Ram Charan Teja: ಅಮೆರಿಕದಲ್ಲಿ ಮಿಂಚು ಹರಿಸಿದ ರಾಮ್ ಚರಣ್, ರಾಜಮೌಳಿ ಬಗ್ಗೆ ಮೆಚ್ಚುಗೆಯ ಸುರಿಮಳೆ

ಅಮೆರಿಕದಲ್ಲಿ ಆರ್​ಆರ್​ಆರ್​ (RRR) ಸಿನಿಮಾ ಮರು ಬಿಡುಗಡೆ ಆಗಲಿದ್ದು, ಸಿನಿಮಾ ಪ್ರಚಾರಾರ್ಥ ಅಮೆರಿಕದ ಟಾಕ್ ಶೋ ಒಂದರಲ್ಲಿ ಭಾಗವಹಿಸಿದ್ದ ನಟ ರಾಮ್​ಚರಣ್, ಭಾರತೀಯ ಸಿನಿಮಾ ಹಾಗೂ ರಾಜಮೌಳಿಯನ್ನು ಕೊಂಡಾಡಿದ್ದಾರೆ.

Ram Charan Teja: ಅಮೆರಿಕದಲ್ಲಿ ಮಿಂಚು ಹರಿಸಿದ ರಾಮ್ ಚರಣ್, ರಾಜಮೌಳಿ ಬಗ್ಗೆ ಮೆಚ್ಚುಗೆಯ ಸುರಿಮಳೆ
ಅಮೆರಿಕದ ಟಾಕ್ ಶೋನಲ್ಲಿ ನಟ ರಾಮ್ ಚರಣ್
Follow us
ಮಂಜುನಾಥ ಸಿ.
|

Updated on:Feb 23, 2023 | 11:26 AM

ಆಸ್ಕರ್ (Oscar) ಪ್ರಶಸ್ತಿ ಸಮಾರಂಭ ಪ್ರಾರಂಭವಾಗಲು ಇನ್ನೂ ಕೆಲವು ದಿನಗಳಿರುವಾಗಲೇ ಆರ್​ಆರ್​ಆರ್ (RRR) ಸಿನಿಮಾದ ನಾಯಕದ್ವಯರಲ್ಲಿ ಒಬ್ಬರಾದ ನಟ ರಾಮ್ ಚರಣ್ (Ram Charan) ಅಮೆರಿಕದ ನ್ಯೂಯಾರ್ಕ್​ಗೆ (New York) ಭೇಟಿ ನೀಡಿದ್ದು, ಭಾರತೀಯ ಸಿನಿಮಾ, ಆರ್​ಆರ್​ಆರ್ ಸಿನಿಮಾ, ನಾಟುನಾಟು ಹಾಡು (Natu Natu Song) ಹಾಗೂ ನಿರ್ದೇಶಕ ರಾಜಮೌಳಿ ಕುರಿತಾಗಿ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಜನಪ್ರಿಯ ಟಾಕ್​ ಶೋ ಗುಡ್ ಮಾರ್ನಿಂಗ್ ಅಮೆರಿಕದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ ರಾಮ್ ಚರಣ್. ಈ ವೇಳೆ ರಾಮ್ ಚರಣ್ ಅವರನ್ನು ಕಾಣಲು ಸ್ಟುಡಿಯೋದ ಮುಂದೆ ಭಾರಿ ಸಂಖ್ಯೆಯ ಅಭಿಮಾನಿಗಳು ಸಹ ಜಮಾಯಿಸಿದ್ದರು. ಟಾಕ್ ಶೋನಲ್ಲಿ ಆರ್​ಆರ್​ಆರ್ ಸಿನಿಮಾ ನಿರ್ದೇಶಕ ರಾಜಮೌಳಿಯನ್ನು ಭಾರತದ ಸ್ಪೀಲ್​ಬರ್ಗ್​ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಆದಷ್ಟು ಶೀಘ್ರವೇ ಅವರು ವಿಶ್ವಮಟ್ಟದ ಸಿನಿಮಾಕರ್ಮಿಯಾಗಿ ಹೆಸರುಗಳಿಸಲಿದ್ದಾರೆ ಎಂದಿದ್ದಾರೆ.

