AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WWE ರಸಲ್​ ಮೇನಿಯಾದಲ್ಲಿ ರಾಣಾ ದಗ್ಗುಬಾಟಿ; ಭಾರತದಿಂದ ತೆರಳಿದ ಮೊದಲ ಸೆಲೆಬ್ರಿಟಿ

‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ 41’ ಪಂದ್ಯಗಳು ಅದ್ದೂರಿಯಾಗಿ ನಡೆದಿವೆ. ಇದರಲ್ಲಿ ನಟ ರಾಣಾ ದಗ್ಗುಬಾಟಿ ಕೂಡ ಭಾಗಿಯಾಗಿದ್ದಾರೆ. ಅವರಿಗೆ ಈ ವಿಶೇಷ ಅವಕಾಶ ಸಿಕ್ಕಿದೆ. ನೆಟ್​ಫ್ಲಿಕ್ಸ್ ಮೂಲಕ ಅವರು ಈ ಅವಕಾಶ ಪಡೆದಿದ್ದಾರೆ. ರಾಣಾ ದಗ್ಗುಬಾಟಿ ಅವರ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.

WWE ರಸಲ್​ ಮೇನಿಯಾದಲ್ಲಿ ರಾಣಾ ದಗ್ಗುಬಾಟಿ; ಭಾರತದಿಂದ ತೆರಳಿದ ಮೊದಲ ಸೆಲೆಬ್ರಿಟಿ
Rana Daggubati
ಮದನ್​ ಕುಮಾರ್​
|

Updated on: Apr 21, 2025 | 6:24 PM

Share

ಡಬ್ಲ್ಯುಡಬ್ಲ್ಯುಇ (WWE) ಪಂದ್ಯಗಳ ಬಗ್ಗೆ ಇಡೀ ಜಗತ್ತಿನಲ್ಲಿ ಕ್ರೇಜ್ ಇದೆ. ವಿಶೇಷವಾಗಿ ಮಕ್ಕಳು ಈ ಶೋ ಹೆಚ್ಚು ನೋಡುತ್ತಾರೆ. ಹಾಗಂತ ದೊಡ್ಡವರಿಗೆ ಕ್ರೇಜ್ ಇಲ್ಲ ಅಂತೇನಲ್ಲ. ವಯಸ್ಕರು ಕೂಡ ಡಬ್ಲ್ಯುಡಬ್ಲ್ಯುಇ ಕಾದಾಟ ನೋಡಿ ಎಂಜಾಯ್ ಮಾಡುತ್ತಾರೆ. ದಶಕಗಳಿಂದ ಜನರನ್ನು ರಂಜಿಸುತ್ತ ಬಂದಿರುವ ಈ ಕ್ರೀಡೆಗೆ ಈಗಲೂ ಅಷ್ಟೇ ಜನಪ್ರಿಯತೆ ಇದೆ. ಇತ್ತೀಚೆಗೆ ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ 41’ (WWE Wrestlemania 41) ಪಂದ್ಯಗಳು ನಡೆದಿವೆ. ಈ ಇವೆಂಟ್​ಗೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ಅವರು ಹಾಜರಿ ಹಾಕಿದ್ದಾರೆ. ಈ ಸಂದರ್ಭದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.

ಪ್ರತಿವರ್ಷ ‘ರಸಲ್​ ಮೇನಿಯಾ’ ಪಂದ್ಯಗಳು ನಡೆಯುತ್ತವೆ. ಈ ಬಾರಿ 41ನೇ ಸಾಲಿನ ಹಣಾಹಣಿ ನಡೆದಿದೆ. ಈ ಪಂದ್ಯಗಳನ್ನು ನೋಡಲು ಟಾಲಿವುಡ್ ಹೀರೋ, ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ಹೋಗಿದ್ದಾರೆ. ಭಾರತದಿಂದ ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ’ ನೋಡಲು ಹೋದ ಮೊದಲ ಸೆಲೆಬ್ರಿಟಿ ಎಂಬ ಖ್ಯಾತಿಗೆ ರಾಣಾ ದಗ್ಗುಬಾಟಿ ಅವರು ಪಾತ್ರರಾಗಿದ್ದಾರೆ.

