AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರಿಯ ಹಾಸ್ಯನಟನ ಕಾಲು ನಮಸ್ಕರಿಸಿದ ರಾಮ್ ಚರಣ್, ವಿಷಯವೇನು?

Ram Charan Teja: ತೆಲುಗಿನ ಸ್ಟಾರ್ ನಟ, ಗ್ಲೋಬಲ್ ಸ್ಟಾರ್ ಎನಿಸಿಕೊಳ್ಳುತ್ತಿರುವ ರಾಮ್ ಚರಣ್ ನಿಜ ಜೀವನದಲ್ಲಿ ಬಹಳ ವಿನಯವಂತ, ಆದರೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ತುಣುಕೊಂದರಲ್ಲಿ ಅವರು ತಮಗಿಂತ ವಯಸ್ಸಿನಲ್ಲಿ ಬಹಳ ಕಿರಿಯವರಾದ ಹಾಸ್ಯ ನಟರೊಬ್ಬರ ಕಾಲಿಗೆ ನಮಸ್ಕರಿಸುತ್ತಿದ್ದಾರೆ. ಇದರ ಅಸಲಿ ಕತೆ ಏನು?

ಕಿರಿಯ ಹಾಸ್ಯನಟನ ಕಾಲು ನಮಸ್ಕರಿಸಿದ ರಾಮ್ ಚರಣ್, ವಿಷಯವೇನು?
Ram Charan Sathya
Follow us
ಮಂಜುನಾಥ ಸಿ.
|

Updated on: Apr 10, 2025 | 6:03 PM

ರಾಮ್ ಚರಣ್ (Ram Charan) ಈಗ ಗ್ಲೋಬಲ್ ಸ್ಟಾರ್. ಅಭಿಮಾನಿಗಳಿಗೆ ಮಾತ್ರವಲ್ಲ ಸಿನಿಮಾ ನಟ-ನಟಿಯರಿಗೂ ಸಹ ರಾಮ್ ಚರಣ್ ದೊಡ್ಡ ಸೆಲೆಬ್ರಿಟಿ, ಅವರ ಭೇಟಿಯ ಅವಕಾಶ ಸಿಗುವುದೇ ಅಪರೂಪ. ಆದರೆ ಇತ್ತೀಚೆಗೆ ಒಂದು ವೀಡಿಯೋ ತುಣುಕು ವೈರಲ್ ಆಗಿದ್ದು, ತಮಗಿಂತಲೂ ಬಹಳ ಕಿರಿಯ ಹಾಸ್ಯ ನಟನೊಬ್ಬರ ಕಾಲಿಗೆ ನಮಸ್ಕರಿಸುತ್ತಿದ್ದಾರೆ ನಟ ರಾಮ್ ಚರಣ್. ಇದನ್ನು ಕಂಡು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆದರೆ ಅಸಲಿ ಕತೆ ಬೇರೆಯೇ ಇದೆ.

ಸತ್ಯ, ತೆಲುಗು ಚಿತ್ರರಂಗದಲ್ಲಿ ಸಖತ್ ಬೇಡಿಕೆಯಲ್ಲಿರುವ ಹಾಸ್ಯ ನಟ. ಸತ್ಯ ಅನ್ನು ಮುಂದಿನ ಬ್ರಹ್ಮಾನಂದಂ ಎಂದೇ ತೆಲುಗು ಚಿತ್ರರಂಗ ಕರೆಯುತ್ತಿದೆ. ಅದ್ಭುತ ಸೆನ್ಸ್ ಆಫ್ ಹ್ಯೂಮರ್, ಟೈಮಿಂಗ್ ಜೊತೆಗೆ ಅದ್ಭುತವಾದ ನಟ ಸಹ ಆಗಿದ್ದಾರೆ ಸತ್ಯ. ಇದೇ ಕಾರಣಕ್ಕೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅವಕಾಶ ಸಿಗುತ್ತಿವೆ, ಸಿಕ್ಕ ಅವಕಾಶಗಳಲ್ಲೆಲ್ಲ ಮಿಂಚುತ್ತಿದ್ದಾರೆ ನಟ ಸತ್ಯ.