ನಾಟು ನಾಟು ಹಾಡು ಆಸ್ಕರ್​ಗೆ ನಾಮಿನೇಟ್ ಆಗಿರುವ ಬಗ್ಗೆಯೂ ಪ್ರತಿಕ್ರಿಯಿಸಿರುವ ರಾಮ್ ಚರಣ್, ಇದು ಭಾರತೀಯ ಸಿನಿಮಾಕ್ಕೆ ಸಂದ ಗೌರವ. ಎಂಟು ದಶಕಗಳ ಬಳಿಕ ಭಾರತೀಯ ಸಿನಿಮಾವನ್ನು ಅದರ ಹಾಡನ್ನು ಗೋಲ್ಡನ್ ಗ್ಲೋಬ್, ಆಸ್ಕರ್, ಕ್ರಿಟಿಕ್ ಚಾಯ್ಸ್ ಇನ್ನಿತರೆ ಪ್ರಶಸ್ತಿಗಳು ಗುರುತಿಸಿವೆ ಗೌರವಿಸುತ್ತಿವೆ. ಇದು ಭಾರತದ ಪ್ರತಿಯೊಬ್ಬ ಸಿನಿಮಾ ಕರ್ಮಿಗೂ ಸಲ್ಲಬೇಕಾದ ಗೌರವ ಎಂದಿದ್ದಾರೆ.

ಭಾರತದಲ್ಲಿ ಆರ್​ಆರ್​ಆರ್ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿ ಇನ್ನೇನು ನಾವು ನಮ್ಮ ಮುಂದಿನ ಸಿನಿಮಾಗಳ ಕಡೆಗೆ ಗಮನ ಹರಿಸಬೇಕು ಎಂದುಕೊಂಡಾಗಲೇ ಪಶ್ಚಿಮಾತ್ಯ ದೇಶಗಳು ನಮ್ಮ ಸಿನಿಮಾಕ್ಕೆ ಪ್ರತಿಕ್ರಿಯಿಸಲು ಆರಂಭಿಸಿದವು ಮಾತ್ರವಲ್ಲ, ಇದು ಇನ್ನೂ ಆರಂಭ ಎಂದು ತೋರಿಸಿದವು ಎಂದು ವಿದೇಶಗಳಲ್ಲಿ ಆರ್​ಆರ್​ಆರ್​ಗೆ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಗಳ ಬಗ್ಗೆ ರಾಮ್ ಚರಣ್ ಹೇಳಿದ್ದಾರೆ.

ನಾಟು ನಾಟು ಹಾಡು, ಗೋಲ್ಡನ್ ಗ್ಲೋಬ್​ನಲ್ಲಿ ವಿಶ್ವಪ್ರಸಿದ್ಧ ಗಾಯಕಿಯರಾದ ಲೇಡಿ ಗಾಗ, ರಿಹಾನಾ ಹಾಡಗಳನ್ನು ಹಿಂದಿಕ್ಕಿದ ಬಗ್ಗೆ ಮಾತನಾಡಿದ ರಾಮ್ ಚರಣ್, ನನಗೆ ವೈಯಕ್ತಿಕವಾಗಿ ಲೇಡಿ ಗಾಗ, ರಿಹಾನಾ ಹಾಗೂ ಟಾಪ್ ಗನ್ ಮೇವರಿಕ್ ಹಾಡುಗಳು ಬಹಳ ಇಷ್ಟ, ಆದರೆ ನಾಟು ನಾಟು ಗೆದ್ದಿದ್ದು ನಮ್ಮ ತಂತ್ರಜ್ಞರ ಬಗ್ಗೆ ಹೆಮ್ಮೆ ತಂದಿದೆ ಎಂದಿದ್ದಾರೆ.

ಆರ್​ಆರ್​ಆರ್ ಸಿನಿಮಾವು ನ್ಯೂಯಾರ್ಕ್ ಹಾಗೂ ಅಮೆರಿಕದ ಇನ್ನಿತರೆ ಪ್ರಮುಖ ನಗರಗಳಲ್ಲಿ ಮಾರ್ಚ್ 3 ರಿಂದ ಮರು ಬಿಡುಗಡೆ ಆಗಲಿದೆ. ಇದರ ಪ್ರಚಾರಾರ್ಥವಾಗಿ ರಾಮ್ ಚರಣ್ ಅಮೆರಿಕಕ್ಕೆ ತೆರಳಿದ್ದಾರೆ. ಕೆಲವು ಟಾಕ್ ಶೋಗಳಲ್ಲಿ ಸಹ ಭಾಗವಹಿಸಲಿದ್ದಾರೆ.

ಆರ್​ಆರ್​ಆರ್ ಸಿನಿಮಾ ಈ ಹಿಂದೆ ಅಮೆರಿಕದಲ್ಲಿ ಬಿಡುಗಡೆ ಆಗಿ ಸುಮಾರು 17 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ನೆಟ್​ಫ್ಲಿಕ್ಸ್​ ಮೂಲಕವೂ ಅಮೆರಿಕ ಸೇರಿದಂತೆ ಹಲವು ದೇಶಗಳ ಸಿನಿಮಾ ಪ್ರೇಮಿಗಳನ್ನು ಸೆಳೆದಿತ್ತು. ಇದೀಗ ಮಾರ್ಚ್ 3 ರಂದು ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಮತ್ತೊಮ್ಮೆ ದಾಖಲೆ ಬರೆಯಲು ಸಜ್ಜಾಗಿದೆ.

Published On - 11:23 am, Thu, 23 February 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್