ಇದನ್ನೂ ಓದಿ
Image
ನಟ ರಾಣಾ ದಗ್ಗುಬಾಟಿ, ವೆಂಕಟೇಶ್ ವಿರುದ್ಧ ಕ್ರಿಮಿನಲ್ ಕೇಸು ದಾಖಲು
Image
ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು
Image
ಕುಂದಾಪುರಕ್ಕೆ ಬಂದು ರಿಷಬ್ ಬಳಿ ರಾಜ್​ಕುಮಾರ್ ಸಿನಿಮಾ ಡೈಲಾಗ್​ ಕಲಿತ ರಾಣಾ
Image
ಶಿವಾಜಿ ಕುರಿತ ಹಿಂದಿ ಸಿನಿಮಾದಲ್ಲಿ ದಕ್ಷಿಣ ಸ್ಟಾರ್ ನಟ ಔರಂಗಾಜೇಬ್

ಅಷ್ಟಕ್ಕೂ ರಾಣಾ ದಗ್ಗುಬಾಟಿ ಅವರು ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ’ ನೋಡಲು ಹೋಗಿದ್ದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ. ಇದೇ ಮೊದಲ ಬಾರಿಗೆ ನೆಟ್​ಫ್ಲಿಕ್ಸ್​ನಲ್ಲಿ ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ’ ಪ್ರಸಾರ ಆಗುತ್ತಿದೆ. 10 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಕಾರಣದಿಂದ ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ’ ಇವೆಂಟ್​ನಲ್ಲಿ ನೆಟ್​ಫ್ಲಿಕ್ಸ್ ಕಾರ್ಯಕ್ರಮಗಳ ಪ್ರಮೋಷನ್ ಮಾಡಲಾಗಿದೆ.

View this post on Instagram

A post shared by Netflix India (@netflix_in)

ರಾಣಾ ದಗ್ಗುಬಾಟಿ ಅವರು ‘ರಾಣಾ ನಾಯ್ಡು’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗುತ್ತಿದೆ. ಇದರ ಪ್ರಚಾರಕ್ಕಾಗಿ ರಾಣಾ ದಗ್ಗುಬಾಟಿ ಅವರು ಲಾಸ್ ವೇಗಸ್ ನಗರಕ್ಕೆ ತೆರಳಿ ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ’ ಇವೆಂಟ್​ನಲ್ಲಿ ಭಾಗಿಯಾಗಿದ್ದಾರೆ. ಇದು ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿಯ ಹುಡುಕಿ ಕೆರಾಡಿಗೆ ಬಂದ ರಾಣಾ ದಗ್ಗುಬಾಟಿ: ಚಿತ್ರಗಳು

ಈ ಅವಕಾಶದ ಬಗ್ಗೆ ರಾಣಾ ದಗ್ಗುಬಾಟಿ ಅವರು ಮಾತನಾಡಿದ್ದಾರೆ. ‘ಡಬ್ಲ್ಯುಡಬ್ಲ್ಯುಇ ರಸಲ್​ ಮೇನಿಯಾ 41’ ಇವೆಂಟ್​ನಲ್ಲಿ ಭಾಗಿಯಾಗಿರುವುದು ಒಂದು ವಿಶೇಷ ಅನುಭವ. ಡಬ್ಲ್ಯುಡಬ್ಲ್ಯುಇ ನಮ್ಮೆಲ್ಲರ ಬಾಲ್ಯದ ಭಾಗವಾಗಿತ್ತು. ಈಗ ನೇರವಾಗಿ ನೋಡುತ್ತಾ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್​ದೇನೆ. ರಾಣಾ ನಾಯ್ಡು ಮತ್ತು ಡಬ್ಲ್ಯುಡಬ್ಲ್ಯುಇ ನೆಟ್​ಫ್ಲಿಕ್ಸ್​ನಲ್ಲಿ ಒಟ್ಟಿಗೆ ಪ್ರಸಾರ ಆಗುತ್ತಿರುವುದರಿಂದ ಒಂದು ಪೂರ್ಣತೆಯ ಭಾವ ಮೂಡಿದೆ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.