‘ವಿಕ್ರಮ್’ ಚಿತ್ರದಲ್ಲಿ ಮಿಸ್ ಆದ ಕಂಟೇನರ್ ‘ಕೂಲಿ’ಯಲ್ಲಿ; ಎರಡೂ ಸಿನಿಮಾ ಮಧ್ಯೆ ಇರೋ ಕನೆಕ್ಷನ್ಗೆ ಇಲ್ಲಿದೆ ಸಾಕ್ಷಿ
ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಚಿತ್ರ 2022ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಈಗ ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಆಮಿರ್ ಖಾನ್ ಅವರ ಅತಿಥಿ ಪಾತ್ರವೂ ಕುತೂಹಲ ಕೆರಳಿಸಿದೆ. ಲೋಕೇಶ್ ಕನಗರಾಜ್ ಅವರು ಎರಡು ಚಿತ್ರಗಳ ನಡುವಿನ ಸಂಬಂಧವನ್ನು ಅಲ್ಲ ಗಳೆದಿದ್ದಾರೆ. ಆದರೆ, ಲಿಂಕ್ನ ಪತ್ತೆ ಹಚ್ಚಲಾಗಿದೆ.

‘ವಿಕ್ರಮ್’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಈ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದರು. ‘ಕೈದಿ’ ಚಿತ್ರಕ್ಕೂ ‘ವಿಕ್ರಮ್’ ಸಿನಿಮಾಗೂ ಲಿಂಕ್ ಇಟ್ಟಿದ್ದರು ನಿರ್ದೇಶಕ ಲೋಕೇಶ್ ಕನಗರಾಜ್. ಈಗ ಅವರ ನಿರ್ದೇಶನದಲ್ಲಿ ‘ಕೂಲಿ’ (Coolie) ಚಿತ್ರ ಮೂಡಿ ಬರುತ್ತಿದೆ. ‘ವಿಕ್ರಮ್’ ಚಿತ್ರಕ್ಕೂ ‘ಕೂಲಿ’ಗೂ ಯಾವುದೇ ಸಂಬಂಧ ಇಲ್ಲ ಎಂದು ನಿರ್ದೇಶಕರು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಈಗ ಟ್ರೇಲರ್ನ ಕೆಲವು ವಿಷಯಗಳನ್ನು ಫ್ಯಾನ್ಸ್ ಡಿಕೋಡ್ ಮಾಡಿದ್ದಾರೆ.
‘ವಿಕ್ರಮ್’ ಸಿನಿಮಾದಲ್ಲಿ ಬರೋ ಒಂದು ದೃಶ್ಯದಲ್ಲಿ ಫಹಾದ್ ಫಾಸಿಲ್ ಅವರು ಮಿಸ್ ಆದ ಎರಡು ಕಂಟೇನರ್ ಬಗ್ಗೆ ಕೇಳಿದ್ದರು. ವಿಲನ್ ಪಾತ್ರ ಮಾಡಿದ್ದ ವಿಜಯ್ ಸೇತುಪತಿ ಕೂಡ ಇದಕ್ಕಾಗಿ ಸಾಕಷ್ಟು ತಲೆಕೆಡಿಸಿಕೊಂಡಕಿದ್ದರು. ಲೋಕೇಶ್ ಕನಗರಾಜ್ ಯೂನಿವರ್ಸ್ ಅಡಿಯಲ್ಲೇ ಬಂದ ‘ಲಿಯೋ’ ಚಿತ್ರದಲ್ಲಿ ಕಂಟೇನರ್ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ‘ಕೂಲಿ’ ಸಿನಿಮಾದ ಟ್ರೇಲರ್ನಲ್ಲಿ ಆ ಎರಡು ಕಂಟೇನರ್ಗಳು ಕಾಣಿಸಿವೆ.
ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಅವರು ‘ಕೂಲಿ’ ಸಿನಿಮಾದ ಭಾಗ ಆಗಿದ್ದಾರೆ. ಅವರು ಈ ಚಿತ್ರದಲ್ಲಿ ವಿಸ್ತ್ರತ ಅತಿಥಿ ಪಾತ್ರ ಮಾಡಿದ್ದಾರೆ. ಈ ಪಾತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಟ್ರೇಲರ್ನಲ್ಲಿ ಅವರು ಕೂಡ ಕಾಣಿಸಿದ್ದಾರೆ. ಟ್ರೇಲರ್ನಲ್ಲಿ ತೋರಿಸಿದ ದೃಶ್ಯವೊಂದರಲ್ಲಿ ಆಮಿರ್ ಎದುರು ಆ ಎರಡು ಕಂಟೇನರ್ಗಳು ನಿಂತಿವೆ. ‘ವಿಕ್ರಮ್’ ಸಿನಿಮಾದಲ್ಲಿ ಹುಡುಕುವ ಕಂಟೇನರ್ ಇದೇ ಇರಬಹುದು ಎಂದು ಅನೇಕರು ಊಹಿಸಿದ್ದಾರೆ.
View this post on Instagram
ಲೋಕೇಶ್ ಕನಗರಾಜ್ ಅವರು ಈ ಮೊದಲಿನಿಂದಲೂ ‘ವಿಕ್ರಮ್’ ಚಿತ್ರಕ್ಕೂ ‘ಕೂಲಿಗೂ’ ಸಂಬಂಧ ಇಲ್ಲ ಎನ್ನುತ್ತಲೇ ಬರುತ್ತಿದ್ದರು. ‘ಲಿಯೋ’ ಚಿತ್ರದ ಕೊನೆಯಲ್ಲಿ ಹೇಗೆ ಕಮಲ್ ಹಾಸನ ಅವರ ವಾಯ್ಸ್ ಬರುತ್ತದೆಯೇ ಅದೇ ರೀತಿ ‘ಕೂಲಿ’ ಚಿತ್ರದ ಕೊನೆಯಲ್ಲೂ ಕಮಲ್ ಧ್ವನಿ ಇರುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ಲೋಕೇಶ್ ಅವರು ಕಮಲ್ ಹಾಸನ್ ಬಳಿ ಧ್ವನಿಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಓಂ ಚಿತ್ರದ ಎದುರು ನನ್ನ ಬಾಷಾ ಏನೂ ಅಲ್ಲ’; ಉಪ್ಪಿ ಬಗ್ಗೆ ರಜನಿ ಮೆಚ್ಚುಗೆಯ ಮಾತು
‘ವಿಕ್ರಮ್’ ಸೂಪರ್ ಹಿಟ್ ಚಿತ್ರ. ಈ ಸಿನಿಮಾಗೂ ‘ಕೂಲಿ’ಗೂ ಲಿಂಕ್ ಇದ್ದರೆ ಫ್ಯಾನ್ಸ್ ಸಾಕಷ್ಟು ಖುಷಿಪಡೋದು ಪಕ್ಕಾ. ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆಗಸ್ಟ್ 14ರಂದು ಚಿತ್ರ ರಿಲೀಸ್ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:03 am, Tue, 12 August 25








