
ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಾಲಿವುಡ್ನಲ್ಲಿ ಸದ್ಯ ಬ್ಯುಸಿ ಇದ್ದಾರೆ. ಅವರು ದಕ್ಷಿಣದ ಹೀರೋಯಿನ್. ಅವರು ಮೊದಲ ಸಿನಿಮಾ ಮಾಡಿದ್ದು ಕನ್ನಡದಲ್ಲೇ. ಆದರೆ, ಈಗ ಬಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಅವರ ಬಗ್ಗೆ ಒಂದು ದೊಡ್ಡ ವದಂತಿ ಹುಟ್ಟಿಕೊಂಡಿತ್ತು. ತೆಲಂಗಾಣ ಮಾಜಿ ಸಚಿವ ಕೆಟಿಆರ್ ಅವರು ರಕುಲ್ಗೆ ಮನೆ ನೀಡಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ರಕುಲ್ ಅವರೇ ಪ್ರತಿಕ್ರಿಯಿಸಿದ್ದಾರೆ.
ಕೆಲವು ನಟಿಯರಿಗೆ ರಾಜಕೀಯ ನಾಯಕರ ಜೊತೆ ಒಳ್ಳೆಯ ಒಡನಾಟ ಇರುತ್ತದೆ. ಆದರೆ, ಕೆಲವು ಸಂದರ್ಭದಗಳಲ್ಲಿ ನಟಿಯರ ಕ್ಯಾರೆಕ್ಟರ್ಗೆ ಹಾನಿ ಆಗುವಂಥ ವದಂತಿಗಳು ಹುಟ್ಟಿಕೊಳ್ಳುತ್ತವೆ. ರಕುಲ್ ಅವರಿಗೂ ಇದೇ ರೀತಿ ಆಗಿತ್ತು. ಅವರಿಗೆ ತೆಲಂಗಾಣದಲ್ಲಿ ಮನೆ ಕೊಟ್ಟಿದ್ದು ಓರ್ವ ರಾಜಕಾರಣಿ ಎಂದು ಹೇಳಲಾಗಿತ್ತು. ಇಷ್ಟು ದಿನ ಅವರು ಈ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ ಅವರು ರಾಜಕಾರಣಿ ಹೆಸರು ಹಾಗೂ ವದಂತಿ ಬಗ್ಗೆ ನೇರವಾಗಿ ಹೇಳದೇ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
‘ಉಡುಗೊರೆಯಾಗಿ ಸಿಕ್ಕ ನನ್ನ ಮನೆಯ ಬಗ್ಗೆ ಒಂದು ವಿಚಿತ್ರ ಗಾಳಿ ಸುದ್ದಿ ಹರಿದಾಡಿತ್ತು. ನಿಜ ಹೇಳಬೇಕು ಎಂದರೆ ನನ್ನ ತಂದೆಯೇ ಇದರ ಪೇಪರ್ ಕೆಲಸ ಮಾಡಿದ್ದಾರೆ. ಕಷ್ಟಪಟ್ಟು ದುಡಿದ ಹಣದಿಂದ ಮನೆ ಪಡೆದು, ಈ ರೀತಿಯ ವದಂತಿ ಹುಟ್ಟಿಕೊಂಡಾಗ ನನ್ನ ತಂದೆ ಸಾಕಷ್ಟು ಬೇಸರಗೊಂಡರು. ನನಗೆ ಅವರು ಉತ್ತರಿಸುವಂತೆ ಹೇಳಿದರು. ಆದರೆ, ನಾನು ಎಲ್ಲ ಸಮಯದಲ್ಲೂ ಉತ್ತರ ಕೊಡುತ್ತಾ ಕೂರೋಕೆ ಆಗಲ್ಲ ಎಂದೆ’ ಎಂಬುದು ರಕುಲ್ ಉತ್ತರ ಆಗಿತ್ತು.
ಇದನ್ನೂ ಓದಿ: ಸೊಂಟ ನೋವು ಮಾಡಿಕೊಂಡ ರಕುಲ್ ಪ್ರೀತ್ ಸಿಂಗ್; ಪರಿಸ್ಥಿತಿ ಗಂಭೀರ: ಕಾರಣ ಏನು?
ರಕುಲ್ ಪ್ರೀತ್ ಸಿಂಗ್ ಮೊಟ್ಟ ಮೊದಲ ಬಾರಿಗೆ ನಟಿಸಿದ್ದು ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ. ಆ ಬಳಿಕ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಬ್ಯುಸಿ ಆದರು. ತೆಲುಗಿನಲ್ಲಿ ಸಾಕಷ್ಟು ಆಫರ್ಗಳು ಬಂತು. ಈಗ ಅವರು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ವಿವಾಹ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಆಗಾಗ ಅವರು ಟ್ರಿಪ್ ಮಾಡುತ್ತಾರೆ. ದೇಶ-ವಿದೇಶ ಸುತ್ತುತ್ತಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ‘ದೇ ದೇ ಪ್ಯಾರ್ ದೇ 2’ ಹಾಗೂ ‘ಇಂಡಿಯನ್ 3’ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.