ಎರಡು ಪಾರ್ಟ್​ನಲ್ಲಿ ಕಥೆ ಹೇಳೋದನ್ನು ನಿಲ್ಲಿಸಿದ ರಾಜಮೌಳಿ; ಕೊನೆ ಆಗಲಿದೆ ಟ್ರೆಂಡ್?

ರಾಜಮೌಳಿ ಅವರು ಪ್ರಾರಂಭಿಸಿದ ಎರಡು ಪಾರ್ಟ್​ಗಳ ಚಿತ್ರಗಳ ಟ್ರೆಂಡ್​ಗೆ ಅವರೇ ತೆರೆ ಎಳೆಯುತ್ತಿದ್ದಾರೆ. ಮಹೇಶ್ ಬಾಬು ಅಭಿನಯದ SSMB29 ಚಿತ್ರ ಒಂದೇ ಭಾಗದಲ್ಲಿ ಬಿಡುಗಡೆಯಾಗಲಿದೆ. ಬಾಹುಬಲಿ ಚಿತ್ರದ ಯಶಸ್ಸಿನ ನಂತರ ಈ ಟ್ರೆಂಡ್ ಅನೇಕ ನಿರ್ಮಾಪಕರು ಅನುಸರಿಸಿದ್ದಾರೆ. ಆದರೆ, ಕಥೆಯನ್ನು ಅನಗತ್ಯವಾಗಿ ಎಳೆದು ಹಣ ಸಂಪಾದಿಸುವ ಉದ್ದೇಶದಿಂದ ಇದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ರಾಜಮೌಳಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಎರಡು ಪಾರ್ಟ್​ನಲ್ಲಿ ಕಥೆ ಹೇಳೋದನ್ನು ನಿಲ್ಲಿಸಿದ ರಾಜಮೌಳಿ; ಕೊನೆ ಆಗಲಿದೆ ಟ್ರೆಂಡ್?
ರಾಜಮೌಳಿ
Edited By:

Updated on: Apr 06, 2025 | 6:30 AM

ಎರಡು ಪಾರ್ಟ್​ನಲ್ಲಿ ಕಥೆ ಹೇಳುವ ಟ್ರೆಂಡ್​ನ ಭಾರತದಲ್ಲಿ ಹೆಚ್ಚು ಪ್ರಚಲಿತ ಮಾಡಿದ್ದು ನಿರ್ದೇಶಕ ಎಸ್​ಎಸ್ ರಾಜಮೌಳಿ (SS Rajamouli) ಎಂದರೂ ತಪ್ಪಾಗಲಾರದು. ‘ಬಾಹುಬಲಿ’ ಚಿತ್ರದ ಕಥೆಯನ್ನು ಒಂದು ಭಾಗದಲ್ಲಿ ಹೇಳದೇ ಎರಡು ಭಾಗದಲ್ಲಿ ಅದನ್ನು ಜನರ ಮುಂದೆ ತರಲಾಯಿತು. ಇದಕ್ಕೆ ಕಾರಣವೂ ಇತ್ತು ಎನ್ನಿ. ಏಕೆಂದರೆ, ಸಿನಿಮಾದ ಕಥೆ ಹೆಚ್ಚಿನ ಅವಧಿಯನ್ನು ಬೇಡುತ್ತಿದ್ದರಿಂದ ಈ ರೀತಿ ಮಾಡಿದರು. ಆದರೆ, ಈಗ ಎಲ್ಲರೂ ಅದನ್ನು ದುರ್ಬಳಕೆ ಮಾಡಿಕೊಂಡರು. ಹೀಗಾಗಿ, ಇದನ್ನು ನಿಲ್ಲಿಸಲು ರಾಜಮೌಳಿ ನಿರ್ಧರಿಸಿದ್ದಾರೆ. ಮುಂಬರುವ ಮಹೇಶ್ ಬಾಬು ಚಿತ್ರಕ್ಕಾಗಿ ಅವರು ಈ ಫಾರ್ಮ್ಯಾಟ್​ನಿಂದ ಹೊರಗೆ ಬರುತ್ತಿದ್ದಾರೆ.

