Soundarya Rajinikanth: ಗಂಡು ಮಗುವಿಗೆ ಜನ್ಮ ನೀಡಿದ ರಜನಿಕಾಂತ್ 2ನೇ ಪುತ್ರಿ ಸೌಂದರ್ಯಾ; ಸೂಪರ್ ಸ್ಟಾರ್ ಮನೆಯಲ್ಲಿ ಸಂತಸ
Veer Rajinikanth Vanangamudi: 2ನೇ ಪುತ್ರನ ಆಗಮನದಿಂದ ಸೌಂದರ್ಯಾ ರಜನಿಕಾಂತ್ ಖುಷಿ ಆಗಿದ್ದಾರೆ. ಸೆ.11ರಂದು ಜನಿಸಿರುವ ಗಂಡು ಮಗುವಿಗೆ ವೀರ್ ಎಂದು ಹೆಸರು ಇಡಲಾಗಿದೆ.
‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರ ಎರಡನೇ ಪುತ್ರಿ ಸೌಂದರ್ಯಾ ರಜನಿಕಾಂತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸೆಪ್ಟೆಂಬರ್ 11ರ ರಾತ್ರಿ ಸೋಶಿಯಲ್ ಮೀಡಿಯಾ ಮೂಲಕ ಈ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಈ ಮೂಲಕ ರಜನಿಕಾಂತ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ತಾಯಿಯಾದ ಸೌಂದರ್ಯ (Soundarya Rajinikanth) ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿರುವ ಅವರು ಮಗುವಿನ ಕೈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸೌಂದರ್ಯಾ ಅವರಿಗೆ ವೇದ್ ಎಂಬ ಪುತ್ರನಿದ್ದಾನೆ. ಈಗ ಅವರು ಎರಡನೇ ಮಗನ ಆಗಮನದಿಂದ ಖುಷಿ ಆಗಿದ್ದಾರೆ. ಈ ಮಗನಿಗೆ ವೀರ್ ರಜನಿಕಾಂತ್ ವನಂಗಮುಡಿ (Veer Rajinikanth Vanangamudi) ಎಂದು ಹೆಸರು ಇಡಲಾಗಿದೆ.
‘ದೇವರ ಅಗಾಧವಾದ ಕೃಪೆ ಮತ್ತು ತಂದೆ-ತಾಯಿ ಆಶೀರ್ವಾದದಿಂದ ಸೆಪ್ಟೆಂಬರ್ 11ರಂದು ವೀರ್ ರಜನಿಕಾಂತ್ ವನಂಗಮುಡಿಗೆ ನಾನು, ವಿಶಾಗನ್ ಮತ್ತು ವೇದ್ ಸ್ವಾಗತ ಕೋರಿದ್ದೇವೆ’ ಎಂದು ಸೌಂದರ್ಯಾ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ವೈದ್ಯರಿಗೆ ಅವರು ಧನವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಕೋರಿದ್ದಾರೆ.
With gods abundant grace and our parents blessings ???Vishagan,Ved and I are thrilled to welcome Ved’s little brother ??? VEER RAJINIKANTH VANANGAMUDI today 11/9/22 #Veer #Blessed ??thank you to our amazing doctors @sumana_manohar Dr.Srividya Seshadri @SeshadriSuresh3 ?? pic.twitter.com/a8tXbqmTxf
— soundarya rajnikanth (@soundaryaarajni) September 11, 2022
ಸೌಂದರ್ಯಾ ಅವರು ಅಶ್ವಿನ್ ರಾಮ್ಕುಮಾರ್ ಜೊತೆ 2010ರಲ್ಲಿ ಮದುವೆ ಆಗಿದ್ದರು. ಈ ಜೋಡಿಗೆ 2015ರಲ್ಲಿ ಮೊದಲ ಮಗು ಜನಿಸಿತು. 2017ರಲ್ಲಿ ಸೌಂದರ್ಯಾ ಮತ್ತು ಅಶ್ವಿನ್ ವಿಚ್ಛೇದನ ಪಡೆದುಕೊಂಡರು. 2019ರಲ್ಲಿ ವಿಶಾಗನ್ ವನಂಗಮುಡಿ ಜೊತೆ ಸೌಂದರ್ಯಾ ಎರಡನೇ ಮದುವೆ ಮಾಡಿಕೊಂಡರು. ಈಗ ಈ ದಂಪತಿಗೆ ಮಗು ಜನಿಸಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ.
ತಮಿಳು ಚಿತ್ರರಂಗದಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಸೌಂದರ್ಯಾ ರಜನಿಕಾಂತ್ ಗುರುತಿಸಿಕೊಂಡಿದ್ದಾರೆ. ತಂದೆಯ ಹಲವು ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ. ‘ಕೊಚಾಡಿಯನ್’, ‘ವಿಐಪಿ 2’ ಸಿನಿಮಾಗೆ ಅವರು ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:30 am, Mon, 12 September 22