ಅಮಿತಾಭ್​-ರಾಮ್​ ಗೋಪಾಲ್​ ವರ್ಮ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ

ಅಮಿತಾಭ್​-ರಾಮ್​ ಗೋಪಾಲ್​ ವರ್ಮ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ
ಅಮಿತಾಭ್​-ರಾಮ್​ ಗೋಪಾಲ್​ ವರ್ಮ

ಈ ಹೊಸ ಪ್ರಾಜೆಕ್ಟ್​ ಸೆಟ್ಟೇರೋಕೆ ಕೊಂಚ ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ. ಅಮಿತಾಭ್​ ಸದ್ಯ, ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ‘ಈ ಪ್ರಾಜೆಕ್ಟ್​ಗಳು ಪೂರ್ಣಗೊಂಡ ನಂತರದಲ್ಲಿ ಅವರು ಹೊಸ ಪ್ರಾಜೆಕ್ಟ್​ ಕೆಲಸ ಆರಂಭಿಸುತ್ತಾರಂತೆ.

Rajesh Duggumane

|

Jun 06, 2021 | 6:25 PM

ನಿರ್ದೇಶಕ ರಾಮ್ ಗೋಪಾಲ್​ ವರ್ಮ ಹಾಗೂ ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಅದು ಇನ್ನೂ ಹಾಗೆಯೇ ಇದೆ ಅನ್ನೋದು ವಿಶೇಷ. ಇದರ ಪರಿಣಾಮವಾಗಿ ಈಗ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡೋಕೆ ರೆಡಿ ಆಗಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

‘ನಿಶಬ್ದ’, ‘ರಾಮ್​ ಗೋಪಾಲ್​ ವರ್ಮ ಕಿ ಆಗ್’​, ‘ಸರ್ಕಾರ್’, ‘ಸರ್ಕಾರ್​ 2’ ಮತ್ತು ‘ಸರ್ಕಾರ್​ 3’ ಚಿತ್ರಗಳಲ್ಲಿ ಆರ್​ಜಿವಿ ಹಾಗೂ ಅಮಿತಾಭ್ ಒಟ್ಟಾಗಿ ಕೆಲಸ ಮಾಡಿದ್ದರು. ಸರ್ಕಾರ್​ 3 ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಇದಾದ ನಂತರ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡಿಲ್ಲ. ಈಗ ಟಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿರುವ ಹೊಸ ವಿಚಾರ ಎಂದರೆ, ಅಮಿತಾಭ್​ ಹಾಗೂ ಆರ್​ಜಿವಿ​ ಮತ್ತೆ ಒಂದಾಗುತ್ತಿದ್ದಾರಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಅಂದಹಾಗೆ, ಈ ಹೊಸ ಪ್ರಾಜೆಕ್ಟ್​ ಸೆಟ್ಟೇರೋಕೆ ಕೊಂಚ ಸಮಯ ಹಿಡಿಯಲಿದೆ ಎನ್ನಲಾಗುತ್ತಿದೆ. ಅಮಿತಾಭ್​ ಸದ್ಯ, ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ‘ಚೆಹ್ರೆ’ ಮತ್ತು ‘ಜುಂಡ್’​ ತೆರೆಗೆ ಬರೋಕೆ ಸಿದ್ಧವಾಗಿದೆ. ‘ಬ್ರಹ್ಮಾಸ್ತ್ರ, ‘ಮೇ ಡೆ’, ‘ಗುಡ್​ ಬೈ’ ಶೂಟಿಂಗ್​ ಹಂತದಲ್ಲಿವೆ. ಈ ಪ್ರಾಜೆಕ್ಟ್​ಗಳು ಪೂರ್ಣಗೊಂಡ ನಂತರದಲ್ಲಿ ಅವರು ಹೊಸ ಪ್ರಾಜೆಕ್ಟ್​ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ವರ್ಮಾ ಲಾಕ್​ಡೌನ್​ನಲ್ಲೇ ಹೊಸ ಮುಖಗಳನ್ನು ಇಟ್ಟುಕೊಂಡು ಚಿತ್ರಗಳನ್ನು ಮಾಡುತ್ತಿದ್ದಾರೆ. ಅವರ ಎಂಟರ್​ ದಿ ಗರ್ಲ್​ ಡ್ರಾಗನ್​ ಮತ್ತು ಡೇಂಜರಸ್​ ಸಿನಿಮಾಗಳು ತೆರೆಗೆಬರೋಕೆ ಸಿದ್ಧವಾಗಿದೆ.

ಕೊವಿಡ್​ ಕಾರಣಕ್ಕೆ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಅಮಿತಾಭ್ ಯಾರಿಂದಲೂ ದೇಣಿಗೆ ಸಂಗ್ರಹಿಸದೆ  ಸ್ವಂತ ಹಣದಲ್ಲಿ ಎಲ್ಲರಿಗೂ ಸಹಾಯ ಮಾಡಿದ್ದಾರೆ. ಅಮಿತಾಭ್​ ಕೆಲಸಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಪತ್ನಿ ಜಯಾ ಬಗ್ಗೆ ಅಮಿತಾಭ್​ ಬಚ್ಚನ್​ ಬಹಿರಂಗವಾಗಿ ಹೇಳಿಕೊಂಡ 5 ವಿಶೇಷ ಮಾತುಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada