‘ಕೂಲಿ’ ಚಿತ್ರಕ್ಕೆ ಒಂದೇ ಮಲ್ಟಿಪ್ಲೆಕ್ಸ್​ನಲ್ಲಿ 56 ಶೋ; ಡಬಲ್ ದುಡ್ಡು ಕೊಡ್ತೀನಿ ಎಂದರೂ ಒಂದೇ ಒಂದು ಟಿಕೆಟ್ ಇಲ್ಲ

ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರವು ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಚೆನ್ನೈನ ಒಂದು ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರಕ್ಕೆ 56 ಶೋಗಳನ್ನು ನೀಡಲಾಗಿದೆ. ಎಲ್ಲಾ ಶೋಗಳು ಸಂಪೂರ್ಣವಾಗಿ ಮಾರಾಟವಾಗಿವೆ. ಉಪೇಂದ್ರ, ನಾಗಾರ್ಜುನ, ಆಮಿರ್ ಖಾನ್, ಸೌಬಿನ್ ಶಾಹಿರ್ ಮತ್ತು ಶ್ರುತಿ ಹಾಸನ್ ಅವರಂತಹ ಪ್ರಮುಖ ನಟ-ನಟಿಯರು ಚಿತ್ರದಲ್ಲಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆಯಿದೆ.

‘ಕೂಲಿ’ ಚಿತ್ರಕ್ಕೆ ಒಂದೇ ಮಲ್ಟಿಪ್ಲೆಕ್ಸ್​ನಲ್ಲಿ 56 ಶೋ; ಡಬಲ್ ದುಡ್ಡು ಕೊಡ್ತೀನಿ ಎಂದರೂ ಒಂದೇ ಒಂದು ಟಿಕೆಟ್ ಇಲ್ಲ
ಕೂಲಿ

Updated on: Aug 12, 2025 | 12:41 PM

ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದರ ಬಗ್ಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಅದರಲ್ಲೂ ಅವರು ಮಾಸ್ ಅವತಾರ ತಾಳಿದರೆ ಆ ಚಿತ್ರದ ಕ್ರೇಜ್ ಬೇರೆಯದೇ ರೀತಿ ಇರುತ್ತದೆ. ಇದಕ್ಕೆ ಉತ್ತಮ ಉದಾಹರಣೆ ‘ಕೂಲಿ’. ರಜನಿಕಾಂತ್ ನಟಿಸಿದ್ದಾರೆ ಎಂಬುದು ಒಂದು ಕಡೆಯಾದರೆ ವಿವಿಧ ಭಾಷೆಯ ಹಲವು ಸ್ಟಾರ್ ಹೀರೋಗಳ ಬಳಗ ಈ ಚಿತ್ರದಲ್ಲಿ ನಟಿಸಿದೆ ಎಂಬುದು ಮತ್ತೊಂದು ಕಡೆ. ಈ ಎಲ್ಲಾ ಕಾರಣದಿಂದ ‘ಕೂಲಿ’ ಚಿತ್ರ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ. ಚೆನ್ನೈ ಒಂದರ ಮಲ್ಟಿಪ್ಲೆಕ್ಸ್​ನಲ್ಲಿ ಈ ಚಿತ್ರಕ್ಕೆ 56 ಶೋಗಳನ್ನು ನೀಡಲಾಗಿದೆ. ಎಲ್ಲಾ ಶೋಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ ಅನ್ನೋದು ವಿಶೇಷ.

‘ಜೈಲರ್’ ಬಳಿಕ ರಜನಿಕಾಂತ್ ಸಿನಿಮಾಗೆ ಮತ್ತೆ ಇಷ್ಟು ದೊಡ್ಡ ಕ್ರೇಜ್ ಹುಟ್ಟಿದೆ. ‘ಕೂಲಿ’ ಚಿತ್ರದಲ್ಲಿ ಅವರು ಆ್ಯಕ್ಷನ್ ಮೆರೆದಿದ್ದಾರೆ. ಉಪೇಂದ್ರ, ನಾಗಾರ್ಜುನ, ಆಮಿರ್ ಖಾನ್, ಸೌಬಿನ್ ಶಾಹಿರ್, ಶ್ರುತಿ ಹಾಸನ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪೂಜಾ ಹೆಗ್ಡೆ ವಿಶೇಷ ಸಾಂಗ್ ಚಿತ್ರದಲ್ಲಿ ಇದೆ. ಲೋಕೇಶ್ ಕನಗರಾಜ್ ನಿರ್ದೇಶನ ಚಿತ್ರಕ್ಕೆ ಇದೆ. ಈ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ.

