತಗ್ಗೋ ಮಾತೇ ಇಲ್ಲ. ಇದು ಫಿಕ್ಸ್’ ಎಂದರು.

ಈ ಮಾತನ್ನು ಕೇಳುತ್ತಿದ್ದಂತೆ ಕೆಳಗೆ ಕೂತಿದ್ದ ಸುಕುಮಾರ್ ಅವರು ಸಂತಸ ಹೊರ ಹಾಕಿದರು. ಈ ಮೂಲಕ ಇಬ್ಬರ ಮಧ್ಯೆ ಯಾವುದೇ ಕಿರಿಕ್ ಇಲ್ಲ ಎನ್ನುವ ವಿಚಾರವನ್ನು ಇವರು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಫಹಾದ್ ಫಾಸಿಲ್ ಬರುವಿಕೆಗಾಗಿ ತಂಡ ಕಾಯುತ್ತಿದೆ ಎನ್ನಲಾಗಿದೆ.

‘ಪುಷ್ಪ 2’ ಚಿತ್ರದ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಅಲ್ಲು ಅರ್ಜುನ್ ಅವರು ವಿದೇಶಕ್ಕೆ ತೆರಳಿದ್ದರು ಎನ್ನಲಾಗಿತ್ತು. ಅಲ್ಲದೆ ಅವರು ಗಡ್ಡವನ್ನು ಕೂಡ ಟ್ರಿಮ್ ಮಾಡಿಕೊಂಡಿದ್ದರು. ಆದರೆ, ಆ ರೀತಿ ಇಲ್ಲ ಎನ್ನುವ ವಿಚಾರ ಈಗ ಸ್ಪಷ್ಟವಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ದಿನಾಂಕ ಡಿಸೆಂಬರ್ 6ಕ್ಕೆ ಮುಂದೂಡಲ್ಪಟ್ಟಿದೆ.

ಇದನ್ನೂ ಓದಿ: ‘ಪುಷ್ಪ 2’ ಚಿತ್ರದ ವಿಶೇಷ ಸಾಂಗ್​ನಲ್ಲಿ ಹೆಜ್ಜೆಹಾಕಲು ಕನ್ನಡದ ಹೀರೋಯಿನ್​ಗೆ ಆಫರ್? 

‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್, ಡಾಲಿ ಧನಂಜಯ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್​ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.