ಸೀಕ್ವೆಲ್ ದ್ವೇಷಿಸೋ ರಜನಿಕಾಂತ್ ‘ಜೈಲರ್ 2’ ಒಪ್ಪಿದ್ದೇಕೆ? ಇಲ್ಲಿದೆ ಕಾರಣ
ರಜನಿಕಾಂತ್ ತಾವು ಬಾಷಾ 2 ಹಾಗೂ ಪೇಟ್ಟಾ 2 ಚಿತ್ರಗಳನ್ನು ಯಾಕೆ ತಿರಸ್ಕರಿಸಿದ್ದೆವು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸೀಕ್ವೆಲ್ ಸಿನಿಮಾಗಳ ಬಗ್ಗೆ ತಮಗೆ ಆಸಕ್ತಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಕಥೆಯ ವಿಶೇಷತೆಯಿಂದಾಗಿ ಜೈಲರ್ 2 ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಸೂಪರ್‌ಸ್ಟಾರ್ ರಜನಿ ತಿಳಿಸಿದ್ದಾರೆ.

ಮುಖ್ಯಾಂಶಗಳು
- ಸೀಕ್ವೆಲ್ ಚಿತ್ರಗಳ ಬಗ್ಗೆ ರಜನಿಕಾಂತ್ ಅಸಮಾಧಾನದ ಮಾತು
- 2 ಮತ್ತು ಪೇಟ್ಟಾ 2 ಆಫರ್‌ಗಳನ್ನು ತಿರಸ್ಕರಿಸಿದ ರಜನಿ
- ಜೈಲರ್ 2 ಚಿತ್ರದಲ್ಲಿ ನಟಿಸಲು ನಿರ್ಧರಿಸಿದ್ದು ಹೇಗೆ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಮೂಲಕ ರಜನಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸೀಕ್ವೆಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಹಿಂದೆ ಬಂದ ಬಾಷಾ 2 ಹಾಗೂ ಪೇಟ್ಟಾ 2 ಆಫರ್‌ಗಳನ್ನು ರಜನಿ ಯಾಕೆ ತಿರಸ್ಕರಿಸಿದ್ದರು ಎನ್ನುವ ಕುತೂಹಲಕಾರಿ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಸುದ್ದಿ ವರದಿ ಇಲ್ಲಿದೆ.
ಸಾಮಾನ್ಯವಾಗಿ ಸೀಕ್ವೆಲ್ ಚಿತ್ರಗಳಲ್ಲಿ ನಟಿಸಲು ರಜನಿಕಾಂತ್ ಅವರಿಗೆ ಅಷ್ಟಾಗಿ ಇಷ್ಟವಿರಲಿಲ್ಲ. ಮೊದಲ ಭಾಗದಲ್ಲಿ ಯಶಸ್ವಿಯಾದ ಅಂಶಗಳನ್ನೇ ಮತ್ತೆ ಮರುಸೃಷ್ಟಿ ಮಾಡಿ ಮಸಾಲೆ ಸೇರಿಸಿ ಸಿನಿಮಾಗಳನ್ನು ಮಾಡುತ್ತಾರೆ ಎಂಬ ಭಾವನೆ ಅವರಲ್ಲಿತ್ತು. ನಿರ್ಮಾಪಕರು ಬಾಷಾ 2 ಮಾಡಲು ಬಂದಾಗ ರಜನಿ ಒಪ್ಪಿರಲಿಲ್ಲ. ಹಾಗೆಯೇ ಕಾರ್ತಿಕ್ ಸುಬ್ಬರಾಜ್ ಅವರು ಪೇಟ್ಟಾ 2 ಕಥೆಯನ್ನು ಹೊತ್ತು ಬಂದಾಗಲೂ ನಟಿಸಲು ಅವರು ನಿರಾಕರಿಸಿದ್ದರು.
ಆದರೆ ಜೈಲರ್ 2 ಸಿನಿಮಾ ಒಪ್ಪಿಕೊಳ್ಳಲು ದೊಡ್ಡ ಕಾರಣವೇ ಇದೆ. ಒಟಿಟಿಯಲ್ಲಿ ಜೈಲರ್ ಸಿನಿಮಾ ಬಿಡುಗಡೆಯಾದ ಬಳಿಕ ರಜನಿಕಾಂತ್ ಮತ್ತೆ ಆ ಚಿತ್ರವನ್ನು ವೀಕ್ಷಿಸಿದರು. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವಿಲನ್ ವರ್ಮಾ ನಿನ್ನನ್ನು ನಾನು ಬಿಡುವುದಿಲ್ಲ ಎನ್ನುವ ಸುಳಿವು ನೀಡುತ್ತಾನೆ. ಅಲ್ಲದೆ ಚಿತ್ರದಲ್ಲಿ ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಟೈನರ್‌ಗಳ ಕಥೆಯಿದೆ. ಇದರಿಂದಾಗಿ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಸೂಕ್ತ ಕಥೆಯಿದೆ ಎಂದು ಅವರಿಗೆನಿಸಿತು.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ 2 ಚಿತ್ರದಲ್ಲಿ ರಜನಿ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಜೊತೆಗೆ ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಸೇರಿದಂತೆ ಹಲವು ಹೊಸ ಕಲಾವಿದರು ನಟಿಸುತ್ತಿದ್ದಾರೆ. ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ವಿಶೇಷ ಪಾತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಅನಿರ್ವಿನ್ ರವಿಚಂದರ್ ಸಂಗೀತ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಮೈಸೂರು-ರಜನಿಕಾಂತ್ ನಡುವಿದೆ ಅವಿನಾಭಾವ ನಂಟು: ಸಾಂಸ್ಕೃತಿಕ ನಗರಿ ಮೇಲೆ ತಲೈವರ್ ಪ್ರೀತಿಗೆ ಇದುವೇ ಅಸಲಿ ಕಾರಣ
ಮೂಲ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಈಗ ಜೈಲರ್ 2 ಸಿನಿಮಾ ಅಕ್ಟೋಬರ್ 15ರಂದು ವಿಶ್ವಾದ್ಯಂತ ಥೇಟರುಗಳಲ್ಲಿ ಬಿಡುಗಡೆಯಾಗಲಿದೆ. ಬರೋಬ್ಬರಿ 250 ರಿಂದ 350 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಮೊದಲ ಭಾಗದ ದಾಖಲೆಯನ್ನು ಈ ಸೀಕ್ವೆಲ್ ಮುರಿಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




