ರಜನಿಕಾಂತ್ ಅಭಿಮಾನಿಗಳ ಬಳಿ ಎಷ್ಟು ಸ್ವೀಟ್ ಆಗಿ ನಡೆದುಕೊಳ್ತಾರೆ ನೋಡಿ; ಈ ವಿಡಿಯೋ ಉತ್ತಮ ಸಾಕ್ಷಿ

ರಜನಿಕಾಂತ್ ಅವರು ಚೆನ್ನೈನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಎಕಾನಮಿ ಕ್ಲಾಸ್‌ನಲ್ಲಿ ಅಭಿಮಾನಿಗಳನ್ನು ಭೇಟಿಯಾದರು. ಅವರೊಂದಿಗೆ ಸೌಜನ್ಯದಿಂದ ವರ್ತಿಸಿ, ಕೈ ಬೀಸಿ, ಕೈ ಮುಗಿದು ಅವರನ್ನು ಸಂತೋಷಪಡಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ನಮ್ರತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಜನಿಕಾಂತ್ ಅಭಿಮಾನಿಗಳ ಬಳಿ ಎಷ್ಟು ಸ್ವೀಟ್ ಆಗಿ ನಡೆದುಕೊಳ್ತಾರೆ ನೋಡಿ; ಈ ವಿಡಿಯೋ ಉತ್ತಮ ಸಾಕ್ಷಿ
ರಜನಿಕಾಂತ್

Updated on: Aug 07, 2025 | 11:55 AM

ರಜನಿಕಾಂತ್ (Rajinikanth) ಅವರಿಗೆ ಅಭಿಮಾನಿಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಎಲ್ಲಾದರೂ ಫ್ಯಾನ್ಸ್ ಕಂಡರೆ ಅವರು ಕನಿಷ್ಠ ಒಂದು ಹಾಯ್ ಆದರೂ ಹೇಳುತ್ತಾರೆ. ಸೆಲ್ಫಿ ಕೇಳಿದರೆ ಖುಷಿಯಿಂದ ನೀಡುತ್ತಾರೆ. ಈ ಮೊದಲು ಶೂಟಿಂಗ್ ಸ್ಥಳದಿಂದ ಕಾರಿನಲ್ಲಿ ತೆರಳುವಾಗ ರಸ್ತೆಯ ಎರಡೂ ಬದಿಗೆ ನಿಲ್ಲುವ ಅಭಿಮಾನಿಗಳಿಗೆ ಅವರು ಸನ್ ರೂಫ್ ಮೂಲಕ ಮೇಲೆದ್ದು, ಕೈ ಬೀಸಿ ಹೋದ ಉದಾಹರಣೆ ಇದೆ. ಈಗ ಅವರು ವಿಮಾನದಲ್ಲಿ ನಡೆದುಕೊಂಡ ಒಂದು ಘಟನೆ ಸಾಕಷ್ಟು ಮೆಚ್ಚುಗೆ ಪಡೆದಿದೆ.

ರಜನಿಕಾಂತ್ ಅವರು ಇತ್ತೀಚೆಗೆ ಮಗಳು ಐಶ್ವರ್ಯಾ ಜೊತೆ ಚೆನ್ನೈನಿಂದ ಹೈದರಾಬಾದ್​ಗೆ ತೆರಳುವವರಿದ್ದರು. ಎಕಾನಮಿ ಕ್ಲಾಸ್​ನಲ್ಲಿ ಅವರು ಪ್ರಯಾಣ ಮಾಡುವವರಿದ್ದರು. ಅವರು ಬಂದು ಕುಳಿತುಕೊಳ್ಳುತ್ತಿದ್ದಂತೆ ಕೆಲ ಫ್ಯಾನ್ಸ್  ‘ತಲೈವಾ ನಿಮ್ಮ ಮುಖ ನೋಡಬೇಕು’ ಎಂದು ಬೇಡಿಕೆ ಇಟ್ಟರು. ಈ ವೇಳೆ ರಜನಿಕಾಂತ್ ನಡೆದುಕೊಂಡ ರೀತಿ ಅನೇಕರ ಮೆಚ್ಚುಗೆಗೆ ಕಾರಣ ಆಗಿದೆ.

