ರಜನಿಕಾಂತ್ ಜೊತೆ ‘ಜೈಲರ್ 2’ ಚಿತ್ರದಲ್ಲಿ ನಟಿಸಲು ದೊಡ್ಡ ಷರತ್ತು ಹಾಕಿದ್ದ ಮಿಥುನ್

‘ಜೈಲರ್ 2’ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಲು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಆರಂಭದಲ್ಲಿ ನಿರಾಕರಿಸಿದ್ದರು. ಆದರೆ ರಜನಿಕಾಂತ್ ಅವರ ಜೊತೆ ನಟಿಸಲು ಒಪ್ಪಿದ ಅವರು, ನನ್ನನ್ನು ಹೊಡೆಯುವಂತಿಲ್ಲ ಹಾಗೂ ಗುಂಡು ಹೊಡೆಯುವಂತಿಲ್ಲ ಎಂಬ ಒಂದು ತಮಾಷೆಯ ಶರತ್ತನ್ನು ವಿಧಿಸಿದ್ದರು ಎಂದು ಸ್ವತಃ ರಜನಿಕಾಂತ್ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ರಜನಿಕಾಂತ್ ಜೊತೆ ‘ಜೈಲರ್ 2’ ಚಿತ್ರದಲ್ಲಿ ನಟಿಸಲು ದೊಡ್ಡ ಷರತ್ತು ಹಾಕಿದ್ದ ಮಿಥುನ್
ಮಿಥುನ್​-ರಜಿನಿ
Edited By:

Updated on: Oct 13, 2026 | 11:08 AM

ಮುಖ್ಯಾಂಶಗಳು

  • ವಿಲನ್ ಪಾತ್ರ ಮಾಡಲು ಆರಂಭದಲ್ಲಿ ನಿರಾಕರಿಸಿದ್ದ ಮಿಥುನ್ ಚಕ್ರವರ್ತಿ
  • ರಜನಿಕಾಂತ್ ಮುಂದೆ ವಿಚಿತ್ರ ಶರತ್ತು ವಿಧಿಸಿದ ಬಾಲಿವುಡ್ ದಿಗ್ಗಜ
  • ಅಕ್ಟೋಬರ್ 15ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಜೈಲರ್ 2 ಸಿನಿಮಾ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಗ್ಗೆ ದಿನಕ್ಕೊಂದು ರೋಚಕ ವಿಚಾರಗಳು ಹೊರಬರುತ್ತಿವೆ. ಈ ಚಿತ್ರದಲ್ಲಿ ಬಾಲಿವುಡ್‌ನ ದಿಗ್ಗಜ ನಟ ಮಿಥುನ್ ಚಕ್ರವರ್ತಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರ ಮಾಡಲು ಆರಂಭದಲ್ಲಿ ಮಿಥುನ್ ಚಕ್ರವರ್ತಿ ಸ್ಪಷ್ಟವಾಗಿ ನಿರಾಕರಿಸಿದ್ದರು. ರಜನಿಕಾಂತ್ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಈ ಕುರಿತು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಚಿತ್ರತಂಡ ಮೊದಲು ವಿಲನ್ ಪಾತ್ರಕ್ಕಾಗಿ ಸಂಪರ್ಕಿಸಿದಾಗ ಮಿಥುನ್ ಚಕ್ರವರ್ತಿ ಬೇಡ ಎಂದಿದ್ದರು. ರಜನಿಕಾಂತ್ ನನಗೆ ತುಂಬಾ ಒಳ್ಳೆಯ ಸ್ನೇಹಿತ ಎಂದು ಅವರು ತಿಳಿಸಿದ್ದರು. ರಜನಿ ಹೀರೋ ಆದರೆ ನಾನು ವಿಲನ್ ಆಗುವುದಾ ಎಂದು ಅವರು ಪ್ರಶ್ನಿಸಿದ್ದರು. ಅವರ ಕೈಯಲ್ಲಿ ನಾನು ಹೊಡೆಸಿಕೊಳ್ಳಬೇಕೇ ಎಂದು ಹೇಳಿ ಆರಂಭದಲ್ಲಿ ಆಫರ್ ತಿರಸ್ಕರಿಸಿದ್ದರು.

ಆದರೆ ನಂತರ ಒಂದು ವಿಶೇಷ ಕಾರ್ಯಕ್ರಮದಲ್ಲಿ ರಜನಿಕಾಂತ್ ಅವರನ್ನು ಭೇಟಿಯಾದಾಗ ಮಿಥುನ್ ಮನಸ್ಸು ಬದಲಾಯಿಸಿದರು. ‘ರಜನಿ ನೀವು ಹೇಳಿದರೆ ನಾನು ಈ ಸಿನಿಮಾ ಮಾಡುತ್ತೇನೆ’ ಎಂದು ಮಿಥುನ್ ತಿಳಿಸಿದರು. ಆಗ ನಟ ರಜನಿಕಾಂತ್ ನಿರ್ದೇಶಕರೊಂದಿಗೆ ಮಾತನಾಡುವುದಾಗಿ ಹೇಳಿದ್ದರು. ಮಿಥುನ್ ಕೂಡ ಒಂದು ನಿಬಂಧನೆಯೊಂದಿಗೆ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದರು.

ಚಿತ್ರದಲ್ಲಿ ತನಗೆ ಕೆಲವು ಕಟ್ಟುಪಾಡುಗಳಿವೆ ಎಂದು ಮಿಥುನ್ ಶರತ್ತು ವಿಧಿಸಿದ್ದರು. ನೀವು ನನ್ನನ್ನು ಹೊಡೆಯುವಂತಿಲ್ಲ ಮತ್ತು ಗುಂಡು ಹೊಡೆಯುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ನನಗಿರುವ ಏಕೈಕ ಶರತ್ತು ಇದೇ ಎಂದು ಅವರು ರಜನಿಕಾಂತ್ ಬಳಿ ನಗುತ್ತಾ ಹೇಳಿದ್ದರು. ರಜನಿ ಕೂಡ ಈ ಮಮಾತನ್ನು ನಿರ್ದೇಶಕರ ಬಳಿ ಚರ್ಚಿಸುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: ಜೈಲರ್ 2 ಅಬ್ಬರ: ಬುಕಿಂಗ್ ಶುರುವಾದ ಒಂದೇ ದಿನದಲ್ಲಿ 20 ಕೋಟಿ ರೂ. ಗಳಿಕೆ

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಅಕ್ಟೋಬರ್ 15ರಂದು ಈ ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಜನಿ ಹಾಗೂ ಮಿಥುನ್ ಮುಖಾಮುಖಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Tue, 13 October 26

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us