ರಾಜಮೌಳಿ ಅವರು ಮೊದಲು ‘ಬಾಹುಬಲಿ’ ಮಾಡಿದರು. ಆ ಬಳಿಕೆ ಕೆಲವೇ ವರ್ಷಗಳಲ್ಲಿ ‘ಬಾಹುಬಲಿ 2’ ಚಿತ್ರವನ್ನು ತೆಗೆದುಕೊಂಡು ಬಂದರು. ಆ ಬಳಿಕ ಸಾಲು ಸಾಲು ಚಿತ್ರಗಳು ಎರಡು ಪಾರ್ಟ್​ಗಳಲ್ಲಿ ಬಂದವು. ಸಿನಿಮಾಗೆ ಅಗತ್ಯ ಇದೆಯೋ ಇಲ್ಲವೋ ಹಣ ಮಾಡುವದಕ್ಕಾಗಿ ಈ ತಂತ್ರ ಉಪಯೋಗಿಸಿದರು. ಇದು ರಾಜಮೌಳಿ ಬೇಸರಕ್ಕೆ ಕಾರಣ ಆಗಿದೆ. ಕಥೆಯನ್ನು ಎಳೆದಾಡಿ ಎರಡು ಪಾರ್ಟ್​ನಲ್ಲಿ ಸಿನಿಮಾ ತರುತ್ತಿರುವುದನ್ನು ನೋಡಿ ರಾಜಮೌಳಿ ಬೇಸರಗೊಂಡಿದ್ದಾರಂತೆ.

ರಾಜಮೌಳಿ ಅವರು ಹೊಸ ಸಿನಿಮಾ ಘೋಷಿಸಿದ್ದಾರೆ. ಇದಕ್ಕೆ ತಾತ್ಕಾಲಿಕವಾಗಿ ‘SSMB 29’ ಎಂದು ಶೀರ್ಷಿಕೆ ಇಟ್ಟಿದ್ದು ಗೊತ್ತೇ ಇದೆ. ಈ ಚಿತ್ರ ಎರಡು ಪಾರ್ಟ್​ನಲ್ಲಿ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಇದಕ್ಕೆ ಬ್ರೇಕ್ ಹಾಕಲಾಗಿದ್ದು, ಒಂದೇ ಭಾಗದಲ್ಲಿ ಸಿನಿಮಾ ಬರುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ವಿಚ್ಛೇದನದ ಬಳಿಕ ಸುಮ್ಮನೆ ಕೂರದ ಧನಶ್ರೀ ವರ್ಮ; ರಿಯಾಲಿಟಿ ಶೋನಲ್ಲಿ ಸ್ಪರ್ಧೆ
ಸಲ್ಮಾನ್ ಸಿನಿಮಾಗೆ ಚಿಲ್ಲರೆ ಗಳಿಕೆ; ಇನ್ನೂ ನೂರು ಕೋಟಿ ತಲುಪಿಲ್ಲ ಸಿಕಂದರ್
ರಶ್ಮಿಕಾ ಮಂದಣ್ಣ ನಟಿಸಿದ ಸ್ಟಾರ್ ಹೀರೋಗಳ ಪಟ್ಟಿ ಬಹುದೊಡ್ಡದಿದೆ

ಈ ಮೊದಲು ರಿಲೀಸ್ ಆದ ‘ಆರ್​ಆರ್​ಆರ್’ ಚಿತ್ರದ ಅವಧಿ ದೀರ್ಘವಾಗಿದ್ದ ಹೊರತಾಗಿಯೂ ರಾಜಮೌಳಿ ಅವರು ಒಂದೇ ಪಾರ್ಟ್​ನಲ್ಲಿ ಸಿನಿಮಾ ಮಾಡಿದ್ದರು. ಈಗ ಅವರ ಹೊಸ ಚಿತ್ರವನ್ನೂ ಹಾಗೆಯೇ ಮಾಡಲಿದ್ದಾರೆ. ಇದರಿಂದ ಮಹೇಶ್ ಬಾಬು ಅವರು ಈ ಚಿತ್ರ ಮುಗಿದ ಬಳಿಕ ಮತ್ತೊಂದು ಸಿನಿಮಾದಲ್ಲಿ ತೊಡಗಿಕೊಳ್ಳಬಹುದು.

ಇದನ್ನೂ ಓದಿ: ‘ಬಾಹುಬಲಿ 2’ ದಾಖಲೆ ಮುರಿಯಲು ರೆಡಿ ಆದ ‘ಪುಷ್ಪ 2’ ಸಿನಿಮಾ

ರಾಜಮೌಳಿ ಅವರು ಈ ಟ್ರೆಂಡ್​ನ ಆರಂಭಿಸಿದವರು. ಈಗ ಟ್ರೆಂಡ್ ಆರಂಭಿಕನಿಂದಲೇ ಇದನ್ನು ಕೊನೆ ಮಾಡುವ ಪ್ರಯತ್ನ ನಡೆದಿದೆ. ಇನ್ನಾದರೂ ಈ ಟ್ರೆಂಡ್​ನ ದುರುಪಯೋಗ ಮಾಡೋದನ್ನು ಕೆಲವರು ಬಿಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ರಾಜಮೌಳಿ ಚಿತ್ರದಲ್ಲಿ ಮಹೇಶ್​ ಬಾಬುಗೆ ಪ್ರಿಯಾಂಕಾ ಚೋಪ್ರಾ ಜೊತೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.