ಇದನ್ನೂ ಓದಿ
ದಕ್ಷಿಣ ಚಿತ್ರರಂಗಲ್ಲಿ ಹೊಕ್ಕುಳದ ಗೀಳು ಜಾಸ್ತಿ ಎಂದು ಆರೋಪಿಸಿದ ಮಾಳವಿಕಾ
50 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಸು ಫ್ರಮ್ ಸೋ’; ಎಲ್ಲಿಂದ ಎಷ್ಟು ಬಂತು?
ಪತಿಗೆ ಎಂದೂ ಮರೆಯಲಾರದ ಉಡುಗೊರೆ ಕೊಟ್ಟ ಸೋನಲ್; ಭಾವುಕರಾಗಿ ಕೈ ಮುಗಿದ ತರುಣ್
‘ನೀವು ಗ್ಯಾಂಗ್ ಮಾಡಿ ಬ್ರದರ್’; ‘ಶೆಟ್ಟಿ ಮಾಫಿಯಾ’ ಎಂದವರಿಗೆ ರಾಜ್ ಉತ್ತರ

ಇದನ್ನೂ ಓದಿ: ‘ವಾರ್ 2’ ಚಿತ್ರಕ್ಕಿಂತಲೂ ‘ಕೂಲಿ’ ಸಿನಿಮಾದ್ದೇ ಮೇಲುಗೈ; ಇದು ರಜನಿಕಾಂತ್ ಹವಾ

ರಜನಿಕಾಂತ್​ಗೆ ಅಭಿಮಾನಿಗಳಿಂದ ಈ ಮನವಿ ಬರುತ್ತಿದ್ದಂತೆ ಅವರು ವಿಳಂಬ ಮಾಡಲೇ ಇಲ್ಲ. ಎದ್ದು ನಿಂತು ಫ್ಯಾನ್ಸ್ ಕಡೆ ಕೈ ಬೀಸಿದರು. ನಂತರ ಎಲ್ಲರಿಗೂ ಕೈ ಮುಗಿದರು. ಸದ್ಯ ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಗತ್ತಿದೆ. ಆಗ ಅಲ್ಲಿ ನೆರೆದ ಅಭಿಮಾನಿಗಳು ಖುಷಿಯಿಂದ ಕೂಗಿದರು. ರಜನಿಯನ್ನು ಹತ್ತಿರದಿಂದ ನೋಡಿ ಅವರಿಗೆ ಖುಷಿ ಆಯಿತು.

ರಜನಿ ಬಗ್ಗೆ ಮಾಡಲಾದ ಪೋಸ್ಟ್

ರಜನಿಕಾಂತ್ ಅವರು ವಿವಿಧ ಕೆಲಸಕ್ಕೆ ನಾನಾ ನಗರಕ್ಕೆ ತೆರಳುತ್ತಾ ಇರುತ್ತಾರೆ. ಅವರು ವೈಯಕ್ತಿಕ ಕೆಲಸದ ಉದ್ದೇಶಕ್ಕೆ ಹೈದರಾಬಾದ್ ತೆರಳಿದ್ದಾರೆ ಎನ್ನಲಾಗಿದೆ.  ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಆಗಸ್ಟ್ 14ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಇದನ್ನು ನಿರ್ಮಾಣ ಮಾಡಿದೆ. ತೆಲುಗಿನ ನಾಗಾರ್ಜುನ, ಕನ್ನಡದ ಉಪೇಂದ್ರ, ಹಿಂದಿಯ ಆಮಿರ್ ಖಾನ್, ಮಲಯಾಳಂನ ಸೌಬಿನ್ ಶಾಹಿರ್ ಈ ಚಿತ್ರದ ಭಾಗ ಆಗಿದ್ದಾರೆ. ಶ್ರುತಿ ಹಾಸನ್ ಈ ಚಿತ್ರಕ್ಕೆ ನಾಯಕಿ. ‘ವಾರ್ 2’ ಸಿನಿಮಾ ಎದುರು ‘ಕೂಲಿ’ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 11:49 am, Thu, 7 August 25