
ರಾಮ್ ಗೋಪಾಲ್ ವರ್ಮಾ ಸದಾ ವಿವಾದದ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅವರು ಸ್ಟಾರ್ ನಟರ ವಿರುದ್ಧ ಹೇಳಿಕೆ ಕೊಡುವುದರಲ್ಲಿ ಎತ್ತಿದೆ ಕೈ. ಇದರ ಜತೆಗೆ ಸಾಕಷ್ಟು ಹೀರೋಯಿನ್ಗಳ ಜತೆಯೂ ಆರ್ಜಿವಿ ಕ್ಲೋಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಫೋಟೋಗಳನ್ನು ಅವರು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈಗ ಅವರು ಮತ್ತೆ ಅಂತಹುದೇ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ತೆಲುಗು ಬಿಗ್ ಬಾಸ್ ಮಾಜಿ ಸ್ಪರ್ಧಿ ಅರಿಯಾನಾ ಗ್ಲೋರಿ ಜತೆಗೆ ರಾಮ್ ಗೋಪಾಲ್ ವರ್ಮಾ ಜಿಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅರಿಯಾನಾ ಜತೆ ಇರುವ ಬೋಲ್ಡ್ ಫೋಟೋಗಳನ್ನು ಆರ್ಜಿವಿ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ, ‘ಅರಿಯಾನಾ ಟಾಕ್ಸ್ ಬೋಲ್ಡ್ ವಿತ್ ಆರ್ಜಿವಿ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಟೈಟಲ್ಗೆ ತಕ್ಕಂತೆ ಫೋಟೋಗಳು ಕೂಡ ಇವೆ.
ಅರಿಯಾನಾ ಅವರ ವಿಶೇಷ ಸಂದರ್ಶನವನ್ನು ಆರ್ಜಿವಿ ಮಾಡಿದ್ದಾರಂತೆ. ಈ ಸಂದರ್ಶನದಲ್ಲಿ ಅವರು ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂದರ್ಶನ ಶೀಘ್ರದಲ್ಲೇ ಪ್ರಸಾರವಾಗಲಿದೆ. ಇನ್ನು, ಶೀಘ್ರದಲ್ಲೇ ಆರ್ಜಿವಿ ಚಿತ್ರಕ್ಕೆ ಅರಿಯಾನಾ ನಾಯಕಿಯಾಗಲಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.
ಅಮಿತಾಭ್ ಬಚ್ಚನ್ ಹಾಗೂ ಆರ್ಜಿವಿ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಮೂಡಿ ಬರಲಿದೆ ಎನ್ನಲಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ಹಾಗೂ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಅದು ಇನ್ನೂ ಹಾಗೆಯೇ ಇದೆ ಅನ್ನೋದು ವಿಶೇಷ. ಇದರ ಪರಿಣಾಮವಾಗಿ ಈಗ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡೋಕೆ ರೆಡಿ ಆಗಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಇನ್ನು, ವರ್ಮಾ ಲಾಕ್ಡೌನ್ನಲ್ಲೇ ಹೊಸ ಮುಖಗಳನ್ನು ಇಟ್ಟುಕೊಂಡು ಚಿತ್ರಗಳನ್ನು ಮಾಡುತ್ತಿದ್ದಾರೆ. ಅವರ ಎಂಟರ್ ದಿ ಗರ್ಲ್ ಡ್ರಾಗನ್ ಮತ್ತು ಡೇಂಜರಸ್ ಸಿನಿಮಾಗಳು ತೆರೆಗೆಬರೋಕೆ ಸಿದ್ಧವಾಗಿದೆ.
ಇದನ್ನೂ ಓದಿ: ಅಮಿತಾಭ್-ರಾಮ್ ಗೋಪಾಲ್ ವರ್ಮ ಕಾಂಬಿನೇಷನ್ನಲ್ಲಿ ಬರುತ್ತಿದೆ ಹೊಸ ಸಿನಿಮಾ
Published On - 4:09 pm, Wed, 16 June 21