AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ರಮ್ಯಾ ಕೃಷ್ಣ ಆಸ್ತಿ ಎಷ್ಟು?

Ramya Krishna: ಹಲವು ದಶಕಗಳಿಂದಲೂ ಪ್ಯಾನ್ ಇಂಡಿಯಾ ನಟಿಯಾಗಿರುವ ರಮ್ಯಾ ಕೃಷ್ಣ. ಚಿತ್ರರಂಗಕ್ಕೆ ಬಂದು ನಾಲ್ಕು ದಶಕಗಳ ಬಳಿಕವೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಅಂದಹಾಗೆ ರಮ್ಯಾ ಕೃಷ್ಣ ಪಡೆವ ಸಂಭಾವನೆ ಎಷ್ಟು? ಅವರ ಆಸ್ತಿ ಮೌಲ್ಯ ಎಷ್ಟು?

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿರುವ ರಮ್ಯಾ ಕೃಷ್ಣ ಆಸ್ತಿ ಎಷ್ಟು?
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 02, 2023 | 6:15 PM

ನಟಿ ರಮ್ಯಾ ಕೃಷ್ಣ (Ramya Krishnan) ಅವರಿಗೆ ಸಖತ್ ಬೇಡಿಕೆ ಇದೆ. ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾದಲ್ಲಿ ಕಥಾ ನಾಯಕ ರಜನಿ ಪತ್ನಿ ಪಾತ್ರದಲ್ಲಿ ಗಮನ ಸೆಳೆದರು. ಈ ಚಿತ್ರ 650 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕನ್ನಡ ಮಂದಿಗೂ ಚಿರಪರಿಚಿತರಾಗಿರುವ ರಮ್ಯಾ ಕೃಷ್ಣ ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಅವರು ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. 40 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ.

ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದ ನಟಿ

80ರ ದಶಕದಿಂದ ರಮ್ಯಾ ಕೃಷ್ಣ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹೀರೋಯಿನ್ ಆಗಿ, ವಿಲನ್ ಆಗಿ ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ‘ಬಾಹುಬಲಿ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ಗಮನ ಸೆಳೆಯಿತು. ಶಿವಗಾಮಿ ಆಗಿ ಮಿಂಚಿದರು. 2001ರಲ್ಲಿ ರಿಲೀಸ್ ಆದ ‘ನೀಲಾಂಬರಿ’ ಸಿನಿಮಾ ಯಶಸ್ಸು ಕಂಡಿತು. ಹಾಹರ್ ಶೈಲಿಯಲ್ಲಿ ಸಿನಿಮಾ ಮೂಡಿಬಂತು. 2003ರಲ್ಲಿ ಬಿಡುಗಡೆ ಆದ ಉಪೇಂದ್ರ ನಟನೆಯ ‘ರಕ್ತ ಕಣ್ಣೀರು’ ಚಿತ್ರದಲ್ಲಿ ಅವರ ನಟನೆ ಗಮನ ಸೆಳೆಯಿತು. ‘ಮಾಣಿಕ್ಯ’ ಚಿತ್ರದಲ್ಲಿ ಸುದೀಪ್ಗೆ, ‘ಅಂಜನಿಪುತ್ರ’ ಚಿತ್ರದಲ್ಲಿ ಪುನೀತ್ ತಾಯಿ ಆಗಿ ಅವರು ನಟಿಸಿದರು.

ಇದನ್ನೂ ಓದಿ:Mahesh Babu: ‘ಗುಂಟೂರು ಖಾರಂ’ ಚಿತ್ರದಲ್ಲಿ ಮಹೇಶ್​ ಬಾಬು ಜೊತೆ ನಟಿಸ್ತಾರಾ ಶಿವಗಾಮಿ ಅಲಿಯಾಸ್ ರಮ್ಯಾ ಕೃಷ್ಣನ್​?

ಇತ್ತೀಚೆಗೆ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ ರಮ್ಯಾ ಕೃಷ್ಣ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಬಣ್ಣ ಹಚ್ಚಿದ್ದಾರೆ ಅವರು. ಸದ್ಯ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಬಾಬು ತಾಯಿ ಪಾತ್ರವನ್ನು ಅವರು ಮಾಡಲಿದ್ದಾರೆ ಎನ್ನಲಾಗಿದೆ. ತ್ರಿವಿಕ್ರಂ ಶ್ರೀನಿವಾಸ್ ಈ ಚಿತ್ರದ ನಿರ್ದೇಶಕ.

ಕಿರುತೆರೆಯಲ್ಲೂ ರಮ್ಯಾ ಕೃಷ್ಣ ಅವರು ಫೇಮಸ್ ಆಗಿದ್ದಾರೆ. 2013-17ರವರೆಗೆ ಪ್ರಸಾರ ಕಂಡ ‘ವಂಶಂ’ ಧಾರಾವಾಹಿ ಸನ್ ಟಿವಿಯಲ್ಲಿ ಪ್ರಸಾರ ಕಂಡಿತು. ಈ ಧಾರಾವಾಹಿ ಸಾವಿರಕ್ಕೂ ಹೆಚ್ಚು ಎಪಿಸೋಡ್ ಪ್ರಸಾರ ಕಂಡಿದೆ ಅನ್ನೋದು ವಿಶೇಷ.

ಒಟ್ಟು ಆಸ್ತಿ ಎಷ್ಟು?

ರಮ್ಯಾ ಕೃಷ್ಣ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅವರು ಪ್ರತಿ ಚಿತ್ರಕ್ಕೆ 2-3 ಕೋಟಿ ರೂಪಾಯಿ ಪಡೆಯಲಿದ್ದಾರೆ ಎನ್ನಲಾಗಿದೆ. ಅವರ ಒಟ್ಟೂ ಆಸ್ತಿ 98 ಕೋಟಿ ರೂಪಾಯಿ. ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಲವು ಬ್ರ್ಯಾಂಡ್ಗಳಿಗೆ ಅವರು ರಾಯಭಾರಿ ಕೂಡ ಹೌದು.

ರಮ್ಯಾ ಕೃಷ್ಣ ಕುಟುಂಬದ ಬಗ್ಗೆ

ಕೃಷ್ಣ ವಂಶಿ ಅವರನ್ನು ರಮ್ಯಾ ಕೃಷ್ಣ 2003ರಲ್ಲಿ ಮದುವೆ ಆದರು. ಅವರು ನಿರ್ದೇಶಕರು, ನಿರ್ಮಾಪಕರು. ರಮ್ಯಾಗೆ ಓರ್ವ ಮಗ. ಅವರಿಗೆ ರಿತ್ವಿಕ್ ವಂಶಿ ಎಂದು ಹೆಸರು ಇಡಲಾಗಿದೆ. ರಮ್ಯಾ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
ಗರ್ಭವತಿಯಾದ ಹೆಣ್ಣಿನ ಸಂತೋಷ ಕುಟುಂಬಕ್ಕೆ ಸರ್ವಶುಭಮಂಗಳ ಹೇಗೆ?
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
Daily Horoscope: ಈ ರಾಶಿಯವರು ಆತುರದಲ್ಲಿ ಏನನ್ನಾದರೂ ಮಾಡಲು ಹೋಗದಿರಿ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಪ್ರೆಸಿಡೆನ್ಸಿ ಕಾಲೇಜಿಗೆ ಭೇಟಿ ನೀಡಿದ ‘ಎಕ್ಸ್ ಆ್ಯಂಡ್ ವೈ’ ಚಿತ್ರತಂಡ
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು