ಅನೇಕ ಹೀರೋ ಹಾಗೂ ಹೀರೋಯಿನ್ಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೇ ಕಾರಣಕ್ಕೆ ಅವರು ಹೆಚ್ಚು ಹೊತ್ತು ಮೊಬೈಲ್ನಲ್ಲಿಯೇ ಸಮಯ ಕಳೆಯುತ್ತಾರೆ. ಆದರೆ, ಕೆಲವೇ ಕೆಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಹಾಗೂ ಮೊಬೈಲ್ನ ಕಡಿಮೆ ಬಳಕೆ ಮಾಡುತ್ತಾರೆ. ಈ ಸಾಲಿನಲ್ಲಿ ರಾಮ್ ಚರಣ್ ಕೂಡ ಇದ್ದಾರೆ. ಅವರು ಅದೆಷ್ಟು ಕಡಿಮೆ ಮೊಬೈಲ್ ಬಳಕೆ ಮಾಡುತ್ತಾರೆ ಎಂದರೆ ಅವರಿಗೆ ಮೆಸೇಜ್ ಮಾಡಿದ ಬಳಿಕ ಅದನ್ನು ನೋಡಿ ಎನ್ನಲು ಫೋನ್ ಮಾಡಬೇಕು.
ರಾಮ್ ಚರಣ್ ಅವರ ಸೋದರ ಸಂಬಂಧಿ ವರುಣ್ ತೇಜ್ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ರಾಮ್ ಚರಣ್ ಹಾಗೂ ವರುಣ್ ತೇಜ್ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇಬ್ಬರೂ ಆಗಾಗ ಭೇಟಿ ಆಗುತ್ತಾ ಇರುತ್ತಾರೆ. ರಾಮ್ ಚರಣ್ ಅವರನ್ನು ವರುಣ್ ಅತಿ ಹತ್ತಿರದಿಂದ ಕಂಡಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಅವರು ಹಲವು ವಿಚಾರ ರಿವೀಲ್ ಮಾಡಿದ್ದಾರೆ. ರಾಮ್ ಚರಣ್ ಸರಿಯಾಗಿ ಮೆಸೇಜ್ಗಳನ್ನೂ ನೋಡುವುದಿಲ್ಲ ಎಂದಿದ್ದಾರೆ ವರುಣ್.
‘ನನ್ನ ಸಿನಿಮಾದ ಟೀಸರ್ ಅಥವಾ ಟ್ರೇಲರ್ ರಿಲೀಸ್ ಆದರೆ ನಾನು ಮೊದಲು ರಾಮ್ ಚರಣ್ ಅವರಿಗೆ ಕರೆ ಮಾಡಬೇಕು. ನಾನು ಮೆಸೇಜ್ ಕಳುಹಿಸಿದ್ದೇನೆ ನೋಡಿ ಎಂದು ಹೇಳಬೇಕು. ನಾನು ಕೇವಲ ಮೆಸೇಜ್ ಕಳಿಸಿ ಅವರಿಂದ ಉತ್ತರ ಬರುತ್ತದೆ ಎಂದು ನಿರೀಕ್ಷಿಸಬಾರದು’ ಎಂದಿದ್ದಾರೆ ವರುಣ್ ತೇಜ್. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಎನಿಸಿದೆ.
ರಾಮ್ ಚರಣ್ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹೊಂದಿದ್ದಾರೆ. ಆದರೆ, ಅದರಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ರಾಮ್ ಚರಣ್ ಅವರು ಈವರೆಗೆ ಇನ್ಸ್ಟಾಗ್ರಾಮ್ನಲ್ಲಿ 307 ಪೋಸ್ಟ್ಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಅವರಿಗೆ ಎರಡೂವರೆ ಕೋಟಿ ಹಿಂಬಾಲಕರು ಇದ್ದಾರೆ.
ಇದನ್ನೂ ಓದಿ: ಪ್ರೀತಿ ವಿಚಾರ ಹೇಳದ ವರುಣ್ ತೇಜ್ ಮೇಲೆ ಚಿರಂಜೀವಿಗೆ ಇನ್ನೂ ಇದೆ ಕೋಪ
ವರುಣ್ ತೇಜ್ ಅವರು ‘ಮಟ್ಕಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ನವೆಂಬರ್ 14ರಂದು ಸಿನಿಮಾ ರಿಲೀಸ್ ಆಗಲಿದೆ. ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಾದ ಬಳಿಕ ಅವರು ‘RC 16’ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.