ಚೆನ್ನೈ

‘ಜೈಲರ್’ ಸಿನಿಮಾ ಅಡ್ವಾನ್ಸ್ ಬುಕಿಂಗ್​ನಲ್ಲಿ ದಾಖಲೆ ಬರೆದಿದೆ. ಚೆನ್ನೈನ ಇಸಿಆರ್​ ಭಾಗದ ಮಾಯಾಜಾಲ ಮಲ್ಟಿಪ್ಲೆಕ್ಸ್​ನಲ್ಲಿ ಆಗಸ್ಟ್ 14ರಂದು ಚಿತ್ರಕ್ಕೆ ಬರೋಬ್ಬರಿ 56 ಶೋಗಳನ್ನು ನೀಡಲಾಗಿದೆ. ಈ ಎಲ್ಲಾ ಶೋಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ನೀವು ಡಬಲ್ ಹಣ ಕೊಡ್ತೀನಿ ಎಂದರೂ ಮೊದಲ ದಿನಕ್ಕೆ ಒಂದೇ ಒಂದು ಶೋ ಇಲ್ಲ.

ಇದನ್ನೂ ಓದಿ
21ನೇ ವಯಸ್ಸಿಗೆ ಮದುವೆ ಆದ ಸ್ಟಾರ್ ನಟಿ; ಆ ಹೀರೋಯಿನ್ ಬಗ್ಗೆ ಇಲ್ಲಿದೆ ವಿವರ
‘ಸು ಫ್ರಮ್ ಸೋ’ಗೆ 3ನೇ ಸೋಮವಾರವೂ ತಗ್ಗದ ಕಲೆಕ್ಷನ್; 100 ಕೋಟಿ ಕ್ಲಬ್ ಪಕ್ಕಾ
ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ್ರು
‘ಕಾಟೇರ’ ಕಲೆಕ್ಷನ್​ ದಾಖಲೆ ಮುರಿಯಲು ‘ಸು ಫ್ರಮ್ ಸೋ’ಗೆ ಬೇಕು ಕೆಲವೇ ಕೋಟಿ

ಇದನ್ನೂ ಓದಿ: ‘ವಿಕ್ರಮ್’ ಚಿತ್ರದಲ್ಲಿ ಮಿಸ್ ಆದ ಕಂಟೇನರ್ ‘ಕೂಲಿ’ಯಲ್ಲಿ; ಎರಡೂ ಸಿನಿಮಾ ಮಧ್ಯೆ ಇರೋ ಕನೆಕ್ಷನ್​ಗೆ ಇಲ್ಲಿದೆ ಸಾಕ್ಷಿ

ಮಾಯಾಜಾಲ ಮಲ್ಟಿಪ್ಲೆಕ್ಸ್​ನಲ್ಲಿ ಮಧ್ಯಾಹ್ನ 12.20ರಿಂದ ಸಿನಿಮಾ ಶೋ ಆರಂಭ ಆಗುತ್ತಿದೆ. ರಾತ್ರಿ 11.50ರವರೆಗೆ ಶೋಗಳಿವೆ. 7 ಗಂಟೆಯಿಂದ 8 ಗಂಟೆವರೆಗೆ ಬರೋಬ್ಬರಿ 10 ಶೋಗಳಿವೆ. ಇನ್ನು, ಚೆನ್ನೈನಲ್ಲಿ ಮೊದಲ ದಿನ ‘ಕೂಲಿ’ ಸಿನಿಮಾದ ಬಹುತೇಕ ಶೋಗಳು ಸೋಲ್ಡ್​ಔಟ್ ಆಗಿವೆ.

ಬೆಂಗಳೂರಿನಲ್ಲೂ ಇದೆ ಸ್ಥಿತಿ..

ಬೆಂಗಳೂರಿನಲ್ಲೂ ರಜನಿಕಾಂತ್ ಚಿತ್ರಕ್ಕೆ ಒಳ್ಳೆಯ ಕ್ರೇಜ್ ಇದೆ. ಮುಂಜಾನೆ 6.30ಕ್ಕೆ ಶೋಗಳು ಆರಂಭ ಆಗುತ್ತಿವೆ. ಆ ಶೋಗಳು ಈಗಾಗಲೇ ಬುಕ್ ಆಗಿ ಸೋಲ್ಡ್ ಔಟ್ ಆಗಿದೆ. ಶನಿವಾರದ ಶೋಗಳು ಕೂಡ ಅನೇಕ ಕಡೆಗಳಲ್ಲಿ ಸೋಲ್ಡ್​ಔಟ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.