AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?

ಸಂಗಯ್​ ಮೂಲತಃ ಭೂತಾನ್​ನವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ.

ರಾಧೆ ವಿಲನ್ ಹಿಂದಿದೆ ಸಾಕಷ್ಟು ಕಥೆ; ಸಲ್ಲು ಸಿನಿಮಾಗೆ ಭೂತಾನ್​ ಉದ್ಯಮಿ, ಬಾಡಿ ಬಿಲ್ಡರ್​ ಬಂದಿದ್ದು ಹೇಗೆ?
ರಾಧೆ ಚಿತ್ರದ ವಿಲನ್ ಸಂಗಯ್
ರಾಜೇಶ್ ದುಗ್ಗುಮನೆ
| Edited By: |

Updated on: May 17, 2021 | 7:17 AM

Share

ಸಲ್ಮಾನ್​ ಖಾನ್​ ಸಿನಿಮಾ ಎಂದಮೇಲೆ ಅಲ್ಲಿ ಆ್ಯಕ್ಷನ್​ಗಳಿಗೆ ಬರ ಇರುವುದಿಲ್ಲ. ಅವರ ಪ್ರತಿ ಸಿನಿಮಾದಲ್ಲೂ ತೂಕ ಇರುವ ವಿಲನ್​ ಹುಡುಕಿ ತರಲಾಗುತ್ತದೆ. ಇದು ರಾಧೆ ಚಿತ್ರದಲ್ಲೂ ಮುಂದುವರಿದಿದೆ. ಸಾಕಷ್ಟು ಆ್ಯಕ್ಷನ್​ಗಳಿಂದ ಕೂಡಿರುವ ರಾಧೆ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದು ವಿಲನ್​ ಪಾತ್ರ ಮಾಡಿದ ಸಂಗಯ್​. ರಣದೀಪ್​ ಹೂಡಾ ಜತೆ ಇವರು ನಟಿಸಿದ್ದರು. ಸಂಗಯ್ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿ ಬಂದವರು. ಬಾಡಿ ಬಿಲ್ಡರ್​, ಮಿಸ್ಟರ್​ ಭೂತಾನ್, ರಿಯಲ್​ ಎಸ್ಟೇಟ್​ ಉದ್ಯಮಿ ಕೂಡ ಹೌದು. ಈಗ ಬಾಲಿವುಡ್​ ಖಳನಾಗಿಯೂ ಅವರು ಕಾಣಿಸಿಕೊಂಡಿದ್ದಾರೆ.  

ಸಂಗಯ್​ ಮೂಲತಃ ಭೂತಾನ್​ ಅವರು. ಅವರು ರಾಧೆ ಸಿನಿಮಾ ಆಫರ್​ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಅವರಲ್ಲಿ ಖಳನನ್ನು ಗುರುತಿಸಿದ ಸಂಪೂರ್ಣ ಖ್ಯಾತಿ ಸಲ್ಲುಗೆ ನೀಡಿದ್ದಾರೆ. 2019ರಲ್ಲಿ ದಬಾಂಗ್​ 3 ಸಿನಿಮಾ ರಿಲೀಸ್​ ಟೈಮ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಸಲ್ಮಾನ್​ ಖಾನ್​ ಅವರನ್ನು ಸಂಗಯ್​ ಭೇಟಿ ಮಾಡಿದ್ದರು.

ನಾನು ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ಈ ವೇಳೆ ಬಾಡಿ ಬಿಲ್ಡಿಂಗ್ ಬಗ್ಗೆ ಆಸಕ್ತಿ ಬೆಳೆಯಿತು. ಅದನ್ನು​ ಗಂಭೀರವಾಗಿ ಪರಿಗಣಿಸಿದೆ. 2013ರಲ್ಲಿ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದೆ. ನಂತರ ಬಾಡಿ ಬಿಲ್ಡಿಂಗ್​​ಗೆ ಸೇರಿಕೊಂಡೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಹೆಮ್ಮೆ ನನಗಿದೆ. ಮಕಾವುದಲ್ಲಿ ನಡೆದ ಏಷಿಯನ್​ ಬಾಡಿಬಿಲ್ಡ್​ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದೆ. ಉಜಬೇಕಿಸ್ತಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದೆ. ಇದೇ ರೀತಿಯ ಸಾಕಷ್ಟು ಪದಕ ಗೆದ್ದೆ ಎಂದಿದ್ದಾರೆ.

‘ದಬಾಂಗ್​ 3 ಸಿನಿಮಾ ರಿಲೀಸ್​ ಸಮಯದಲ್ಲಿ ಸಲ್ಮಾನ್​ ಖಾನ್​ ಅವರನ್ನು ಭೇಟಿ ಮಾಡಿದ್ದೆ. ಎರಡು ತಿಂಗಳ ನಂತರದಲ್ಲಿ ನನಗೆ ಅವರಿಂದ ಕರೆ ಬಂತು ರಾಧೆ ಸಿನಿಮಾದಲ್ಲಿ ನೀವು ವಿಲನ್​ ಆಗಿ ನಟಿಸಬಹುದೇ ಎಂದು ಕೇಳಿದರು. ನಾನು ಆಫರ್ ಒಪ್ಪಿಕೊಂಡೆ. ಈ ಮೂಲಕ ಬಾಲಿವುಡ್​ಗೆ ಬಂದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಧೆ ನೋಡಿದ ಅಭಿಮಾನಿಗಳಿಗೆ ನಿರಾಸೆ; ತೆಲುಗು ಸಿನಿಮಾ ರಿಮೇಕ್​ ಮಾಡೋಕೆ ಮುಂದಾದ ಸಲ್ಲು

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?