2ನೇ ದಿನ ‘ಗೇಮ್ ಚೇಂಜರ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?

Game Changer Box Office: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ 51 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು. ಎರಡನೇ ದಿನ ಈ ಸಿನಿಮಾ ಮಾಡಿರುವ ಗಳಿಕೆ ಎಷ್ಟು? ಎರಡನೇ ದಿನದ ಕಲೆಕ್ಷನ್ ಸಿನಿಮಾ ಹಿಟ್ ಅಥವಾ ಪ್ಲಾಪ್ ಎಂಬುದನ್ನು ನಿರ್ಣಯ ಮಾಡುತ್ತದೆ. ಹಾಗಿದ್ದರೆ ರಾಮ್ ಚರಣ್ ಅವರ ಈ ಸಿನಿಮಾ ಹಿಟ್ ಆಯ್ತ? ಅಥವಾ ಫ್ಲಾಪ್ ಸಿನಿಮಾನಾ?

2ನೇ ದಿನ ‘ಗೇಮ್ ಚೇಂಜರ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?
Game Changer
Follow us
ಮಂಜುನಾಥ ಸಿ.
|

Updated on: Jan 12, 2025 | 8:42 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಶಂಕರ್ ನಿರ್ದೇಶನದ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಲಾಗಿತ್ತು. ‘ಆರ್​ಆರ್​ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಸಹ ಇದಾಗಿರುವ ಕಾರಣ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಸಿನಿಮಾ ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಹಾಗಿದ್ದರೂ ಸಹ ಬಾಕ್ಸ್ ಆಫೀಸ್​ನಲ್ಲಿ ಬಹಳ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿತು. ಇದೀಗ ಎರಡನೇ ದಿನ ಆ ಕಲೆಕ್ಷನ್ ಉಳಿದುಕೊಂಡಿದೆಯೇ? ಮೊದಲ ದಿನ ಏನೂ ಗೊತ್ತಿಲ್ಲದೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗಿರುತ್ತಾನೆ. ಹಾಗಾಗಿ ಎರಡನೇ ದಿನದ ಕಲೆಕ್ಷನ್ ಸಿನಿಮಾದ ನಿಜವಾದ ಸಾಮರ್ಥ್ಯವನ್ನು ತೋರಿಸುತ್ತದೆ. ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂಬುದನ್ನು ಹೇಳುತ್ತದೆ. ಅಂದಹಾಗೆ ‘ಗೇಮ್ ಚೇಂಜರ್’ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟಾಗಿದೆ?

ಜನವರಿ 10 ರಂದು ಬಿಡುಗಡೆ ಆಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ 51 ಕೋಟಿ ರೂಪಾಯಿ ಹಣ ಗಳಿಸಿದೆ. ಅಸಲಿಗೆ ಇದು ಬಹಳ ಉತ್ತಮ ಮೊತ್ತ. ಇಷ್ಟು ದೊಡ್ಡ ಮೊತ್ತವನ್ನು ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ದೊಡ್ಡ ಮೊತ್ತವನ್ನೇ ‘ಗೇಮ್ ಚೇಂಜರ್’ ಗಳಿಸಿತ್ತು. ಎರಡನೇ ದಿನ ಸಿನಿಮಾದ ಕಲೆಕ್ಷನ್ 50% ಗಿಂತಲೂ ಹೆಚ್ಚು ಕುಸಿದಿದೆ. ಆ ಮೂಲಕ ಸಿನಿಮಾಕ್ಕೆ ನೆಗೆಟಿವ್ ಹೊಡೆತ ಬಿದ್ದಾಗಿದೆ.

ಇದನ್ನೂ ಓದಿ:ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಭರ್ಜರಿ ಗಳಿಕೆ; ‘ಗೇಮ್ ಚೇಂಜರ್’ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?

‘ಗೇಮ್ ಚೇಂಜರ್’ ಸಿನಿಮಾ ಎರಡನೇ ದಿನ ಬಾಕ್ಸ್ ಆಫೀಸ್​ನಲ್ಲಿ ಕೇವಲ 21.50 ಕೋಟಿ ರೂಪಾಯಿ ಹಣವನ್ನು ಮಾತ್ರವೇ ಗಳಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಈ ಮೊತ್ತ ಬಹಳ ಕಡಿಮೆ. ಮೊದಲ ಸಿನಿಮಾ ಸಿನಿಮಾ ನೋಡಿದ ಮಂದಿ ನೀರಸ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಅದರ ಪರಿಣಾಮ ಎರಡನೇ ದಿನದ ಮೇಲಾಗಿದೆ. ಮೊದಲ ದಿನ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಜನ ಬಂದಿದ್ದರು. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಹಬ್ಬಿದ ಕಾರಣ ಎರಡನೇ ದಿನಕ್ಕೆ ಸಿನಿಮಾದ ಕಲೆಕ್ಷನ್ ಕುಸಿದಿದೆ.

ಮೂರನೇ ದಿನದ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಏಕೆಂದರೆ ಜನವರಿ 12 ರಂದು ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಸಿನಿಮಾದ ಬಗ್ಗೆ ಒಳ್ಳೆಯ ಟಾಕ್ ಇದ್ದು, ಈ ಸಿನಿಮಾ, ‘ಗೇಮ್ ಚೇಂಜರ್’ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ನುಂಗಿ ಹಾಕಲಾಗಿದೆ. ಆದರೆ ವೀಕೆಂಡ್ ಮತ್ತು ಆ ನಂತರ ಸಂಕ್ರಾಂತಿ ರಜೆ ಸಾಲು ಸಾಲಾಗಿ ಇರುವ ಕಾರಣ ಸಿನಿಮಾದ ಕಲೆಕ್ಷನ್ ಕುಸಿಯದೆ ಸ್ಥಿರವಾಗಿ ನಿಲ್ಲುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?