Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವಾರಕ್ಕೆ ಪಾತಾಳಕ್ಕೆ ಕುಸಿದ ಗೇಮ್ ಚೇಂಜರ್ ಕಲೆಕ್ಷನ್

Game Changer: ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಒಂದು ವಾರ ಪೂರ್ಣಗೊಂಡಿದ್ದು, ಈ ಸಿನಿಮಾ ಹಿಟ್ ಆಯ್ತಾ? ಫ್ಲಾಪ್ ಎನಿಸಿಕೊಂಡಿತಾ. ಒಂದು ವಾರಕ್ಕೆ ಈ ಸಿನಿಮಾ ಗಳಿಸಿದ ಹಣವೆಷ್ಟು? ಇನ್ನಿತರೆ ಮಾಹಿತಿಗಳು ಇಲ್ಲಿವೆ...

ಒಂದೇ ವಾರಕ್ಕೆ ಪಾತಾಳಕ್ಕೆ ಕುಸಿದ ಗೇಮ್ ಚೇಂಜರ್ ಕಲೆಕ್ಷನ್
Game Changer
Follow us
ಮಂಜುನಾಥ ಸಿ.
|

Updated on: Jan 17, 2025 | 11:32 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿತ್ತು. ಜನವರಿ 10 ರಂದು ಸಿನಿಮಾ ಬಿಡುಗಡೆ ಆಗಿದ್ದು, ಇಂದಿಗೆ ಸರಿಯಾಗಿ ಒಂದು ವಾರವಾಗಿದೆ. ಭಾರಿ ಬಜೆಟ್​ನ ಈ ಸಿನಿಮಾ, ಕಿಯಾರಾ ಅಡ್ವಾಣಿ, ಎಸ್​ಜೆ ಸೂರ್ಯ, ಸುನಿಲ್ ಅಂಥಹಾ ದೊಡ್ಡ ನಟರ ದಂಡು ಒಳಗೊಂಡಿತ್ತು. ‘ರೋಬೋ’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾ ನಿಡಿರುವ ಶಂಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಭಾರಿ ನಿರೀಕ್ಷೆಗಳಿಂದ ಬಿಡುಗಡೆ ಆದ ಈ ಸಿನಿಮಾ ಮೊದಲ ದಿನದ ಹೊರತಾಗಿ ಆ ನಂತರ ಒಳ್ಳೆಯ ಕಲೆಕ್ಷನ್ ಮಾಡಿಲ್ಲ.

ಮೊದಲ ದಿನ ಈ ಸಿನಿಮಾ 50 ಕೋಟಿಗೂ ಹೆಚ್ಚು ಮೊತ್ತ ಕಲೆಕ್ಷನ್ ಮಾಡಿತ್ತು. ಕೆಲವರಂತೂ ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ 86 ಕೋಟಿ ಗಳಿಸಿದೆ ಎಂಬ ಸುದ್ದಿಯನ್ನು ಸಹ ಹಂಚಿಕೊಳ್ಳಲಾಗಿತ್ತು. ಆದರೆ ಮೊದಲ ದಿನ ಹಬ್ಬಿದ ಮಿಶ್ರ ಪ್ರತಿಕ್ರಿಯೆಗಳಿಂದಾಗಿ ಸಿನಿಮಾ ಕಲೆಕ್ಷನ್ ಕುಸಿಯುತ್ತಾ ಸಾಗಿತ್ತು. ಒಂದು ವಾರದ ಬಳಿಕ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿದಿದೆ.

ಸಿನಿಮಾ ಬಿಡುಗಡೆ ಆದ ಏಳನೇ ದಿನ ಸಿನಿಮಾ ಗಳಿಕೆ ಎರಡು ಕೋಟಿಯನ್ನು ದಾಟಿಲ್ಲ. ಭಾರಿ ಬಜೆಟ್ ಸಿನಿಮಾಕ್ಕೆ ಇದು ಕಡಿಮೆ ಮೊತ್ತ ಎನ್ನಲಾಗುತ್ತದೆ. ಏಳನೇ ದಿನಕ್ಕೆ ಈ ಸಿನಿಮಾ ಹಿಂದಿ ಪ್ರದೇಶದಲ್ಲಿ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ತೆಲುಗು ಪ್ರದೇಶದಲ್ಲಿ ಸಿನಿಮಾದ ಕಲೆಕ್ಷನ್ ಈಗಾಗಲೇ ಕುಂಠಿತವಾಗಿದ್ದು, ಏಳನೇ ದಿನಕ್ಕೆ ಒಟ್ಟು ಕಲೆಕ್ಷನ್ ಎರಡು ಕೋಟಿ ದಾಟಿಲ್ಲ. ಸಿನಿಮಾ ಇನ್ನೊಂದು ವಾರದಲ್ಲಿ ತಮ್ಮ ಬಾಕ್ಸ್ ಆಫೀಸ್ ಪಯಣವನ್ನು ಮುಗಿಸುವ ದಟ್ಟ ಸಾಧ್ಯತೆ ಇದೆ.

ಇದನ್ನೂ ಓದಿ:ಗೇಮ್​ ಚೇಂಜರ್​ ಬಿಡುಗಡೆ: ಹೇಗಿದೆ ರಾಮ್ ಚರಣ್ ಸಿನಿಮಾದ ಫಸ್ಟ್​ ಹಾಫ್​?

ಒಂದು ವಾರದಲ್ಲಿ ಒಟ್ಟಾಗಿ ‘ಗೇಮ್ ಚೇಂಜರ್’ ಸಿನಿಮಾ ಗಳಿಸಿರುವುದು 100 ಕೋಟಿ ರೂಪಾಯಿಗಳು. ಕೇವಲ ಹಿಂದಿ ಪ್ರದೇಶದಲ್ಲಿ ಒಂದು ವಾರದಲ್ಲಿ ಈ ಸಿನಿಮಾ 27 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ತೆಲುಗು ಹಾಗೂ ತಮಿಳು ರಾಜ್ಯಗಳಲ್ಲಿ ನಿರೀಕ್ಷಿಸಿದ ಮಟ್ಟಿಗೆ ಕಲೆಕ್ಷನ್ ಬಂದಿಲ್ಲ. ಸಿನಿಮಾದ ಒಟ್ಟು ಬಜೆಟ್​ 300 ರಿಂದ 400 ಕೋಟಿ ಎನ್ನಲಾಗುತ್ತಿದ್ದು, ಬಾಕ್ಸ್ ಆಫೀಸ್​ನಿಂದ 100 ಕೋಟಿ ಅಷ್ಟೆ ರಿಕವರಿ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