ರಾಕಿಭಾಯ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ರಾಧಿಕಾ ಪಂಡಿತ್ ಅವರು ತಮ್ಮ ಪತಿ ಯಶ್ ಜೊತೆಗಿನ ಅಪರೂಪದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕೆಜಿಎಫ್ 2 ಚಿತ್ರೀಕರಣದ ಸಮಯದಲ್ಲಿ ತೆಗೆದದ್ದಾಗಿದೆ. ಚಿತ್ರವು ಬಿಡುಗಡೆಯಾಗಿ ಮೂರು ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ಈ ಫೋಟೋ ಹಂಚಿಕೊಳ್ಳಲಾಗಿದೆ ಎನ್ನಲಾಗಿದೆ .

ರಾಕಿಭಾಯ್ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್
ಯಶ್-ರಾಧಿಕಾ
Edited By:

Updated on: Apr 15, 2025 | 12:00 PM

ನಟಿ ರಾಧಿಕಾ ಪಂಡಿತ್ (Radhika Pandit) ಅವರು ಪತಿ ಯಶ್​​ಗೆ ಬೆಂಬಲವಾಗಿ ನಿಂತಿದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಜೊತೆಗೆ ಇರುತ್ತಾರೆ. ಯಶ್ ಮುಂಬೈನಲ್ಲಿ ಶೂಟಿಂಗ್​ನಲ್ಲಿ ಕಾಣಿಸಿಕೊಂಡರೆ ರಾಧಿಕಾ ಕೂಡ ಅವರ ಜೊತೆ ನೀವು ಕಾಣಬಹುದು. ರಾಧಿಕಾ ಪಂಡಿತ್ ಅವರು ಈಗ ಒಂದು ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಕಿ ಭಾಯ್ ಜೊತೆ ರಾಧಿಕಾ ಪಂಡಿತ್ ಅವರು ನಿಂತಿದ್ದಾರೆ. ಹಾಗಾದರೆ, ರಾಧಿಕಾ ಅವರು ಈ ಫೋಟೋನ ಹಂಚಿಕೊಳ್ಳಲು ಕಾರಣವೇನು? ಅದಕ್ಕೆ ಕಾರಣವಾಗಿದ್ದೇ ‘ಕೆಜಿಎಫ್ 2’ ಸಿನಿಮಾ.

ಏಪ್ರಿಲ್ 14ರಂದು ‘ಕೆಜಿಎಫ್ 2’ ಚಿತ್ರವು ರಿಲೀಸ್ ಆಗಿ 3 ವರ್ಷಗಳು ತುಂಬಿವೆ. ಬಾಕ್ಸ್ ಆಫೀಸ್​ನಲ್ಲಿ ತನ್ನದೇ ಚಾಪು ಮೂಡಿಸಿದ ಈ ಚಿತ್ರಕ್ಕೆ ಈಗ ಮೂರು ವರ್ಷಗಳ ಸಂಭ್ರಮ. ಈ ಕಾರಣಕ್ಕೆ ಸಿನಿಮಾನ ನೆನಪು ಮಾಡಿಕೊಳ್ಳಲು ರಾಧಿಕಾ ಪಂಡಿತ್ ಅವರು ‘ರಾಕಿಭಾಯ್’ (ಯಶ್) ಜೊತೆ ಇರೋ ಫೋಟೋ ಪೋಸ್ಟ್ ಮಾಡಿದ್ದಾರೆ. ಟೇಕ್ ತೆಗೆದುಕೊಳ್ಳುವಾಗ ಮಧ್ಯದ ಸಮಯ ಎಂಬರ್ಥದಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಮಗನನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗಿ ಟ್ರೋಲ್ ಆದ ನತಾಶಾ
‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?
ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ; ಹುಡುಗ ಯಾರು?

ಇದನ್ನೂ ಓದಿ: ‘ಕೆಜಿಎಫ್ 3’ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್: ಯಶ್ ಅಭಿಮಾನಿಗಳಿಗೆ ಖುಷಿ

ಯಶ್ ಅವರು ‘ಕೆಜಿಎಫ್ 2’ ಲುಕ್​ನ ಬದಲಿಸಿದ್ದಾರೆ. ಆದರೆ, ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋದಲ್ಲಿ ನೀವು ಕೆಜಿಎಫ್​ ಲುಕ್​ನ ಕಾಣಬಹುದಾಗಿದೆ. ರಾಧಿಕಾ ಪಂಡಿತ್ ಅವರು ಟಿ-ಶರ್ಟ್ ಹಾಗೂ ಜೀನ್ಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ನೋಡಿದವರಿಗೆ ಕ್ಯಾರವಾನ್ ವಾಹನ ಎಂಬುದು ತಿಳಿಯುತ್ತದೆ. ರಾಕಿ ಭಾಯ್ ಲುಕ್ ಗಮನ ಸೆಳೆದಿದೆ.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್ 2’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಯಶ್, ಸಂಜಯ್ ದತ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ‘ಕೆಜಿಎಫ್’ ಚಿತ್ರದ ಮುಂದುವರಿದ ಭಾಗವೇ ಆಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1200+ ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ ಎನ್ನಬಹುದು. ಈಗ ‘ಕೆಜಿಎಫ್ 2’ ರಿಲೀಸ್ ಆಗಿ ಮೂರು ವರ್ಷ ಕಳೆದ ಸಂದರ್ಭದಲ್ಲಿ ಚಿತ್ರಕ್ಕೆ ಮೂರನೇ ಚಾಪ್ಟರ್ ಬರುವ ಬಗ್ಗೆ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಘೋಷಣೆ ಆಗಿದೆ. ಇದಕ್ಕೆ ಯಶ್ ಅವರ ಕಾಲ್​ಶೀಟ್ ಕೂಡ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.