
ರಾಕುಲ್ ಪ್ರೀತ್ ಸಿಂಗ್ ಅವರು ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಟಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡರು. ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಚ್ಯೂಸಿ ಆಗಿರುವ ಈ ಗ್ಲಾಮರ್ ಬೆಡಗಿ ಕೈಯಲ್ಲಿ ಸಾಕಷ್ಟು ದೊಡ್ಡ ಪ್ರಾಜೆಕ್ಟ್ಗಳಿವೆ. ಸಿನಿಮಾ ಮಾತ್ರವಲ್ಲದೆ, ಬಾಯ್ಫ್ರೆಂಡ್ ವಿಚಾರದಲ್ಲೂ ಅವರು ಸುದ್ದಿಯಾಗುತ್ತಿದ್ದರು. ಈಗ ಈ ಎಲ್ಲಾ ವದಂತಿಗೆ ರಾಕುಲ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಹಾಗಂತ ತಮಗೆ ಬಾಯ್ಫ್ರೆಂಡ್ ಇಲ್ಲ, ನಾನು ಸುತ್ತಾಡುತ್ತಿರುವ ಹುಡುಗ ನನ್ನ ಬೆಸ್ಟ್ ಫ್ರೆಂಡ್ ಅಷ್ಟೇ ಎಂಬಿತ್ಯಾದಿ ಸಬೂಬನ್ನು ಅವರು ನೀಡಿಲ್ಲ. ಬದಲಿಗೆ ನೇರವಾಗಿ ಪ್ರಿಯಕರನನ್ನೇ ಅವರು ಪರಿಚಯಿಸಿದ್ದಾರೆ.
ಇಂದು (ಅಕ್ಟೋಬರ್ 10) ರಾಕುಲ್ ಪ್ರೀತ್ ಸಿಂಗ್ ಜನ್ಮದಿನ. ಅವರು 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ರಾಕುಲ್ಗೆ ಬಾಲಿವುಡ್ ಹಾಗೂ ಟಾಲಿವುಡ್ ಸ್ಟಾರ್ಗಳು ಮತ್ತು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ. ಈ ವಿಶೇಷ ದಿನದಂದು ಅವರು ತಮ್ಮ ಬಾಯ್ಫ್ರೆಂಡ್, ಯುವ ನಟ ಜಾಕಿ ಭಗ್ನಾನಿ ಅವರನ್ನು ಪರಿಚಯಿಸಿದ್ದಾರೆ. ಇದಕ್ಕೆ ಅವರು ವಿಶೇಷ ಸಾಲುಗಳನ್ನು ಕೂಡ ಬರೆದಿದ್ದಾರೆ.
ವಿದೇಶದಲ್ಲಿ ಸಮಯ ಕಳೆದ ಫೋಟೋವನ್ನು ರಾಕುಲ್ ಪೋಸ್ಟ್ ಮಾಡಿದ್ದಾರೆ. ‘ಧನ್ಯವಾದಗಳು ನನ್ನ ಲವ್. ಈ ವರ್ಷದ ಅತಿ ದೊಡ್ಡ ಗಿಫ್ಟ್ ನೀನು. ನನ್ನ ಜೀವನಕ್ಕೆ ಬಣ್ಣ ತುಂಬಿದ್ದಕ್ಕೆ ಧನ್ಯವಾದ. ನಿರಂತರವಾಗಿ ನಗುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್. ಒಟ್ಟಾಗಿ ಇನ್ನೂ ಸಾಕಷ್ಟು ನೆನಪುಗಳನ್ನು ಕೂಡೋಣೋ’ ಎಂದಿದ್ದಾರೆ ರಾಕುಲ್.
ಅಚ್ಚರಿ ಎಂದರೆ ಜಾಕಿ ಕೂಡ ಇದೇ ಮಾದರಿಯ ಸಾಲುಗಳನ್ನು ಬರೆದು ರಾಕುಲ್ಗೆ ಬರ್ತ್ಡೇ ವಿಶ್ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಪ್ರೀತಿ ವಿಚಾರವನ್ನು ಮದುವೆವರೆಗೆ ಸೀಕ್ರೆಟ್ ಆಗಿ ಇಡುತ್ತಾರೆ. ಆದರೆ, ರಾಕುಲ್ ಈ ವಿಚಾರದಲ್ಲಿ ಹಾಗಿಲ್ಲ. ಅವರು ನೇರವಾಗಿ ತಮ್ಮ ಬಾಯ್ಫ್ರೆಂಡ್ಅನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇತ್ತೀಚೆಗೆ ರಾಕುಲ್ ಅವರು ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅವರು ಇತ್ತೀಚೆಗೆ ಹಂಚಿಕೊಂಡ ಫೋಟೋದಲ್ಲಿ ತುಂಬಾನೇ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಜತೆಗೆ ಅವರ ಹಳೆಯ ಫೋಟೋಗಳನ್ನು ಇಟ್ಟು ಹೋಲಿಕೆ ಮಾಡಿದ್ದರು ಅಭಿಮಾನಿಗಳು. ರಾಕುಲ್ ಕೈಯಲ್ಲಿ ಬಾಲಿವುಡ್ ಸಿನಿಮಾಗಳು ಹೆಚ್ಚಿವೆ. ‘ತಲೈವಿ’ ನಿರ್ದೇಶಕ ಎ.ಎಲ್. ವಿಜಯ್ ಅವರ ‘ಅಕ್ಟೋಬರ್ 31 ಲೇಡಿಸ್ ನೈಟ್’ ಸಿನಿಮಾದಲ್ಲಿ ರಾಕುಲ್ ನಟಿಸುತ್ತಿದ್ದಾರೆ. ಈ ಸಿನಿಮಾ ತೆಲುಗು ಹಾಗೂ ತಮಿಳಲ್ಲಿ ತೆರೆಗೆ ಬರೋಕೆ ರೆಡಿ ಆಗುತ್ತಿದೆ.
ಇದನ್ನೂ ಓದಿ: ಅಂದ ಹೆಚ್ಚಿಸಿಕೊಳ್ಳೋಕೆ ರಾಕುಲ್ ಪ್ರೀತ್ ಸಿಂಗ್ ತುಳಿದ್ರು ಸರ್ಜರಿ ಮಾರ್ಗ?; ಇಲ್ಲಿದೆ ಸಾಕ್ಷ್ಯ