AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೂರೋಪಿನ ಸುಂದರ ದೇಶದಲ್ಲಿ ‘ವಾರಣಾಸಿ’ ಚಿತ್ರೀಕರಣ

Varanasi movie: ರಾಜಮೌಳಿ ರಾಮಾಯಣದ ಕತೆಯನ್ನು ಫ್ಯಾಂಟಸಿ, ಆಕ್ಷನ್ ಥ್ರಿಲ್ಲರ್ ಕತೆಯೊಟ್ಟಿಗೆ ಬೆಸೆದು ಅದ್ಧೂರಿಯಾಗಿ ‘ವಾರಣಾಸಿ’ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿದ್ದು, ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಸೈಮಾರಾ ಸೇರಿದಂತೆ ಇನ್ನೂ ಕೆಲವು ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ರಾಜಮೌಳಿ ಅವರು ತಮ್ಮ ತಂಡವನ್ನು ಕಡೆದುಕೊಂಡು ಯೂರೋಪಿನ ಸುಂದರ ದೇಶಕ್ಕೆ ಹೋಗಿದ್ದಾರೆ.

ಯೂರೋಪಿನ ಸುಂದರ ದೇಶದಲ್ಲಿ ‘ವಾರಣಾಸಿ’ ಚಿತ್ರೀಕರಣ
Varanasi
ಮಂಜುನಾಥ ಸಿ.
|

Updated on: Feb 24, 2026 | 3:55 PM

Share

ರಾಜಮೌಳಿ (Rajamouli) ನಿರ್ದೇಶಿಸಿ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ವಿಶ್ವದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ರಾಜಮೌಳಿ ರಾಮಾಯಣದ ಕತೆಯನ್ನು ಫ್ಯಾಂಟಸಿ, ಆಕ್ಷನ್ ಥ್ರಿಲ್ಲರ್ ಕತೆಯೊಟ್ಟಿಗೆ ಬೆಸೆದು ಅದ್ಧೂರಿಯಾಗಿ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿದ್ದು, ಸಿನಿಮಾವನ್ನು ಭಾರತ ಮಾತ್ರವೇ ಅಲ್ಲದೆ ವಿವಿಧ ದೇಶಗಳಲ್ಲಿಯೂ ಚಿತ್ರೀಕರಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾವನ್ನು ಮಸೈಮಾರಾ ಸೇರಿದಂತೆ ಇನ್ನೂ ಕೆಲವು ಪ್ರಮುಖ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇದೀಗ ರಾಜಮೌಳಿ ಅವರು ತಮ್ಮ ತಂಡವನ್ನು ಕಡೆದುಕೊಂಡು ಯೂರೋಪಿನ ಸುಂದರ ದೇಶಕ್ಕೆ ಹೋಗಿದ್ದಾರೆ.

ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರ ನಡುವಿನ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣಕ್ಕಾಗಿ ರಾಜಮೌಳಿ ಅವರು ಇದೀಗ ಜಾರ್ಜಿಯಾ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರನ್ನು ಬಿಟ್ಟು ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರ್ ಅವರುಗಳು ಮಾತ್ರವೇ ಜಾರ್ಜಿಯಾಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಜಾರ್ಜಿಯಾ ದೇಶದಲ್ಲಿ ನಾಯಕ ಹಾಗೂ ವಿಲನ್ ನಡುವ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಅನ್ನು ಚಿತ್ರೀಕರಣ ಮಾಡಲಾಗುವುದಂತೆ. ಇದಕ್ಕಾಗಿ ನಟರುಗಳ ಜೊತೆಗೆ ದೊಡ್ಡ ತಾಂತ್ರಿಕ ವರ್ಗವನ್ನು ರಾಜಮೌಳಿ ಕರೆದುಕೊಂಡು ಹೋಗುತ್ತಿದ್ದಾರೆ.

ಈಗಾಗಲೇ ವಾರಣಾಸಿಯಲ್ಲಿ ಕೆಲವೊಂದು ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿಸಿರುವ ರಾಜಮೌಳಿ, ಮುಂದಿನ ಹಂತದ ಚಿತ್ರೀಕರಣಕ್ಕಾಗಿ ಜಾರ್ಜಿಯಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಕಡಿದಾದ ಬೆಟ್ಟಗಳು ಮತ್ತು ಸುಂದರ ಪರಿಸರದಲ್ಲಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ವಿಶೇಷವೆಂದರೆ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅವರ ಮತ್ತು ಮಹೇಶ್ ಬಾಬು ನಡುವಿನ ಜಿದ್ದಾಜಿದ್ದಿನ ದೃಶ್ಯಗಳು ಜಾರ್ಜಿಯಾದಲ್ಲಿ ಸೆರೆಯಾಗಲಿವೆ.

ಇದನ್ನೂ ಓದಿ:ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು

ಈ ಚಿತ್ರವು ಜಾಗತಿಕ ಮಟ್ಟದ ಅಡ್ವೆಂಚರ್ ಥ್ರಿಲ್ಲರ್ ಆಗಿರಲಿದ್ದು, ಹಾಲಿವುಡ್‌ನ ‘ಇಂಡಿಯಾನಾ ಜೋನ್ಸ್’ ಮಾದರಿಯಲ್ಲಿ ಮೂಡಿಬರಲಿದೆ ಎಂಬ ವದಂತಿಗಳಿವೆ. ಕಾಡಿನ ಸಾಹಸಗಳು, ಗುಪ್ತ ನಿಧಿ ಮತ್ತು ಸಾಹಸಮಯ ಪಯಣ ಈ ಸಿನಿಮಾದ ಹೈಲೈಟ್ ಆಗಿರಲಿದೆ. ಇದಕ್ಕಾಗಿ ಮಹೇಶ್ ಬಾಬು ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದು, ಉದ್ದನೆಯ ಕೂದಲು ಮತ್ತು ಗಡ್ಡದೊಂದಿಗೆ ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ಆರ್‌ಆರ್‌ಆರ್’ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಸಿನಿಮಾದ ತಾಕತ್ತು ತೋರಿಸಿದ್ದ ರಾಜಮೌಳಿ, ಈ ಚಿತ್ರವನ್ನು ಅದಕ್ಕಿಂತಲೂ ಅದ್ಧೂರಿಯಾಗಿ ತೆರೆಗೆ ತರಲು ಸಜ್ಜಾಗುತ್ತಿದ್ದಾರೆ. ಜಾರ್ಜಿಯಾದಲ್ಲಿ ನಡೆಯಲಿರುವ ಈ ಶೆಡ್ಯೂಲ್ ಚಿತ್ರದ ಅತ್ಯಂತ ಕಠಿಣ ಮತ್ತು ಪ್ರಮುಖ ಭಾಗ ಎನ್ನಲಾಗಿದೆ.

‘ವಾರಣಾಸಿ’ ಸಿನಿಮಾವು 2027ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಅರ್ಧ ಭಾಗದ ಚಿತ್ರೀಕರಣ ಮುಗಿಸಲಾಗಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ಹಾಲಿವುಡ್ ಗುಣಮಟ್ಟಕ್ಕೆ ಸರಿ ಸಮವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಪಬ್ಗಳಿಗೂ ಸಿಲಿಂಡರ್ ಸಮಸ್ಯೆ:  ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ಪಬ್ಗಳಿಗೂ ಸಿಲಿಂಡರ್ ಸಮಸ್ಯೆ:  ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್
ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