ಇದೀಗ ಅವರು ಪ್ರಧಾನ ಹಾಸ್ಯ ನಟರಾಗಿ ನಟಿಸಿರುವ ‘ಅಕ್ಕಡ ಅಮ್ಮಾಯಿ, ಇಕ್ಕಡ ಅಬ್ಬಾಯಿ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸತ್ಯ ಭಾಗಿ ಆಗಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮೊದಲ ಟಿಕೆಟ್ ಅನ್ನು ಮಾರಾಟ ಮಾಡಲು ಸತ್ಯ ಮತ್ತು ಸಿನಿಮಾದ ಹೀರೋ ಪ್ರದೀಪ್ ಜೊತೆಗೆ ರಾಮ್ ಚರಣ್ ನಿವಾಸಕ್ಕೆ ತೆರಳಿದ್ದರು. ಈ ಭೇಟಿಯನ್ನು ವಿಡಿಯೋ ಮಾಡಿಕೊಂಡಿದ್ದು, ಭೇಟಿಗೆ ಕಾಮಿಡಿ ಟಚ್ ನೀಡುವ ಸಲುವಾಗಿ ಸಣ್ಣ ಸ್ಕಿಟ್ ರೀತಿ ಮಾಡಿದ್ದಾರೆ.

ಇದನ್ನೂ ಓದಿ:ಪ್ರೀತಿಯ ನಿರ್ದೇಶಕನಿಗೆ ಮೂರು ವಿಶೇಷ ಗಿಫ್ಟ್ ಕೊಟ್ಟ ರಾಮ್ ಚರಣ್

ಸತ್ಯ, ಪ್ರದೀಪ್​ಗೆ, ರಾಮ್ ಚರಣ್ ನನಗೆ ಬಹಳ ಪರಿಚಯ, ನನ್ನ ಆಪ್ತ ಎಂದೆಲ್ಲ ಬಿಲ್ಡಪ್ ಕೊಟ್ಟಿರುತ್ತಾರೆ. ಹಾಗೆಯೇ ರಾಮ್ ಚರಣ್ ಬಂದಾಗ ಅವರು ಪ್ರದೀಪ್ ಅನ್ನು ಗುರುತು ಹಿಡಿದು ಮಾತನಾಡಿಸುತ್ತಾರೆ ಆದರೆ ಸತ್ಯ ಅವರನ್ನು ಗುರುತಿಸುವುದಿಲ್ಲ. ಸತ್ಯ ಅವರನ್ನು ಕಿಶೋರ್ ಎಂದು ಮಾತನಾಡಿಸುತ್ತಾರೆ. ಕೊನೆಗೆ ಪ್ರದೀಪ್, ಮೊದಲ ಟಿಕೆಟ್ ಅನ್ನು ರಾಮ್ ಚರಣ್​ಗೆ ಮಾರಾಟ ಮಾಡುತ್ತಾರೆ. ಅಂತ್ಯದಲ್ಲಿ ರಾಮ್ ಚರಣ್, ಸತ್ಯ ಅನ್ನು ಗುರುತು ಹಿಡಿಯುತ್ತಾರೆ. ‘ಶೂಟಿಂಗ್​ಗೆ ಬೇಗ ಬರುವುದು ಕಲಿ’ ಎನ್ನುತ್ತಾರೆ. ಆಗ ಸತ್ಯ, ತಮಾಷೆಯಾಗಿ ರಾಮ್ ಚರಣ್ ಕಾಲಿಗೆ ನಮಸ್ಕರಿಸುತ್ತಾರೆ, ಬಳಿಕ ರಾಮ್ ಚರಣ್ ಸಹ ಸತ್ಯ ಕಾಲಿಗೆ ನಮಸ್ಕರಿಸುವಂತೆ ನಟಿಸುತ್ತಾರೆ. ಇದನ್ನು ನಿರೀಕ್ಷಿಸದ ಸತ್ಯ ಹಿಂದಕ್ಕೆ ಓಡುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