ತಮ್ಮದೇ ನಿರ್ಧಾರಗಳಿಂದ ಜೋಕರ್ ರೀತಿ ಕಾಣಿಸಿದ ರಾಶಿಕಾ ಶೆಟ್ಟಿ

ಡಿಸೆಂಬರ್ 15ರ ಎಪಿಸೋಡ್​ನಲ್ಲಿ ಈ ಘಟನೆಗಳು ನಡೆದವು. ರಾಶಿಕಾ ಶೆಟ್ಟಿ ಅವರು ಸೂರಜ್​ನ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಹೆಸರು ತೆಗೆದುಕೊಂಡರು. ಈ ವೇಳೆ ಅವರು ಕೊಟ್ಟ ಕಾರಣವೇ ಈಗ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಅವರು ಆಡಿದ ಮಾತಿನಿಂದ ಅವರು ಜೋಕರ್ ರೀತಿಯಲ್ಲಿ ಕಾಣಿಸಿದ್ದಾರೆ.

ತಮ್ಮದೇ ನಿರ್ಧಾರಗಳಿಂದ ಜೋಕರ್ ರೀತಿ ಕಾಣಿಸಿದ ರಾಶಿಕಾ ಶೆಟ್ಟಿ
ರಾಶಿಕಾ
Edited By:

Updated on: Dec 16, 2025 | 10:02 AM

ರಾಶಿಕಾ ಶೆಟ್ಟಿ ಅವರು ಈ ವಾರದ ಕ್ಯಾಪ್ಟನ್ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅವರು ಕ್ಯಾಪ್ಟನ್ ಆಗಿದ್ದನ್ನು ಕೆಲವರು ಒಪ್ಪಿಕೊಂಡಿಲ್ಲ ಎಂಬುದು ಬೇರೆ ವಿಷಯ. ಟಾಸ್ಕ್​ನಲ್ಲಿ ಮೋಸ ಆಗಿದೆ ಎಂದು ಅನೇಕರು ಹೇಳಿದ್ದರು. ಆದರೆ, ಇದನ್ನು ಅವರು ಒಪ್ಪಿಕೊಂಡಿಲ್ಲ. ಈಗ ಅವರು ಆಡಿದ ಒಂದು ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಈ ಮಾತಿನಿಂದ ಜೋಕರ್ ರೀತಿಯಲ್ಲಿ ಕಾಣಿಸಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಷ್ಟಕ್ಕೂ ಆಗಿದ್ದು ಏನು? ಇಲ್ಲಿದೆ ವಿವರ.

ಡಿಸೆಂಬರ್ 15ರ ಎಪಿಸೋಡ್​ನಲ್ಲಿ ಈ ಘಟನೆಗಳು ನಡೆದವು. ರಾಶಿಕಾ ಶೆಟ್ಟಿ ಅವರು ಸೂರಜ್​ನ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಮಾಡುವ ಪ್ರಕ್ರಿಯೆಗೆ ಹೆಸರು ತೆಗೆದುಕೊಂಡರು. ಈ ವೇಳೆ ಅವರು ಕೊಟ್ಟ ಕಾರಣವೇ ಈಗ ಚರ್ಚೆಗೆ ಗ್ರಾಸವಾಗಿದೆ. ರಾಶಿಕಾ ಅವರು ಆಡಿದ ಮಾತಿನಿಂದ ಅವರು ಜೋಕರ್ ರೀತಿಯಲ್ಲಿ ಕಾಣಿಸಿದ್ದಾರೆ.

ರಾಶಿಕಾ ಅವರು ಸೂರಜ್​ನ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಮಾಡೋದಾಗಿ ಹೇಳಿದ್ದಾರೆ. ‘ಕಳೆದ ವಾರ ಅವರು ಕ್ಯಾಪ್ಟನ್ ಆಗಬೇಕಿತ್ತು. ಆದರೆ, ಚೈತ್ರಾ ಅವರು ಮಾಡಿದ ತಪ್ಪಿನಿಂದ ಅವರಿಗೆ ಆ ಅವಕಾಶ ತಪ್ಪಿತು. ಹೀಗಾಗಿ, ಈ ಬಾರಿ ಅವರನ್ನು ನಾನು ಆಯ್ಕೆ ಮಾಡುತ್ತಿದ್ದೇನೆ’ ಎಂದು ಹೇಳಿದರು. ಇದನ್ನು ನೋಡಿ ಅನೇಕರಿಗೆ ನಗು ಬಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಇದನ್ನೂ ಓದಿ: ಅಕ್ಕ-ತಂಗಿ ಬಳಿ ಹೀಗೆ ಮಾತಾಡ್ತಿದ್ರಾ? ಸೂರಜ್ ಮಾತು ರಾಶಿಕಾ ಎದೆಗೆ ಚುಚ್ತು

ಏಕೆಂದರೆ ಕಳೆದ ವಾರ ಸೂರಜ್ ಅವರು ಇದೇ ವಿಷಯವನ್ನು ಇಟ್ಟುಕೊಂಡು ರಾಶಿಕಾ ಬಳಿ ವಾದ ಮಾಡಿದ್ದರು. ಆಗ ರಾಶಿಕಾ ಅವರು ಇದನ್ನು ಒಪ್ಪಿಲ್ಲ. ‘ನಾನು ಆಡಿ ಕ್ಯಾಪ್ಟನ್ ಆಗಿರೋದು. ಎಲ್ಲಿಯೂ ತಪ್ಪು ನಡೆದಿಲ್ಲ’ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಆ ನಿರ್ಧಾರ ಬದಲಾಗಿದೆ ಎಂಬುದು ಅನೇಕರಿಗೆ ಅಚ್ಚರಿ ತಂದಿದೆ. ಅನೇಕರು ರಾಶಿಕಾನ ಜೋಕರ್ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.