AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲರ್ 2 ಅಬ್ಬರ: ಬುಕಿಂಗ್ ಶುರುವಾದ ಒಂದೇ ದಿನದಲ್ಲಿ 20 ಕೋಟಿ ರೂ. ಗಳಿಕೆ

ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್​ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು ಮುಂತಾದವರು ನಟಿಸಿರುವ ‘ಜೈಲರ್ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭರ್ಜರಿ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆಯೇ ಟಿಕೆಟ್ ಮುಂಗಡ ಬುಕಿಂಗ್ ಆಗುತ್ತಿದೆ. ಈಗಾಗಲೇ 20 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ.

ಜೈಲರ್ 2 ಅಬ್ಬರ: ಬುಕಿಂಗ್ ಶುರುವಾದ ಒಂದೇ ದಿನದಲ್ಲಿ 20 ಕೋಟಿ ರೂ. ಗಳಿಕೆ
RajinikanthImage Credit source: Sun Pictures
ಮದನ್​ ಕುಮಾರ್​
|

Updated on: Oct 11, 2026 | 12:08 PM

Share

ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಮುಂಗಡ ಬುಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿಯೇ ಜಾಗತಿಕ ಮಟ್ಟದಲ್ಲಿ 20 ಕೋಟಿ ರೂ.ಗಳ ಗಡಿಯನ್ನು ದಾಟುವ ಮೂಲಕ ಹೊಸ ದಾಖಲೆ ಬರೆಯಲು ಸಜ್ಜಾಗಿದೆ. ವಿಶ್ವಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ಈ ಮಾಸ್-ಆ್ಯಕ್ಷನ್ ಥ್ರಿಲ್ಲರ್ ಚಿತ್ರವು ಬಿಡುಗಡೆಗೆ ಇನ್ನೂ ನಾಲ್ಕು ದಿನಗಳು ಬಾಕಿ ಇರುವಾಗಲೇ ಭರ್ಜರಿ ಪ್ರಿ-ಸೇಲ್ಸ್ ದಾಖಲಿಸುತ್ತಿದೆ. ಭಾರತದಲ್ಲಿ ಅಕ್ಟೋಬರ್ 10ರಂದು ಮುಂಗಡ ಬುಕಿಂಗ್ ಅಧಿಕೃತವಾಗಿ ಪ್ರಾರಂಭವಾಯಿತು.

ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಒಂದು ದಿನ ಮುಂಚಿತವಾಗಿ ಟಿಕೆಟ್ ಮಾರಾಟ ಶುರುವಾಗಿದ್ದರೆ, ಕೇರಳದಲ್ಲಿ ಅಕ್ಟೋಬರ್ 11ರ ಬೆಳಿಗ್ಗೆ ಬುಕಿಂಗ್ ಆರಂಭವಾಯಿತು. ಈ ವಿಳಂಬದ ನಡುವೆಯೂ ಜೈಲರ್ 2 ವಿಶ್ವದಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಕ್ಟೋಬರ್ 11ರ ಬೆಳಗಿನ ವೇಳೆಗೆ ಚಿತ್ರದ ಜಾಗತಿಕ ಮುಂಗಡ ಬುಕಿಂಗ್ ಸಂಗ್ರಹವು 20 ಕೋಟಿ ರೂ.ಗಳನ್ನು ದಾಟಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿಯೇ ಸುಮಾರು 2 ಮಿಲಿಯನ್ ಡಾಲರ್‌ಗಳಷ್ಟು ಪ್ರಿ-ಸೇಲ್ಸ್ ದಾಖಲಾಗಿದೆ.

ಭಾರತದ ಕೆಲವು ರಾಜ್ಯಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಂಗಡ ಬುಕಿಂಗ್ ಆರಂಭವಾಗದಿದ್ದರೂ, ದೇಶಾದ್ಯಂತ ಒಂದೇ ದಿನದಲ್ಲಿ 4 ಕೋಟಿ ರೂ.ಗೂ ಅಧಿಕ ಒಟ್ಟು ಮೊತ್ತದ ಟಿಕೆಟ್ ಮಾರಾಟವಾಗಿದೆ. ಕೇವಲ ಭಾರತದ ಮೊದಲ ದಿನದ ಮುಂಗಡ ಬುಕಿಂಗ್‌ನಿಂದಲೇ 3.53 ಕೋಟಿ ರೂ.ಗಳಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಆಗಿದೆ. ನಿರೀಕ್ಷೆಯಂತೆ ತಮಿಳುನಾಡಿನಿಂದಲೇ ಭಾರತದ ಒಟ್ಟು ಪ್ರಿ-ಸೇಲ್ಸ್‌ನ ಶೇಕಡ 90ರಷ್ಟನ್ನು ಹೊಂದಿದೆ. ಕೇವಲ ಚೆನ್ನೈ ನಗರವೊಂದರಲ್ಲೇ 1.63 ಕೋಟಿ ರೂ.ಗಳ ಮುಂಗಡ ಟಿಕೆಟ್ ಮಾರಾಟವಾಗಿದೆ. ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಮಲಯಾಳಂ ಮತ್ತು ಹಿಂದಿ ಡಬ್ಬಿಂಗ್ ಆವೃತ್ತಿಗಳ ಬುಕಿಂಗ್ ಪೂರ್ಣಗೊಂಡ ಬಳಿಕ ಈ ಅಂಕಿಅಂಶಗಳು ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರಕ್ಕೆ ‘ಸನ್ ಪಿಕ್ಚರ್ಸ್’ ಮೂಲಕ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ರಜನಿಕಾಂತ್ ಜತೆಗೆ ರಮ್ಯಾ ಕೃಷ್ಣನ್, ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಭಾಗದಂತೆ ಈ ಚಿತ್ರದಲ್ಲೂ ಮೋಹನ್​ಲಾಲ್ ಮತ್ತು ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್‌ನಲ್ಲಿ ಬಿಡುಗಡೆ ಬಳಿಕ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರಬಹುದು ಎಂಬ ಗುಸುಗುಸು ಅಭಿಮಾನಿಗಳಲ್ಲಿ ಜೋರಾಗಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಖಚಿತತೆ ಸಿಕ್ಕಿಲ್ಲ.

ಇದನ್ನೂ ಓದಿ: ಸೀಕ್ವೆಲ್ ದ್ವೇಷಿಸೋ ರಜನಿಕಾಂತ್ ‘ಜೈಲರ್ 2’ ಒಪ್ಪಿದ್ದೇಕೆ? ಇಲ್ಲಿದೆ ಕಾರಣ

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿರುವ ‘ಜೈಲರ್ 2’ ಚಿತ್ರವು 2 ಗಂಟೆ 45 ನಿಮಿಷಗಳ ಅವಧಿ ಹೊಂದಿದ್ದು, ಯುಎ 16+ ಪ್ರಮಾಣಪತ್ರ ಪಡೆದುಕೊಂಡಿದೆ. ಭರ್ಜರಿ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಅಕ್ಟೋಬರ್ 15ರಂದು ಅದ್ದೂರಿಯಾಗಿ ತೆರೆಗೆಪ್ಪಳಿಸಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಗಣವೇಷ ಧರಿಸಿ RSS ಪಥಸಂಚಲನದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